ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಿಢೀರ್ ಪ್ರತ್ಯಕ್ಯವಾಗಿರುವ ಸಂಸದ ಅನಂತ ಕುಮಾರ್ ಹೆಗಡೆ, ಪದೇ-ಪದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ, ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿದ್ದ ಹಗಡೆ, ಇದೀಗ, ಸಿದ್ದರಾಮುಲ್ಲಾ ಖಾನ್ ಎಂದಿದ್ದಾರೆ. “ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ” ಎಂದು ಆರೋಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅವರು ಮಾತನಾಡಿದರು. “ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಶಾಸಕರಿಗೆ ಕೊಡಲು ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ” ಎಂದಿದ್ದಾರೆ.
” ಹಿಂದುಳಿದವರು, ಎಸ್ಸಿ, ಎಸ್ಟಿ ವರ್ಗದವರಿಗೆ ನೀಡಿದ್ದ 11,000 ಕೋಟಿ ರೂ. ನಾಪತ್ತೆಯಾಗಿದೆ. ಕೇಂದ್ರ ಸರ್ಕಾರ ತೆರಿಗೆ ಹಣ ಕೊಟ್ಟಿಲ್ಲವೆಂದು ಹೇಳುತ್ತಾರೆ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳಕ್ಕೆ ಇಲ್ಲದ ವೇದನೆ ಇವರಿಗೆ ಯಾಕೆ” ಎಂದು ಪ್ರಶ್ನಿಸಿದ್ದಾರೆ.
“ಉಳಿದ ರಾಜ್ಯಗಳಿಗೆ ಎಲ್ಲ ಸರಿ ಇರುವಾಗ, ಸಿದ್ದರಾಮುಲ್ಲಾ ಖಾನ್‌ಗೆ ಯಾಕೆ ತೊಂದರೆ? ದೇಶದಲ್ಲಿ ಶೇ.99.9 ರಷ್ಟು ಹಿಂದುಗಳು ತೆರಿಗೆ ಕಟ್ಟುತ್ತಾರೆ. ನಮ್ಮ ಹಣ ತೆಗೆದುಕೊಂಡು ಹೋಗಿ ಮಸೀದಿ, ಚರ್ಚ್‌ಗೆ ಯಾಕೆ ಕೊಟ್ಟಿದ್ದೀರಿ? ನಮ್ಮ ತೆರಿಗೆ ಹಣ ನಮಗೆ ಕೊಡಿ” ಎಂದಿದ್ದಾರೆ.
ರೈತ ಹೋರಾಟದ ಬಗ್ಗೆ ವಾಗ್ದಳಿ ನಡೆಸಿರುವ ಹೆಗಡೆ, “ಅದು ರೈತರ ಹೋರಾಟವಲ್ಲ. ದೇಶದ್ರೋಹಿಗಳ ಹೋರಾಟ. ಪಂಜಾಬ್ ಗಡಿತಲ್ಲಿ ರೈತರ ಹೆಸರಿನಲ್ಲಿ ಖಲಿಸ್ತಾನಿಗಳು ಗಲಾಟೆ ಮಾಡುತ್ತಾರೆ. ಅವರು ಯಾರೂ ರೈತರಲ್ಲ” ಎಂದು ಹೇಳಿದ್ದಾರೆ.
ಭಾರತಮಾತೆ ಇಂಥಾ ಕೋಮು ಕ್ರಿಮಿಗಳಿಗೆ ಜನ್ಮ ನೀಡಿ ಸಾಕಿ ಸಲುಹಿರುವುದೇ ಈ ದೇಶದ ದೊಡ್ಡ ದುರಂತ,,, ಕನಿಷ್ಠ ಪಕ್ಷ ತನನ್ನು ಚುನಾಯಿಸಿದ ಜನರಿಗೆ ನಯಾಪೈಸೆ ಕೆಲಸ ಮಾಡದ ಕೇವಲ ಕೋಮುವ್ಯಾಧಿ ರೋಗಗ್ರಸ್ಥ ದ್ವೇಷ ಮಾತುಗಳಿಂದಲೇ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ನಕಲಿ ರಾಷ್ಟ್ರವಾದಿಗಳ ಜುಮ್ಲಾ ಪಕ್ಷದಲ್ಲಿ ಮಾತ್ರ ಸಾಧ್ಯ,,, ಒಂಥರಾ ಮಾನಸಿಕ ಭಯೋತ್ಪಾದಕರು