ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಐರಾವತ ಬಸ್ ಸೇವೆಯ ಧ್ಯೇಯವಾಕ್ಯ ಮಗುವಿನಂತೆ ಮಲಗಿ ಎಂಬುವುದನ್ನು ಕೊಂಚ ತಿರುಚಿ ಕೇರಳ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಗೇಲಿ ಮಾಡಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಕೇರಳ ಕಾಂಗ್ರೆಸ್ “ಕರ್ನಾಟಕ ಆರ್‌ಟಿಸಿ ನೀವು ‘ಇಸಿಐನಂತೆ ಮಲಗಬಹುದಾದ’ ಹೊಸ ಐಷಾರಾಮಿ ಕೋಚ್‌ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ ಎಂಬ ಮಾಹಿತಿ ನಮಗೆ ಲಭಿಸಿದೆ! ಇದು ನಿಜವೇ” ಪರೋಕ್ಷವಾಗಿ ಚುನಾವಣಾ ಆಯೋಗವನ್ನು ಲೇವಡಿ ಮಾಡಿದೆ.
We heard Karnataka RTC has plans to release a new class of Luxury Coaches in which you can ‘Sleep like ECI’.
Is this true? pic.twitter.com/5uUlVjSEnB
— Congress Kerala (@INCKerala) May 8, 2024
ಈ ಎಕ್ಸ್ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಪೋಸ್ಟ್ ಅನ್ನು ಟೀಕೆ ಮಾಡಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಕೇರಳ ಕಾಂಗ್ರೆಸ್‌ನ ಹಾಸ್ಯ ಪ್ರಜ್ಞೆಯನ್ನು ಮೆಚ್ಚುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ: ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್
ಕರ್ನಾಟಕದ ನೆಟ್ಟಿಗರು ಇದು ಕರ್ನಾಟಕ ಆರ್‌ಟಿಸಿ ಅಲ್ಲ, ಕೆಎಸ್‌ಆರ್‌ಟಿಸಿ ಎಂದೂ ಕೂಡಾ ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಪೋಸ್ಟ್ ಚೆನ್ನಾಗಿದೆ. ಆದರೆ ಅದು ಕರ್ನಾಟಕ ಆರ್‌ಟಿಸಿ ಅಲ್ಲ, ಕೆಎಸ್‌ಆರ್‌ಟಿಸಿ” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
“ಚುನಾವಣಾ ಆಯೋಗ ನಿದ್ರಿಸಿರುವಂತೆ ನಟಿಸಬಹುದು ಮತ್ತು ಬಿಜೆಪಿಯು ಕ್ಷಣಿಕ ನಿಟ್ಟುಸಿರು ಬಿಡಬಹುದು. ಆದರೆ ಈ ದೇಶದಲ್ಲಿ ಅಸಹ್ಯ ದಂಗೆಕೋರರ ಕಾಲರ್ ಹಿಡಿಯಲು ಕರ್ತವ್ಯ ಬದ್ಧ ಮತ್ತು ಜಾಗರೂಕ ಶಕ್ತಿಗಳಿವೆ” ಎಂದು ಕೇರಳ ಕಾಂಗ್ರೆಸ್ ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.
ಇದನ್ನು ಓದಿದ್ದೀರಾ? ಮುಸ್ಲಿಮರು, ಕಾಂಗ್ರೆಸರನ್ನು ಗುರಿಯಾಗಿಸುವ ಬಿಜೆಪಿಯ ವಿಡಿಯೋ ಅಳಿಸುವಂತೆ ‘ಎಕ್ಸ್’ಗೆ ಚುನಾವಣಾ ಆಯೋಗ ನಿರ್ದೇಶನ
ವಿವಾದಾದತ್ಮಕ ಪೋಸ್ಟ್ ಸಂಬಂಧ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯಾರಿಗೆ ಕರ್ನಾಟಕ ಪೊಲೀಸ್ ಸಮನ್ಸ್ ನೀಡಿದ ವರದಿಯನ್ನು ಉಲ್ಲೇಖಿಸಿ ಕೇರಳ ಕಾಂಗ್ರೆಸ್ ಈ ಪೋಸ್ಟ್ ಮಾಡಿದೆ.
ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಬಿಜೆಪಿ ನಾಯಕರ ದ್ವೇಷ ಭಾಷಣದ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಸರಿಯಾದ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಚುನಾವಣಾ ಆಯೋಗದ ಈ ನಡೆಯನ್ನು ನಿರಂತರವಾಗಿ ಟೀಕಿಸುತ್ತಿದೆ.