ಎಸ್‌ಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜನರ ಮತಗಳನ್ನು ಪಡೆಯುತ್ತವೆ. ಬಳಿಕ, ‘ವೋಟ್ ಜಿಹಾದ್’ ನಡೆಸುವವರಿಗೆ ಜನರ ಆಸ್ತಿಯನ್ನು ಉಡುಗೊರೆಯಾಗಿ ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮತ್ತೊಂದು ಸುಳ್ಳು ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಹಮಿರ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮೋದಿ ತಮ್ಮ ದ್ವೇಷ ಭಾಷಣವನ್ನು ಮುಂದುವರೆಸಿದ್ದಾರೆ. ಮತ್ತೆ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಸುಳ್ಳಿನ ದಾಳಿ ನಡೆಸಿದ್ದಾರೆ.
“ಇಂದು ನಾನು ಎಸ್‌ಪಿ ಮತ್ತು ಕಾಂಗ್ರೆಸ್ ವಿರುದ್ಧ ಎಚ್ಚರಿಕೆ ನೀಡಲು ಬಂದಿದ್ದೇನೆ. ಅವರು ನಿಮ್ಮ ಮತವನ್ನು ಪಡೆದುಕೊಳ್ಳುತ್ತಾರೆ. ಆದರೆ, ಅಧಿಕಾರಕ್ಕೆ ಬಂದ ನಂತರ, ಅವರು ತಮಗಾಗಿ ‘ವೋಟ್ ಜಿಹಾದ್’ ಮಾಡುವವರಿಗೆ ಉಡುಗೊರೆಗಳನ್ನು ವಿತರಿಸುತ್ತಾರೆ” ಎಂದು ಮೋದಿ ಸುಳ್ಳಿನ ಆರೋಪ ಮಾಡಿದ್ದಾರೆ.
”ಈ ಬಾರಿ ಚುನಾವಣೆಗೂ ಮುನ್ನವೇ ಎಸ್‌ಪಿ ಮತ್ತು ಕಾಂಗ್ರೆಸ್ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿವೆ. ಎಲ್ಲರ ಆಸ್ತಿ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಅವರು ಅಧಿಕಾರಕ್ಕೆ ಬಂದರೆ, ನಿಮ್ಮ ಆಸ್ತಿಯನ್ನು ‘ವೋಟ್ ಜಿಹಾದ್’ ಮಾಡುವ ವೋಟ್ ಬ್ಯಾಂಕ್‌ಗೆ ನೀಡುತ್ತಾರೆ” ಎಂದಿದ್ದಾರೆ.
ಹಮೀರ್‌ಪುರದಲ್ಲಿ 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿಯ ಕುನ್ವರ್ ಪುಷ್ಪೇಂದ್ರ ಸಿಂಗ್ ಚಂದೇಲ್ ಮತ್ತು ಎಸ್‌ಪಿಯ ಅಜೇಂದ್ರ ಸಿಂಗ್ ಲೋಧಿ ನಡುವೆ ಪ್ರಬಲ ಸ್ಪರ್ಧೆ ನಡೆಯುತ್ತಿದೆ. ಹಮೀರ್‌ಪುರದಲ್ಲಿ ಐದನೇ ಹಂತದಲ್ಲಿ ಮೇ 20 ರಂದು ಮತದಾನ ನಡೆಯಲಿದೆ.