ಟರ್ಕಿ ದೇಶದ ಸಂಸತ್ ‘ಅಂಕಾರ’ ಬಳಿ ಇಂದು ಬೆಳಗ್ಗೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.
“ಟರ್ಕಿಯ ರಾಜಧಾನಿಯಲ್ಲಿರುವ ಸಚಿವಾಲಯದ ಕಟ್ಟಡದ ಮುಂದೆ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳ ಪೈಕಿ ಒಬ್ಬ ಸ್ಫೋಟಕ ಸಾಧನವನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ” ಎಂದು ಆಂತರಿಕ ಸಚಿವ ಅಲಿ ಯರ್ಲಿಕಾಯಾ ಮಾಹಿತಿ ನೀಡಿದ್ದಾರೆ.
#BREAKING:
— South Asian Perspective (@SAnPerspective) October 1, 2023
— Turkish Interior Minister reports two suicide bombers target #Turkey's parliament in Ankara
— A suicide bomber detonated himself in front of the ministry building in #Ankara, wounding two police officers.
— The other of the two attackers has been neutralized. pic.twitter.com/oOckpx0pbl
ಸ್ಫೋಟವು ಟರ್ಕಿಯ ಕಾಲಮಾನ ಬೆಳಗ್ಗೆ 9.30ಕ್ಕೆ ಸಂಭವಿಸಿದೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿದೆ.
ಘಟನೆಯ ಬಳಿಕ ಸಂಸತ್ ಕಟ್ಟಡ ಮತ್ತು ಸನಿಹದಲ್ಲಿರುವ ಆಂತರಿಕ ಸಚಿವಾಲಯದ ಕಟ್ಟಡದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಸ್ಫೋಟದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
TERROR ATTACK IN ANKARA 🇹🇷
— 𝗖𝗿𝗶𝘁𝗲𝗿𝗶𝗼𝗻🏴 (@Criter10n) October 1, 2023
Video of the moment of the attack this morning in Ankara #Turkey pic.twitter.com/stuWFDJPdS
ಬೇಸಿಗೆಯ ರಜೆಯ ಮುಗಿದ ಹಿನ್ನೆಲೆಯಲ್ಲಿ ಟರ್ಕಿಯ ಸಂಸತ್ತು ಇಂದು ಪುನರಾರಂಭವಾಗುತ್ತಿದ್ದು, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಬ್ ಉರ್ದುಗಾನ್ ಸಹಿತ ಎಲ್ಲ ಸಂಸದರು ಮಧ್ಯಾಹ್ನ 2 ಗಂಟೆಗೆ ಸಂಸತ್ತಿಗೆ ಭೇಟಿ ನೀಡಲಿದ್ದ ನಡುವೆಯೇ ಈ ಸ್ಫೋಟ ನಡೆದಿದೆ.
ದಾಳಿಯ ಹಿಂದೆ ಯಾರಿರಬಹುದು ಎಂದು ಹೇಳಲು ಈಗ ಸಾಧ್ಯವಾಗುತ್ತಿಲ್ಲ ಎಂದು ಟಿರ್ಕಿಯ ಅಧಿಕಾರಿಗಳು ತಿಳಿಸಿದ್ದಾರೆ. ಟರ್ಕಿಯು ಐಸಿಸ್ ಭಯೋತ್ಪಾದಕ ಸಂಘಟನೆಯ ಸದಸ್ಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.