ಈದಿನ ಸಮೀಕ್ಷೆ | ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ!

Date:

Advertisements

ಕೆಲಸ ಮಾಡಿ ತಮ್ಮ ಜೀವನ ನಿರ್ವಹಣೆ ಮಾಡಬೇಕೆಂಬ ಇಚ್ಛೆ ಹೊಂದಿರುವ ದೇಶದ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗ ಭೀಕರ ಸಮಸ್ಯೆಯಾಗಿ ಕಾಡುತ್ತಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಬ್ಬರದ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ತಮಗೆ ನಿರುದ್ಯೋಗದ ಅರಿವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಪಕೋಡ ಮಾರುವುದೂ ಉದ್ಯೋಗವೆಂದು ಹೇಳುತ್ತಿದ್ದಾರೆ.

ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ನಿಖರವಾದ ಚುನಾವಣಾ ಪೂರ್ವ ಸಮೀಕ್ಷೆ ವರದಿ ನೀಡಿದ್ದ ದಿನ.ಕಾಮ್‌ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತದಾರರ ಒಲವು ಯಾರ ಕಡೆಗಿದೆ. ಈ ಬಾರಿ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ ಲಭಿಸಬಹುದು ಎಂಬ ಬಗ್ಗೆ ಎರಡು ಬಾರಿ ಸಮೀಕ್ಷೆ ನಡೆಸಿದೆ. ಈ ಚುನಾವಣೆ ಸಮೀಕ್ಷೆಯ ಜತೆಗೆ ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೇಗೆ ಇದೆ. ಈ ಬಗ್ಗೆ ಮತದಾರರಿಗೆ ಏನೇನಿಸುತ್ತದೆ. ಹಾಗೆಯೇ ಮತದಾರರ ನಿಲುವು ಯಾರ ಪರ ಮತ್ತು ವಿರೋಧವಾಗಿದೆ ಎಂಬ ಬಗ್ಗೆ ಮತದಾರರೇ ಹೇಳಿದ್ದಾರೆ.

ಕಳೆದ ಹತ್ತು ವರ್ಷದಲ್ಲಿ ನಿರುದ್ಯೋಗವು ಬಹಳಷ್ಟು ಹೆಚ್ಚಾಗಿದೆ. ನಿರುದ್ಯೋಗದ ಹೆಚ್ಚಳಕ್ಕೆ ಮೋದಿಯೇ ಕಾರಣವೆಂದು ಸ್ವತಃ ಮತದಾರರೇ ಹೇಳಿದ್ದಾರೆ.

Advertisements

ಸಮೀಕ್ಷೆ 1

ಕಳೆದ ಹತ್ತು ವರ್ಷದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಇದಕ್ಕೆ ಬಿಜೆಪಿಯೇ ಕಾರಣವೆಂದು 37.89%ರಷ್ಟು ಮಂದಿ ಹೇಳಿದ್ದಾರೆ. 19.88% ಮಂದಿ ಕಾಂಗ್ರೆಸ್‌, 1.64% ಮಂದಿ ಜೆಡಿಎಸ್‌ ಕಾರಣ ಎಂದಿದ್ದರೆ, 18.26%ರಷ್ಟು ಜನ ಎಲ್ಲರೂ ಕಾರಣ ಎಂದು ಹೇಳಿದ್ದಾರೆ. ಇನ್ನು 11.29%ರಷ್ಟು ಜನ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಕೆಲವು ಜನ ಅಂದರೆ, 11.03% ರಷ್ಟು ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

18 ರಿಂದ 25 ವರ್ಷ ವಯಸ್ಸಿನವರ ಅಭಿಪ್ರಾಯ

18 ರಿಂದ 25 ವರ್ಷ ವಯಸ್ಸಿನ ಶೇ.37.09 ಜನರು ನಿರುದ್ಯೋಗಕ್ಕೆ ಬಿಜೆಪಿಯೇ ಪ್ರಮುಖ ಕಾರಣ ಎಂದಿದ್ದರೇ, 22.3% ರಷ್ಟು ಜನ ಕಾಂಗ್ರೆಸ್‌ ಕಾರಣ ಎಂದಿದ್ದಾರೆ. 19.91% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ. ಇನ್ನು 10.64% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದಿದ್ದರೆ, 7.96% ಜನ ನಮಗೆ ಗೊತ್ತಿಲ್ಲ ನಾವು ಹೇಳುವುದಿಲ್ಲ ಎಂದಿದ್ದಾರೆ.

25 ರಿಂದ 35 ವರ್ಷ ವಯಸ್ಸಿನವರ ಅಭಿಪ್ರಾಯ

25 ರಿಂದ 35 ವರ್ಷ ವಯಸ್ಸಿನ 41.55% ಜನರು ನಿರುದ್ಯೋಗಕ್ಕೆ ಬಿಜೆಪಿಯೇ ಪ್ರಮುಖ ಕಾರಣ ಎಂದಿದ್ದರೇ, 20.04% ರಷ್ಟು ಜನ ಕಾಂಗ್ರೆಸ್‌ನಿಂದ ಹೆಚ್ಚಾಗಿದೆ ಎಂದಿದ್ದಾರೆ. 16.68% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ. ಇನ್ನು 7.35% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇನ್ನು 12.7% ಜನ ನಮಗೆ ಗೊತ್ತಿಲ್ಲ ನಾವು ಹೇಳುವುದಿಲ್ಲ ಎಂದಿದ್ದಾರೆ.

35 ರಿಂದ 45 ವರ್ಷ ವಯಸ್ಸಿನವರ ಅಭಿಪ್ರಾಯ

35 ರಿಂದ 45 ವರ್ಷ ವಯಸ್ಸಿನ ಶೇ.39.75ರಷ್ಟು ಜನರು ನಿರುದ್ಯೋಗಕ್ಕೆ ಬಿಜೆಪಿ ಕಾರಣ ಎಂದರೇ, 19.55% ರಷ್ಟು ಜನ ಕಾಂಗ್ರೆಸ್‌ನಿಂದ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 17.66% ಜನ ಈ ನಿರುದ್ಯೋಗದ ಸಮಸ್ಯೆಗೆ ಎಲ್ಲರೂ ಕಾರಣ ಎಂದಿದ್ದಾರೆ. ಇನ್ನು 1.65% ರಷ್ಟು ಜನ ಜೆಡಿಎಸ್‌ ಕಾರಣ ಎಂದಿದ್ದರೇ, 9.92% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇನ್ನು 11.46% ಜನ ನಮಗೆ ಗೊತ್ತಿಲ್ಲ ನಾವು ಹೇಳುವುದಿಲ್ಲ ಎಂದಿದ್ದಾರೆ.

45 ರಿಂದ 55 ವರ್ಷ ವಯಸ್ಸಿನವರ ಅಭಿಪ್ರಾಯ

45 ರಿಂದ 55 ವರ್ಷ ವಯಸ್ಸಿನವರು ನಿರುದ್ಯೋಗಕ್ಕೆ ಬಿಜೆಪಿ ಕಾರಣ ಎಂದು 38.5% ಜನ ಹೇಳಿದ್ದಾರೆ. ಕಾಂಗ್ರೆಸ್‌ ಕಾರಣ ಎಂದು 19.67% ಜನ ಹೇಳಿದ್ದರೆ, 19.39% ಜನ ಈ ನಿರುದ್ಯೋಗದ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

10.56% ಜನ ನಮಗೆ ಈ ಬಗ್ಗೆ ಏನೂ ಗೊತ್ತಿಲ್ಲ ಅಥವಾ ನಾವು ಏನನ್ನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ. 10.77% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಉತ್ತರಿಸಿದ್ದಾರೆ.

55 ರಿಂದ 70 ವರ್ಷ ವಯಸ್ಸಿನವರ ಅಭಿಪ್ರಾಯ

ನಿರುದ್ಯೋಗದ ಸಮಸ್ಯೆ ಬಗ್ಗೆ 55 ರಿಂದ 70 ವರ್ಷ ವಯಸ್ಸಿನವರನ್ನು ಕೇಳಿದಾಗ ಶೇ.36.45 ಜನ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಇದಕ್ಕೆ ಬಿಜೆಪಿ ಕಾರಣ ಎಂದು ಹೇಳಿದ್ದಾರೆ. 11.22% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದಿದ್ದಾರೆ. ಇನ್ನು 10.95% ಜನ ನಿರುದ್ಯೋಗ ಸಮಸ್ಯೆ ಬಗ್ಗೆ ನಾವು ಏನೂ ಹೇಳುವುದಿಲ್ಲ. ನಮಗೇನು ಗೊತ್ತಿಲ್ಲ ಎಂದಿದ್ದಾರೆ. 19.93% ಜನ ನಿರುದ್ಯೋಗ ಹೆಚ್ಚಳಕ್ಕೆ ಕಾರಣ ಕಾಂಗ್ರೆಸ್‌ ಎಂದಿದ್ದರೇ, 20.47% ಜನ ಎಲ್ಲರೂ ಕಾರಣ ಎಂದಿದ್ದಾರೆ.

70 ರಿಂದ 100 ವರ್ಷ ವಯಸ್ಸಿನವರ ಅಭಿಪ್ರಾಯ

ನಮ್ಮ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ 70 ರಿಂದ 100 ವರ್ಷ ವಯಸ್ಸಿನವರಿಗೆ ಕೇಳಿದಾಗ 31.85% ರಷ್ಟು ಜನ ಬಿಜೆಪಿ ಕಾರಣ ಎಂದಿದ್ದಾರೆ. 22.58% ರಷ್ಟು ಜನ ಕಾಂಗ್ರೆಸ್‌ನಿಂದ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 19.35% ಜನ ಈ ನಿರುದ್ಯೋಗದ ಸಮಸ್ಯೆಗೆ ಎಲ್ಲರೂ ಕಾರಣ ಎಂದಿದ್ದಾರೆ. 8.47% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇನ್ನು 16.13% ಜನ ನಮಗೆ ಗೊತ್ತಿಲ್ಲ ನಾವು ಹೇಳುವುದಿಲ್ಲ ಎಂದಿದ್ದಾರೆ.

ಸಮೀಕ್ಷೆ

ಉದ್ಯೋಗಿಗಳು ಹೇಳುವುದೇನು?

ಕೃಷಿ ಕೂಲಿ ಕಾರ್ಮಿಕ ಅಥವಾ ಇತರೆ ಕೂಲಿ ಕೆಲಸ ಮಾಡುವ ಜನರು ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಇದಕ್ಕೆ ಬಿಜೆಪಿ ಕಾರಣ ಎಂದು 39.66% ಜನ ಹೇಳಿದ್ದಾರೆ. 20.28% ಜನ ಕಾಂಗ್ರೆಸ್‌ನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದರೆ, 17.99% ಜನ ಎಲ್ಲರೂ ಕಾರಣ ಎಂದಿದ್ದಾರೆ. ಇನ್ನು 11.71% ಜನ ನಮಗೆ ಗೊತ್ತಿಲ್ಲ ನಾವು ಏನನ್ನೂ ಹೇಳುವುದಿಲ್ಲೆ ಎಂದಿದ್ದಾರೆ. 9.38% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ದೊಡ್ಡ ವ್ಯಾಪಾರ/ ಸ್ವ ಉದ್ಯೋಗ ಹೊಂದಿರುವ ವೃತ್ತಿಪರರು (ದೊಡ್ಡ ಅಂಗಡಿ, ಡಾಕ್ಟರ್, ವಕೀಲ ಇತ್ಯಾದಿ, ತಿಂಗಳ ಆದಾಯ 1 ಲಕ್ಷಕ್ಕಿಂತ ಹೆಚ್ಚು) ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಇದಕ್ಕೆ ಬಿಜೆಪಿ ಕಾರಣ ಎಂದು 60% ಜನ ಹೇಳಿದ್ದಾರೆ. 10% ಜನ ಕಾಂಗ್ರೆಸ್‌ನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದರೆ, 10% ಜನ ಎಲ್ಲರೂ ಕಾರಣ ಎಂದಿದ್ದಾರೆ. 20% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ದೊಡ್ಡ ವ್ಯಾಪಾರ/ಸ್ವ ಉದ್ಯೋಗ ಹೊಂದಿರುವ ವೃತ್ತಿಪರರು (ದೊಡ್ಡ ಅಂಗಡಿ, ಡಾಕ್ಟರ್, ವಕೀಲ ಇತ್ಯಾದಿ, ತಿಂಗಳ ಆದಾಯ 25 ಸಾವಿರಕ್ಕೂ ಹೆಚ್ಚು) ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಇದಕ್ಕೆ ಬಿಜೆಪಿ ಕಾರಣ ಎಂದು 50% ಜನ ಹೇಳಿದ್ದಾರೆ. 15.79% ಜನ ಕಾಂಗ್ರೆಸ್‌ನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದರೆ, 21.05% ಜನ ಎಲ್ಲರೂ ಕಾರಣ ಎಂದಿದ್ದಾರೆ. 6.58% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇನ್ನು 3.95% ಜನ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದೊಡ್ಡ ವ್ಯಾಪಾರ/ಸ್ವ ಉದ್ಯೋಗ ಹೊಂದಿರುವ ವೃತ್ತಿಪರರು (ದೊಡ್ಡ ಅಂಗಡಿ, ಡಾಕ್ಟರ್, ವಕೀಲ ಇತ್ಯಾದಿ, ತಿಂಗಳ ಆದಾಯ 50 ಸಾವಿರಕ್ಕೂ ಹೆಚ್ಚು) ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಇದಕ್ಕೆ ಬಿಜೆಪಿ ಕಾರಣ ಎಂದು 46.67%, ಕಾಂಗ್ರೆಸ್‌ ಕಾರಣ ಎಂದು 10%, ಜೆಡಿಎಸ್‌ ಕಾರಣ ಎಂದು 10%, ಎಲ್ಲರೂ ಕಾರಣ ಎಂದು 16.67%, 6.67% ಜನ ಗೊತ್ತಿಲ್ಲ ಎಂದಿದ್ದರೇ, 10% ಜನ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ನಿರುದ್ಯೋಗಿ- ಆದಾಯದ ಯಾವುದೇ ಮೂಲಗಳಿಲ್ಲದವರು ನಿರುದ್ಯೋಗಕ್ಕೆ ಬಿಜೆಪಿಯೇ ಕಾರಣ 39.65% ರಷ್ಟು ಜನ ಹೇಳಿದ್ದಾರೆ. 21.28% ಜನ ಕಾಂಗ್ರೆಸ್‌ನಿಂದ ಹೆಚ್ಚಳವಾಗಿದೆ ಎಂದಿದ್ದಾರೆ. 14.31% ಜನ ಎಲ್ಲರೂ ಕಾರಣ ಎಂದಿದ್ದರೇ, 12.38% ಜನ ಗೊತ್ತಿಲ್ಲ ಹೇಳುವುದಿಲ್ಲ ಎಂದಿದ್ದಾರೆ. 3.29% ಜನ ಜೆಡಿಎಸ್‌ ಕಾರಣವಾಗಿದೆ ಎಂದಿದ್ದರೇ, 9.09% ಜನ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ನಿರುದ್ಯೋಗದ ಬಗ್ಗೆ ಉದ್ಯೋಗಿಗಳ ಅಭಿಪ್ರಾಯ

ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ (ಸರ್ಕಾರಿ ಅಥವಾ ಖಾಸಗಿ, ಸಂಬಳ 10 ರಿಂದ 25 ಸಾವಿರ) 40.63% ಜನ ನಿರುದ್ಯೋಗಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 17.19% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 10.94% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 6.25% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 21.88% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ (ಸರ್ಕಾರಿ ಅಥವಾ ಖಾಸಗಿ, ಸಂಬಳ 10 ಸಾವಿರಕ್ಕಿಂತಲೂ ಕಡಿಮೆ) 35.9% ಜನ ನಿರುದ್ಯೋಗಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 15.38% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 5.13% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 10.26% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 30.77% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ (ಸರ್ಕಾರಿ ಅಥವಾ ಖಾಸಗಿ, ಸಂಬಳ 1ಲಕ್ಷಕ್ಕೂ ಹೆಚ್ಚು) ಹೊಂದಿರುವವರು ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು 57.14% ಜನ ಹೇಳಿದ್ದರೇ, 42.86% ಜನ ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ.

ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ (ಸರ್ಕಾರಿ ಅಥವಾ ಖಾಸಗಿ, ಸಂಬಳ 50 ಸಾವಿರಕ್ಕೂ ಹೆಚ್ಚು) ಹೊಂದಿರುವವರು 52.63% ಜನ ನಿರುದ್ಯೋಗಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 10.53% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. 10.53% ಜನ ಜೆಡಿಎಸ್‌ ಕಾರಣ ಎಂದಿದ್ದರೆ, 10.53% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 15.79% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ನಿರುದ್ಯೋಗದ ಬಗ್ಗೆ ವ್ಯಾಪಾರಸ್ಥರ ಅಭಿಪ್ರಾಯ

ಸಣ್ಣ ವ್ಯಾಪಾರ/ಸ್ವ ಉದ್ಯೋಗ (ಬೀದಿ ಬದಿ ವ್ಯಾಪಾರಿ, ಸಣ್ಣ ಪೆಟ್ಟಿ ಅಂಗಡಿ, ರಿಕ್ಷಾ ಚಾಲನೆ ಇತ್ಯಾದಿ ತಿಂಗಳ ಆದಾಯ 10 ಸಾವಿರ ಅಥವಾ ಅದಕ್ಕಿಂತ ಕಡಿಮೆ) ಹೊಂದಿರುವವ ಪೈಕಿ 40.38% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 16.74% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. 2.09% ಜನ ಜೆಡಿಎಸ್ ಕಾರಣ ಎಂದಿದ್ದಾರೆ. ಇನ್ನು 10.46% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 11.3% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 19.04% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಮಧ್ಯಮ ಪ್ರಮಾಣದ ವ್ಯಾಪಾರ/ ಸ್ವ ಉದ್ಯೋಗ (ಅಂಗಡಿ, ಮೆಕ್ಯಾನಿಕ್ , ಆಟೊ ಚಾಲನೆ, ಊಬರ್, ಸ್ವಿಗಿ ಇತ್ಯಾದಿ 10 ರಿಂದ 25 ಸಾವಿರ ತಿಂಗಳ ಆದಾಯ) ಹೊಂದಿರುವವರ 42.69% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 18.85% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 11.54% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 7.69% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 18.85% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ನಿರುದ್ಯೋಗದ ಬಗ್ಗೆ ರೈತರ ಅಭಿಪ್ರಾಯ

10 ಅಥವಾ ಅದಕ್ಕಿಂತ ಹೆಚ್ಚು ಎಕರೆ ಜಮೀನು ಹೊಂದಿರುವ ರೈತರ ಪೈಕಿ ಶೇ. 32.5% ಜನ ನಿರುದ್ಯೋಗ ಹೆಚ್ಚಳವಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದರೇ, 17.5% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 16.67% ಜನ ನಮಗೆ ಗೊತ್ತಿಲ್ಲ ನಾವು ಹೇಳುವುದಿಲ್ಲ ಎಂದಿದ್ದಾರೆ.  0.83% ಜನ ಜೆಡಿಎಸ್‌ನಿಂದಲೇ ನಿರುದ್ಯೋಗ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಇನ್ನು 12.5% ಜನ ನಿರುದ್ಯೋಗ ಕಡಿಮೆಯಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

2 ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ರೈತರ ಪೈಕಿ 36.13% ಜನ ನಿರುದ್ಯೋಗಕ್ಕೆ ಬಿಜೆಪಿ ಕಾರಣ ಎಂದು ಹೇಳಿದ್ದಾರೆ. 23.14% ಜನ ಕಾಂಗ್ರೆಸ್ ಕಾರಣ ಎಂದಿದ್ದಾರೆ. 18.4% ಜನ ಎಲ್ಲರೂ ಕಾರಣ ಎಂಬ ಉತ್ತರ ನೀಡಿದ್ದರೇ, 12.86% ಜನ ನಮಗೆ ಗೊತ್ತಿಲ್ಲ ಹೇಳುವುದಿಲ್ಲ ಎಂದು ಹೇಳಿದ್ದಾರೆ. 8.66% ಜನ ನಿರುದ್ಯೋಗದ ಸಮಸ್ಯೆ ಕಡಿಮೆಯಾಗಿದೆ ಎಂದಿದ್ದಾರೆ.

2 ರಿಂದ 5 ಎಕರೆ ಜಮೀನು ಹೊಂದಿರುವ ರೈತರ ಪೈಕಿ 36.29% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 20.07% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 10.7% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 11.54% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 20.07% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

5 ರಿಂದ 10 ಎಕರೆ ಜಮೀನು ಹೊಂದಿರುವ ರೈತರ ಪೈಕಿ 33.68% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 20.14 ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. 1.39% ಜನ ಜೆಡಿಎಸ್ ಕಾರಣ ಎಂದಿದ್ದಾರೆ. ಇನ್ನು 11.11% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 12.85% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 20.83% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಇತರೆ, 35.58% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 10.58 ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 19.23% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 9.62% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 25% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಶೈಕ್ಷಣಿಕ ಅರ್ಹತೆ ಹೊಂದಿರುವವರ ಅಭಿಪ್ರಾಯ

ಅನಕ್ಷರಸ್ಥ-ಶಾಲೆಗೆ ಹೋಗದೇ ಇರುವವರ ಪೈಕಿ 36.32% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 16.58% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 18.58% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 9.33% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 17.75% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಸಮೀಕ್ಷೆ

7 ನೇ ತರಗತಿಯ ಕಲಿತು ತೇರ್ಗಡೆಯಾಗದವರ ಪೈಕಿ ಪೈಕಿ 38.69% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 19.9 ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 11.65% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 9.84% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 18.5% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

7ನೇ ತರಗತಿ ಪಾಸ್ ಆಗಿ, 10ನೇ ತರಗತಿ ಪಾಸ್ ಆಗಿರದವರ ಪೈಕಿ 39.44% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 19.73% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. 2.2% ಜನ ಜೆಡಿಎಸ್‌ ಕಾರಣ ಎಂದು ಹೇಳಿದ್ದಾರೆ. ಇನ್ನು 11.84% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 10.64% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 16.15% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

10ನೆಯ ತರಗತಿ ಪಾಸ್ ಆಗಿ, ಪಿ.ಯು.ಸಿ ಪಾಸ್ ಆಗದೇ ಇರುವವರ ಪೈಕಿ 40.67% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 21.32% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 8.1% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 10.7% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 17.39% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಪಿಯುಸಿ /ಐಟಿಐ/ಡಿಪ್ಲೋಮಾ ಆಗಿದೆ. ಆದರೆ ಪದವಿ ಕಾಲೇಜಿಗೆ ಹೋಗದೆ ಇರುವವರ ಪೈಕಿ 38.79% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 21.79% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 6.91% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದರೇ, 12.29% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 18.39% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಪದವಿಧರ/ರೆ (ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ) ಪೈಕಿ 34.94% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 22.53% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 4.9% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದರೇ, 15.17% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 21.06% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಸ್ನಾತಕೋತ್ತರ ಪದವಿ (ಎಂಎ, ಎಂಎಸ್‌ಸಿ, ಎಂಕಾಂ ಇತ್ಯಾದಿ) ಹೊಂದಿರುವವರ ಪೈಕಿ 33.25% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 23.43% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 4.91% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 14.11% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 22.24% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ವೃತ್ತಿಪರ ಪದವಿ (ಬಿಟೆಕ್, ಎಂಬಿಬಿಎಸ್, ಬಿಎಎಂಎಸ್, ಎಲ್ಎಲ್ ಬಿ, ಪಿಎಚ್‌ಡಿ) ಇರುವವರ ಪೈಕಿ 24.62% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 19.23% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 6.54% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 12.31% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 32.69% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆಯಾ ಅಥವಾ ಹೆಚ್ಚಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಪುರುಷರ ಪೈಕಿ 38.47% ಪುರುಷರು ನಿರೋದ್ಯೋಗ ಸಮಸ್ಯೆಗೆ ಬಿಜೆಪಿ ಕಾರಣ ಎಂದು ಹೇಳಿದ್ದಾರೆ. 20.64% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. 18.66% ಪುರುಷರು ಈ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದರೇ, 11.26% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇನ್ನು 9.33% ಜನ ಗೊತ್ತಿಲ್ಲ ಈ ಬಗ್ಗೆ ಏನೂ ಹೇಳುವುದಿಲ್ಲ ಎಂದಿದ್ದಾರೆ.

ಶೇ.37.2 ಮಹಿಳೆಯರು ನಿರುದ್ಯೋಗಕ್ಕೆ ಬಿಜೆಪಿಯೇ ಕಾರಣ ಎಂದು ಉತ್ತರಿಸಿದ್ದಾರೆ.  19.01% ಕಾಂಗ್ರೆಸ್‌ ಕಾರಣವಾಗಿದರೇ, 1.66% ಜೆಡಿಎಸ್‌ ಕಾರಣವಾಗಿದೆ. 17.79% ಮಹಿಳೆಯರು ಈ ನಿರುದ್ಯೋಗಕ್ಕೆ ಎಲ್ಲರೂ ಕಾರಣ ಎಂದಿದ್ದಾರೆ. ಇನ್ನು 13.06% ಮಹಿಳೆಯರು ಈ ಬಗ್ಗೆ ಗೊತ್ತಿಲ್ಲ ಏನು ಹೇಳುವುದಿಲ್ಲ ಎಂದಿದ್ದರೆ, 10.75% ಮಹಿಳೆಯರು ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಸಮೀಕ್ಷೆ

ಇತರೆ, 42.11% ಜನ ನಿರುದ್ಯೋಗ ಹೆಚ್ಚಾಗಿದ್ದು ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. 10.53% ಜನ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇನ್ನು 5.26% ಜನ ಗೊತ್ತಿಲ್ಲ ಈ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದ್ದರೇ, 15.79% ಜನ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 26.32% ಜನ ಈ ನಿರುದ್ಯೋಗ ಸಮಸ್ಯೆಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X