ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಚುನಾವಣೆಗೂ ಮುನ್ನ ತಮಿಳು ನಟ ಆರ್ ಶರತ್ ಕುಮಾರ್ ಅವರು ತಮ್ಮ ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (ಎಐಎಸ್ಎಂಕೆ) ಪಕ್ಷವನ್ನು ಬಿಜೆಪಿಯೊಂದಿಗೆ ಮಂಗಳವಾರ ವಿಲೀನಗೊಳಿಸಿದ್ದಾರೆ.
ಕನ್ನಡದಲ್ಲಿಯೂ ನಟಿಸಿರುವ ನಟ ಆರ್ ಶರತ್ ಕುಮಾರ್ ಅವರು ಎಐಎಸ್‌ಎಂಕೆ ಪದಾಧಿಕಾರಿಗಳು ಮತ್ತು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಸಮ್ಮುಖದಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು.
ತಮ್ಮ ಪಕ್ಷವನ್ನು ಬಿಜೆಪಿ ಜತೆಗೆ ವಿಲೀನಗೊಳಿಸಿದ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರತ್ ಕುಮಾರ್, “ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಏಕತೆಯನ್ನು ಬೆಳೆಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಪೋಷಿಸುತ್ತಾರೆ. ಡ್ರಗ್ಸ್ ಪಿಡುಗನ್ನು ಕೊನೆಗಾಣಿಸಿ ಯುವಕರ ಹಿತ ಕಾಪಾಡುವುದು ಮೋದಿಯವರ ನೇತೃತ್ವದಲ್ಲಿ ಉಜ್ವಲವಾಗಿದೆ” ಎಂದು ಹೇಳಿದರು.
2026ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುವಂತೆ ಶರತ್ ಕುಮಾರ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೋರ್ಡ್ ಪರೀಕ್ಷೆ | ಸಂವಿಧಾನದ ಮೂಲಭೂತ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ: ನಿರಂಜನಾರಾಧ್ಯ ವಿ.ಪಿ
ಡಿಎಂಕೆಯಿಂಗ ರಾಜ್ಯಸಭೆಗೆ ಆಯ್ಕೆಯಾಗಿದ್ದ ಶರತ್ ಕುಮಾರ್ ಅವರು ನಂತರ ರಾಜ್ಯಸಭಾ ಸ್ಥಾನ ತ್ಯಜಿಸಿ ಎಐಎಡಿಎಂಕೆ ಸೇರಿದ್ದರು. ಅಂತಿಮವಾಗಿ 2007ರಲ್ಲಿ ಎಐಎಸ್ಎಂಕೆ ಸ್ಥಾಪಿಸಿದರು.