ತಮ್ಮ ರಾಜಕೀಯ ಇಷ್ಟ, ಇಷ್ಟವಿಲ್ಲದಿರುವ ವಿಚಾರಗಳನ್ನು ಆಧರಿಸಿ ಆಡಳಿತವನ್ನು ಮುಂದುವರಿಸಿದರೆ ನೀವು ರಾಜಕೀಯವಾಗಿ ಮೂಲೆಗುಂಪಾಗುತ್ತೀರಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್ ಹಂಚಿಕೆಗೆ ಮೋದಿ ಒಲವು ತೋರುತ್ತಿದ್ದಾರೆ ಎಂದು ಟೀಕಿಸಿದ ಸ್ಟಾಲಿಕ್, “ಮೋದಿ ತಮ್ಮ ಮಿತ್ರರನ್ನು ಸಮಾಧಾನಪಡಿಸಬಹುದು ಆದರೆ ಅವರು ದೇಶವನ್ನು ಉಳಿಸಲು ಸಾಧ್ಯವಿಲ್ಲ” ಎಂದು ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಬಜೆಟ್‌ನಲ್ಲಿ ಕೇಂದ್ರವು ಇತರ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಿದೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ಬೆನ್ನಲ್ಲೇ ಸ್ಟಾಲಿನ್ ಟ್ವೀಟ್ ಮಾಡಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದವರ ವಿರುದ್ಧ ಮೋದಿ ಬಜೆಟ್ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಎಂಕೆ ಸ್ಟಾಲಿನ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು ರಾಜಕಾರಣ | ಕರುಣಾನಿಧಿ, ಸ್ಟಾಲಿನ್ ನಂತರ ಸಿಎಂ ಕುರ್ಚಿಯತ್ತ ಉದಯನಿಧಿ?
“ನೀವು ಹೇಳಿದ್ದೀರಿ, ಚುನಾವಣೆ ಮುಗಿದಿದೆ, ಈಗ ನಾವು ದೇಶದ ಬಗ್ಗೆ ಯೋಚಿಸಬೇಕು. ಆದರೆ, ನಿನ್ನೆಯ ಬಜೆಟ್ 2024 ನಿಮ್ಮ ಆಡಳಿತವನ್ನು ಮಾತ್ರ ಉಳಿಸುತ್ತದೆ, ಭಾರತವನ್ನಲ್ಲ” ಎಂದು ಸ್ಟಾಲಿನ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
“ರಾಜಕೀಯ ಪಕ್ಷಪಾತದ ಆಧಾರದ ಮೇಲೆ ಮೋದಿ ಆಡಳಿತ ಮುಂದುವರಿಸಿದರೆ, ಅವರು ಪ್ರತ್ಯೇಕಗೊಳ್ಳುವ ಅಪಾಯವಿದೆ” ಎಂದು ಹೇಳಿರುವ ಸ್ಟಾಲಿನ್ #BJPBetraysTamilnadu ಎಂಬ ಹ್ಯಾಷ್‌ಟ್ಯಾಗ್ ಅನ್ನು ಹಾಕಿದ್ದಾರೆ.
ಇನ್ನು ಸ್ಟಾಲಿನ್ ಸೇರಿದಂತೆ ನಾಲ್ವರು ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳ ಬೇಡಿಕೆಗಳನ್ನು ಕೇಂದ್ರ ಬಜೆಟ್‌ನಲ್ಲಿ ನಿರ್ಲಕ್ಷಿಸಿರುವುದನ್ನು ವಿರೋಧಿಸಿ ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ನೀತಿ ಆಯೋಗ ಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ஒன்றிய நிதிநிலை அறிக்கையில் ஒருசில மாநிலங்கள் நீங்கலாகப் பல்வேறு மாநிலங்கள் புறக்கணிக்கப்பட்டிருப்பதைக் கண்டிக்கும் வகையில் #INDIA கூட்டணி எம்.பி.க்கள் போராட்டம் நடத்தியுள்ளார்கள்.
மாண்புமிகு பிரதமர் @narendramodi அவர்களே…
“தேர்தல் முடிந்துவிட்டது, இனி நாட்டைப் பற்றியே… pic.twitter.com/95xXotDQDa
— M.K.Stalin (@mkstalin) July 24, 2024