- ವಿಧಾನಸೌಧದಲ್ಲಿ ಅಧಿಕಾರಿ, ಸಚಿವರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
- ಮ್ಯಾರಥಾನ್ ಮೀಟಿಂಗ್ ಸಲುವಾಗಿ ನಾಳಿನ ಕ್ಯಾಬಿನೆಟ್ ಸಭೆ ಮುಂದೂಡಿಕೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆಯಾಗಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಆದೇಶ ಹೊರಡಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು.
ವಿಧಾನಸೌಧದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಲ್ಲ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿಗಳು ಅತ್ಯಂತ ಮಹತ್ವದ ಸಭೆಯನ್ನು ನಡೆಸಿದರು.
ಗ್ಯಾರಂಟಿಗಳ ಜಾರಿ ವಿಚಾರವಾಗಿ ಲಾಭ ನಷ್ಟಗಳು ಹಾಗೂ ಇಲಾಖೆಗಳ ಮೇಲಿನ ಹೊರೆ, ಅವುಗಳನ್ನು ಸರಿದೂಗಿಸಲು ಇರುವ ಮಾರ್ಗೋಪಾಯಗಳ ಬಗೆಗೂ ಸಿಎಂ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜೊತೆಗೆ ಗ್ಯಾರಂಟಿ ಘೋಷಿತ ಇಲಾಖೆಗಳ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಯೋಜನೆ ಜಾರಿ ಖಾತರಿಯನ್ನ ಜನರಿಗೆ ನೀಡುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ?:ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಸರ್ಕಾರ ಆದೇಶ
ಹೀಗೆ ಘೋಷಿತ ಯೋಜನೆಗಳ ಜಾರಿ ಸಂಬಂಧ ಮಹತ್ತರ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಶುಕ್ರವಾರಕ್ಕೆ ನಿಗದಿಯಾಗಿದ್ದು, ಅಂದೇ ಯೋಜನೆಗಳ ಜಾರಿ ವಿಚಾರದ ಮಾರ್ಗಸೂಚಿ ಆಧಾರಿತ ಆದೇಶ ಹೊರಬೀಳಲಿದೆ.