ಈ ದಿನ ಸಮೀಕ್ಷೆ | ಮೋದಿ ಸರ್ಕಾರದ ಅವಧಿಯಲ್ಲಿ ಬಡವರ-ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಲೇ ಸಾಗಿದೆ!

Date:

Advertisements

ಈ ದಿನ.ಕಾಮ್‌ ನಡೆಸಿದ ಸಮೀಕ್ಷೆಯಲ್ಲಿ ಶೇ.41.83ರಷ್ಟು ಮತದಾರರು ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಬಡವರಿಗೆ ನೆರವಾಗಲು ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಗಾಗ ಹೇಳುತ್ತಲೇ ಬಂದಿದೆ. ಆದರೆ, ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಲೇ ಹೋಗುತ್ತಿದೆ.

ದೇಶದ ಜನಸಂಖ್ಯೆಯ ಶೇ.1ರಷ್ಟು ಜನರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ 40ರಷ್ಟರ ಮಾಲೀಕತ್ವ ಹೊಂದಿದ್ದಾರೆ. ಈ ಸಂಗತಿ ಶ್ರೀಮಂತ-ಬಡವರ ನಡುವಂ ಅಂತರ ಕುರಿತು ಸರ್ಕಾರೇತರ ಸಂಸ್ಥೆ ಆಕ್ಸ್‌ಫಾಮ್‌ ಇತ್ತೀಚೆಗೆ ಪ್ರಕಟಿಸಿರುವ ‘ಸರ್ವೈವಲ್‌ ಆಫ್‌ ದಿ ರಿಚ್ಚೆಸ್ಟ್‌: ದಿ ಇಂಡಿಯಾ ಸ್ಟೋರಿ’ಹೆಸರಿನ ವರದಿಯಲ್ಲಿ ಬಹಿರಂಗವಾಗಿದೆ.

Advertisements

70 ಕೋಟಿ ಜನರು ಹೊಂದಿರುವಷ್ಟು ಸಂಪತ್ತನ್ನು ದೇಶದ 21 ವ್ಯಕ್ತಿಗಳೇ ಹೊಂದಿದ್ದಾರೆ. ಶೇ.50ರಷ್ಟು ಜನರಲ್ಲಿ ಇರುವುದು ಒಟ್ಟು ಸಂಪತ್ತಿನ ಶೇ 3ರಷ್ಟು ಭಾಗ ಮಾತ್ರ ಎಂಬುದು ದೇಶದ ಸಂಪತ್ತಿನ ಅಸಮತೋಲನವನ್ನು ಎತ್ತಿ ತೋರಿಸುತ್ತೆ.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನ ಜನರು ಸಂಪತ್ತನ್ನು ಕಳೆದುಕೊಂಡರೆ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಸಾಂಕ್ರಾಮಿಕ ಆರಂಭವಾದಾಗಿನಿಂದ 2022ರ ನವೆಂಬರ್‌ವರೆಗಿನ ಅವಧಿಯಲ್ಲಿ ಶತಕೋಟ್ಯಧೀಶರ ಸೊತ್ತು ಶೇ 121ರಷ್ಟು ಏರಿಕೆಯಾಗಿರುವುದು ಗಮನಾರ್ಹ. ಅಂದರೆ ಪ್ರತಿದಿನ ₹3,608 ಕೋಟಿಯಷ್ಟು ಅವರ ಸಂಪತ್ತು ಹೆಚ್ಚಳವಾಗಿದೆ.

2020ರಲ್ಲಿ ಶತಕೋಟ್ಯಧೀಶರ ಶ್ರೀಮಂತರ ಸಂಖ್ಯೆಯು 102 ಇದ್ದರೆ, 2022ರಲ್ಲಿ ಅದು 166ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಅಸಮಾನತೆಯು ಹೆಚ್ಚುತ್ತಲೇ ಇದೆ ಎಂಬುದು ಇದರಿಂದ ಅತ್ಯಂತ ಸ್ಪಷ್ಟವಾಗುತ್ತದೆ.

ವರದಿಗಳ ಪ್ರಕಾರ ಭಾರತವು ತನ್ನ ನೆರೆಯ ಬಾಂಗ್ಲಾದೇಶಕ್ಕಿಂತ ತಲಾ ಆದಾಯದ ವಿಷಯದಲ್ಲಿ ಹಿಂದೆ ಬಿದ್ದಿದೆ. ಭಾರತದ ತಲಾ ಆದಾಯವು ವಾರ್ಷಿಕವಾಗಿ 1,947 ಡಾಲರ್‌ ಇದ್ದರೆ, ಇದು ಬಾಂಗ್ಲಾದೇಶಕ್ಕಿಂತ 280 ಡಾಲರ್‌ ಕಡಿಮೆಯೇ ಇದೆ. ಬಾಂಗ್ಲಾದೇಶವು 2,064 ತಲಾ ಆದಾಯ ಹೊಂದಿದೆ ಎಂಬುದು ವರದಿಗಳಿಂದ ತಿಳಿದುಬಂದಿದೆ.

ಇದನ್ನೆಲ್ಲ ಗಮನಿಸಿದರೆ ದೇಶದ ಸಂಪತ್ತು ಹೇಗೆ ಹಂಚಿಕೆಯಾಗುತ್ತಿದೆ ಎಂಬುದಕ್ಕೆ ಸರ್ಕಾರದ ನೀತಿಯ ಕೊಡುಗೆಯೂ ಮುಖ್ಯ ಕಾರಣ ಇರುತ್ತದೆ. ಹಾಗಾಗಿಯೇ ಬಡತನ ಹೆಚ್ಚಳವಾದಾಗ ಮತ್ತು ಬಡವರು ಹಾಗೂ ಶ್ರೀಮಂತರ ನಡುವಣ ಅಂತರ ಹೆಚ್ಚುತ್ತಲೇ ಹೋದಾಗ ಸರ್ಕಾರ ಅದಕ್ಕೆ ಉತ್ತರ ಕೊಡಲೇಬೇಕಾಗುತ್ತದೆ. ಆದರೆ ಮೋದಿ ಬಳಿ ಇದಕ್ಕೆ ಸ್ಪಷ್ಟ ಉತ್ತರವೇ ಇಲ್ಲ!

ಬಡವರಿಗೆ ನೆರವಾಗಲು ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಗಾಗ ಹೇಳುತ್ತಲೇ ಬಂದಿದೆ. ಆದರೆ, ಬಡತನ ನಿರ್ಮೂಲನೆ ಆಗಬೇಕಿದ್ದರೆ ಜನರ ಆದಾಯದಲ್ಲಿ ಹೆಚ್ಚಳ ಆಗಬೇಕು ಅಲ್ವಾ? ಸ್ವತಂತ್ರವಾಗಿಗಳಿಸುವ ವ್ಯವಸ್ಥೆ ಇರಬೇಕಲ್ವಾ? ಜೊತೆಗೆ ಸರ್ಕಾರದ ಕೊಡುಗೆಗಳ ಮೇಲೆ ಅವಲಂಬನೆಯಾಗುವ ಸ್ಥಿತಿ ಜನರಿಗೆ ಇರಬಾರದು ಅಲ್ವಾ?

ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಡತನ ನಿರ್ಮೂಲನೆಯ ವೇಗ ಕುಂಠಿತಗೊಂಡಿದೆ. ನೋಟು ರದ್ದತಿಯ ಬಳಿಕ ಮತ್ತು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಲಕ್ಷಾಂತರ ಜನರು ಮತ್ತೆ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಅವರಿಗೆ ಚೇತರಿಸಿಕೊಳ್ಳಲು ಕೂಡ ಸಾಧ್ಯವಾಗಿಲ್ಲ. ಬಡವರು ಬಡವರಾಗಿಯೇ ಇದ್ದಾರೆ. ಅನುಕೂಲವಂತ ವರ್ಗದ ಕೆಲವೇ ಕೆಲವು ಜನರು ಸಂಪತ್ತಿನ ಬಹುಭಾಗವನ್ನು ಕೂಡಿಟ್ಟುಕೊಂಡರೇ ದೇಶದ ಜನತೆ ಬದುಕುವುದು ಹೇಗೆ?

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಪತ್ತಿನ ಅಸಮತೋಲನ, ನಿರುದ್ಯೋಗ ನಿರಾಶೆಗಳ ನಡುವೆಯೂ ದೇಶದುದ್ದಗಲಕ್ಕೂ ರಂಗೇರಿದೆ. ಇಂತಹ ಹೊತ್ತಲ್ಲಿ ಈ ದಿನ.ಕಾಮ್‌ ನಡೆಸಿದ ಸಮೀಕ್ಷೆಯಲ್ಲೂ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಬಗ್ಗೆ ಹೆಚ್ಚಿನ ಮತದಾರರು ಧ್ವನಿ ಎತ್ತಿದ್ದಾರೆ. ಬಿಜೆಪಿ-ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ನಡೆಸಿದ ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಅಸಮಾನತೆ ಹೆಚ್ಚುತ್ತಲೇ ಇದೆ ಎಂಬ ನಿರಾಶಾದಾಯಕ ಚಿತ್ರಣ ಸಮೀಕ್ಷೆಯಿಂದ ಬಹಿರಂಗವಾಗಿದೆ.

Rich and poor-1

2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರ ನಾಡಿಮಿಡಿತ ಏನಿದೆ ಎಂಬುದರ ಕುರಿತು ಜನರ ಬದುಕಿಗೆ ಸಂಬಂಧಿಸಿದ ಪ್ರಶ್ನೆಗಳೊಂದಿಗೆ ನಿಖರ ಅಂಕಿ-ಅಂಶ ಸಮೇತ ಈ ದಿನ.ಕಾಮ್‌ ಸಮೀಕ್ಷೆಯೊಂದನ್ನು ರಾಜ್ಯದ ಮುಂದಿಟ್ಟಿತ್ತು. ಕೊನೆಗೆ ಚುನಾವಣೆ ಫಲಿತಾಶ ಪ್ರಕಟವಾದಾಗ ಆ ಸಮೀಕ್ಷೆ ನೂರಕ್ಕೆ ನೂರರಷ್ಟು ನಿಜವಾಗಿತ್ತು.

ಅದೇ ವಿಶ್ವಾಸಾರ್ಹತೆಯೊಂದಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರ ಒಲವು ಹೇಗಿದೆ ಎಂಬುದನ್ನು ಎಂಬುದನ್ನು ಈಗಾಲಲೇ ರಾಜ್ಯದ ಮುಂದಿಟ್ಟಾಗಿದೆ. ಈ ಸಮೀಕ್ಷೆಯ ಭಾಗವಾಗಿ ಕೇಳಲಾದ ‘ಬಿಜೆಪಿ-ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ನಡೆಸಿದ ಕಳೆದ ಹತ್ತು ವರ್ಷಗಳಲ್ಲಿ ಈ ಸಮಸ್ಯೆಗಳು ಕಡಿಮೆಯಾಗಿವೆಯೇ ಅಥವಾ ಹೆಚ್ಚಾಗಿದೆಯೇ ಎಂಬುದರ ಮುಖ್ಯ ಪ್ರಶ್ನೆಯಡಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರದ ಬಗ್ಗೆ ಮತದಾರರನ್ನು ಪ್ರಶ್ನಿಸಿದಾಗ ರಾಜ್ಯದಲ್ಲಿ ಒಟ್ಟಾರೆ ಶೇ.41.83ರಷ್ಟು ಮತದಾರರು ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇನ್ನು ಶೇ.31.59ರಷ್ಟು ಮತದಾರರು ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಶೇ.18.12ರಷ್ಟು ಮತದಾರರು ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗಿಯೂ ಇಲ್ಲ, ಕಡಿಮೆಯಾಗಿಯೂ ಇಲ್ಲ ಎಂದಿದ್ದಾರೆ. ಉಳಿದ ಶೇ.8.46ರಷ್ಟು ಮತದಾರರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿ, ತಟಸ್ಥವಾಗಿದ್ದಾರೆ.

ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಮತದಾರರು ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಬಗ್ಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ನೋಡಿದರೆ, ಶೇ. 40.07ರಷ್ಟು ಪದವಿ ಮತ್ತು ಸ್ನಾತಕೋತ್ತರ ಪದವಿ ಮತದಾರರು ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗಿದೆ ಎಂದಿದ್ದಾರೆ. ಶೇ.37.74ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ. ಶೇ.16.27ರಷ್ಟು ಯಾವುದೇ ಬದಲಾವಣೆಯಾಗಿಲ್ಲ ಎಂದಿದ್ದಾರೆ. ಶೇ.5.91ರಷ್ಟು ಈ ಬಗ್ಗೆ ಏನನ್ನೂ ಹೇಳಿಲ್ಲ.

18-25 ವಯೋಮಾನದವರು ಏನು ಹೇಳುತ್ತಾರೆ?

18-25 ವರ್ಷದೊಳಗಿನ ಮತದಾರರು ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಶೇ.40.76 ರಷ್ಟು ಹೆಚ್ಚಾಗಿದೆ ಎಂದರೆ, ಶೇ.31.99ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ. ಯಾವುದೇ ಬದಲಾವಣೆಯೂ ಇಲ್ಲ ಎಂದು ಶೇ.18.79ರಷ್ಟು ಹೇಳಿದ್ದರೆ, ಶೇ.5.45ರಷ್ಟು ಮಾತೇ ಆಡಿಲ್ಲ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X