- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರ ಕಾರ್ಯಗತಗೊಳಿಸಬೇಕಾಗಿದೆ: ರಷ್ಯಾ ಅಧ್ಯಕ್ಷ
- ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೀತಿ ಯಾವ ರೀತಿಯಲ್ಲಿ ವೈಫಲ್ಯ ಎಂಬುವುದಕ್ಕೆ ಸ್ಪಷ್ಟ ಉದಾಹರಣೆ
ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ನಿಲ್ಲಬೇಕೆಂದರೆ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯೇ ಪರಿಹಾರ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದಾರೆ.
ಇಂದು ರಷ್ಯಾಕ್ಕೆ ಭೇಟಿ ನೀಡಿದ್ದ ಇರಾಕ್ ಪ್ರಧಾನ ಮಂತ್ರಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಈ ಹೇಳಿಕೆ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಬಗ್ಗೆ ತಮ್ಮ ಮೊದಲ ಸಾರ್ವಜನಿಕ ಹೇಳಿಕೆ ನೀಡಿರುವ ಪುಟಿನ್, ಅಮೆರಿಕವು ಪ್ಯಾಲೆಸ್ತೀನ್ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಇಸ್ರೇಲ್ ಪರವಾಗಿ ತನ್ನ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
🇷🇺🇵🇸 President Putin of Russia calls for implementation of the UN Security Council decision to create an independent sovereign Palestinian state, during his meeting with the Prime Minister of Iraq. pic.twitter.com/bEYTYtzaMq
— Jackson Hinkle 🇺🇸 (@jacksonhinklle) October 10, 2023
“ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೀತಿ ಯಾವ ರೀತಿಯಲ್ಲಿ ವೈಫಲ್ಯ ಎಂಬುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಈ ಮಾತನ್ನು ನಾನು ಮಾತ್ರ ಅಲ್ಲ, ನನ್ನೊಂದಿಗೆ ಅನೇಕರು ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಅವರೊಂದಿಗೆ ಸಾರ್ವಜನಿಕ ಮಾತುಕತೆ ವೇಳೆ ರಷ್ಯಾ ಅಧ್ಯಕ್ಷ ಪ್ರಸ್ತಾಪಿಸಿದ್ದಾರೆ.
🇷🇺🇮🇶🇵🇸🇮🇱 Putin to the Iraqi President: The conflict between Israel and Gaza shows a failure in US policy in the Middle East.
The solution to the Israeli-Palestinian conflict is the establishment of a Palestinian state.#Palestine #Hamas #Gaza #Israel pic.twitter.com/qUGUGunmld— Black hat (@WorldObserver0) October 10, 2023
“ವಾಷಿಂಗ್ಟನ್ ಸಂಘರ್ಷವನ್ನು ನಿಯಂತ್ರಿಸುವಲ್ಲಿ ತನ್ನದೇ ಏಕಸ್ವಾಮ್ಯ ನೀತಿಯನ್ನು ಹೊಂದಲು ಪ್ರಯತ್ನಿಸಿತ್ತು. ಆದರೆ ದುರದೃಷ್ಟವಶಾತ್ ಅದು ಎರಡೂ ಕಡೆಯವರಿಗೆ ಸ್ವೀಕಾರಾರ್ಹವಾಗುವಂತಹ ನೀತಿಯನ್ನು ರಚಿಸುವುದಕ್ಕೆ ಚಿಂತಿಸಲಿಲ್ಲ. ಪ್ರತಿ ಬಾರಿಯೂ, ಪ್ಯಾಲೆಸ್ತೀನ್ ಜನರ ಮೂಲಭೂತ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೆಲವೊಂದು ನೀತಿ ರೂಪಿಸಿದೆ” ಎಂದು ಪುಟಿನ್ ಅಮೆರಿಕದ ವಿರುದ್ಧ ಆರೋಪಿಸಿದ್ದಾರೆ.
BREAKING:
VLADIMIR PUTIN:
“We need to implement the decision of the UN Security Council on the creation of an independent sovereign Palestinian state.” pic.twitter.com/76vwG35w9k
— Megatron (@Megatron_ron) October 10, 2023
ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ನಿಲ್ಲಬೇಕೆಂದರೆ ಸ್ವತಂತ್ರ ಸಾರ್ವಭೌಮ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯೇ ಪರಿಹಾರ. ಪ್ಯಾಲೆಸ್ತೀನ್ ರಾಷ್ಟ್ರದ ರಚನೆಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರವನ್ನು ನಾವು ಕಾರ್ಯಗತಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.