ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೋ ಮಾಡಿದ್ದರು. ಈಗ ವಿಭಜನೆಯ ಮಾತನಾಡುತ್ತಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ವಿರುದ್ಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಡದಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕಲ್ಲು ಒಡೆದುಕೊಂಡಿದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ? ಬಡವರನ್ನು ಲೂಟಿ ಮಾಡಿಕೊಂಡು ಗುಡ್ಡೆ ಹಾಕಿದ್ದಾರೆ. ಅಂಥವರನ್ನು ದೇಶ ಕಟ್ಟು ಅಂತ ಕಳುಹಿಸಿದರೆ ಅವರು ದೇಶ ಕಟ್ಟುತ್ತಾರಾ? ಅವರ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾರೆ ಅಷ್ಟೇ” ಎಂದು ಹರಿಹಾಯ್ದರು.
“ಸಂಸದ ಡಿ ಕೆ ಸುರೇಶ್ ಅವರು ದೇಶ ವಿಭಜನೆ ಬಗ್ಗೆ ಮಾತನಾಡಿ, ಅದಕ್ಕೆ ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ ಮಾಡುತ್ತಿದೆ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಕಾರಣ ಕೊಟ್ಟಿದ್ದಾರೆ. ಇದು ಅಪ್ರಬುದ್ಧ ಹೇಳಿಕೆ” ಎಂದಿ ಟೀಕಿಸಿದರು.
ಸಂಘರ್ಷದಿಂದ ಹಣ ಪಡೆಯಲು ಸಾಧ್ಯವಿಲ್ಲ
“ಸಂಘರ್ಷದಿಂದ ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದಿಂದ ಪಡೆಯಲು ಸಾಧ್ಯವಿಲ್ಲ. ವಾಸ್ತವವನ್ನು ಅವರಿಗೆ ಮನವರಿಕೆ ಮಾಡಬೇಕು. ಕೇಂದ್ರ ಸರ್ಕಾರದ ಮನವೊಲಿಸಿ ಹಣ ಪಡೆಯಬೇಕು. ಅದನ್ನು ಬಿಟ್ಟು ಇವರ ಬಾಲಿಷ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯಲ್ಲ” ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರವಾಹಕ್ಕೆದುರು ದಶಕ ಕಾಲದ ಈಜು- Scroll.in ಗೆ ಅಭಿನಂದನೆ!
ಹಣ ಹಂಚಿಕೆ ಮೋದಿ ಶುರುಮಾಡಿದ್ದಲ್ಲ
“ದೇಶದ ಮೊದಲನೇ ಬಜೆಟ್ 174 ಕೋಟಿ ಇತ್ತು. ಆಗ ದೇಶದಲ್ಲಿ ಆಹಾರದ ಕೊರತೆ ಇತ್ತು. ಆಗಿನಿಂದಲೂ ಸರ್ಕಾರಗಳು ಬಜೆಟ್ ಮಂಡಿಸಿಕೊಂಡು ಬಂದಿವೆ. ನಾವು ಹಣಕಾಸು ಆಯೋಗಗಳನ್ನು ಮಾಡಿಕೊಂಡಿದ್ದೇವೆ. ಅವರು ಎಲ್ಲ ರಾಜ್ಯಕ್ಕೂ ಭೇಟಿಕೊಟ್ಟು ಪರಿಶೀಲನೆ ಮಾಡುತ್ತಾರೆ. ಯಾವ ರಾಜ್ಯಕ್ಕೆ ಎಷ್ಟು ಹಣಬೇಕು ಎಂಬ ವರದಿ ಕೊಡುತ್ತಾರೆ. ಯಾವ ರಾಜ್ಯ ಅಭಿವೃದ್ಧಿ ಆಗಿಲ್ಲ, ಯಾವ ರಾಜ್ಯ ಅಭಿವೃದ್ಧಿ ಆಗಿದೆ ಎಂಬುದನ್ನು ನೋಡಿಕೊಂಡು ಹಣ ಹಂಚುತ್ತಾರೆ. ಈ ಹಂಚಿಕೆ ವ್ಯವಸ್ಥೆಯನ್ನು ಕಾಂಗ್ರೆಸ್ ಇದ್ದಾಗಲೇ ಪ್ರಾರಂಭ ಮಾಡಿತ್ತೇ ವಿನಃ ಪ್ರಧಾನಿ ಮೋದಿ ಬಂದು ಶುರು ಮಾಡಿದ್ದಲ್ಲ” ಎಂದರು.
ಅವರು ಬಿರ್ಯಾನಿ ತಿಂದರು ಪಕೋಡಾ ತಿಂದರೂ ಸರಿ,, ನೀವು ಮಾಜಿ ಜಾತ್ಯತೀತರಾಗಿದ್ದು ಯಾವ ಉದ್ದೇಶಕ್ಕಾಗಿ,,, ನಿಮ್ಮದೇ ಆದ ಕೆಲವು ಕ್ಷೇತ್ರಗಳಲ್ಲಿ ಕೋಮುವ್ಯಾಧಿಗಳನ್ನು ಬಿಟ್ಟುಕೊಂಡು ಕೊನೆಗೆ ಆ ಕ್ಷೇತ್ರಗಳನ್ನೂ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ,,, ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ನೋಡಿರುವಿರಿ,, ನಿಮ್ಮ ಕಾರ್ಯಕರ್ತರು ನಿಮ್ಮ ವಿರೋಧವಾಗಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ,, ಬಿಜೆಪಿ ಜೊತೆ ಕೈಜೋಡಿಸಿದ ಬಹುತೇಕ ಪ್ರಾದೇಶಿಕ ಪಕ್ಷಗಳು ಕೊನೆಗೆ ತಮ್ಮ ಅಸ್ತಿತ್ವ ಕಳೆದುಕೊಂಡು,, ನಾಮಕಾವಸ್ಥೆ ಆಗಿ ಉಳಿದಿರುವ ಬೇಕಾದಷ್ಟು ಉದಾಹರಣೆಗಳು ದೇಶದಲ್ಲಿ ಇವೆ
ಈ ಕಾಂಗ್ರೆಸ್ಸಿಗರು ಸಿಸನಲ್ ಹಿಂದುಗಳಾಗುತ್ತಾರೆ…ಸದಾ ಒಂದು ಸಮುದಾಯವನ್ನು ಓಲೈಸುವ ಕಾಂಗ್ರೆಸ್ ಅನ್ನು ಬಹುಸಂಖ್ಯಾತ ಹಿಂದೂಗಳು ನಂಬುವುದಾದ್ರೂ ಹೇಗೆ… ಅಲ್ಲದೇ, ಬಿಜೆಪಿ ಕಮ್ಯೂನಲ್ ಪಾರ್ಟಿ ಅಂತಾ ಬೊಬ್ಬಿರಿಸುವ ಕಾಂಗ್ರೆಸ್.. ವೋಟಿಗಾಗಿ ಏಕೆ ಒಂದೇ ಸಮುದಾಯವನ್ನು ಒಲೈಸುತ್ತದೆ… ನಿಜವಾದ ಕೋಮವಾದಿಗಳು ಬಿಜೆಪಿಯೋ… ಕಾಂಗ್ರೆಸ್ಸೊ…. ಗೋಸುಂಬೆ ಕಾಂಗ್ರೆಸ್ ನಂಬದ ಭಾರತೀಯರು ದೇಶ ಹಿತ ಬಯಸುವರನ್ನು ಮುಂಬರುವ ಚುನಾವಣೆಯಲ್ಲಿ ಜಾಣತನದಿಂದ ಆಯ್ಕೆ ಮಾಡಬೇಕಿದೆ…ಅದ್ರೆ ಅತ್ತ ಜಾತ್ಯತೀತರೂ ಆಗಿರದೇ, ಈ ಕಡೆ ಕೋಮುವಾದಿ ಆಗಿರದೇ, ಕೇವಲ ಅಧಿಕಾರಕ್ಕಾಗಿ ಮಂಗನಾಟವಾಡುವ ಕರ್ನಾಟಕದ ಜೆಡಿಎಸ್ ಮಾತ್ರ ಅವಕಾಶವಾದಿಯಾಗಿ ವರ್ತಿಸೋದು ಮಾತ್ರ ದುರಂತವೇ ಸರಿ….
ಎಂ. ಶಿವರಾಂ…ಬೆಂಗಳೂರು