ಮೋದಿಯ ‘ಕನಿಷ್ಠ ಸರ್ಕಾರ – ಗರಿಷ್ಠ ಆಡಳಿತ’ಕ್ಕಿದು ಸಮಯ

Date:

Advertisements

ಚುನಾವಣಾ ಭವರಸೆಗಳನ್ನು ಮುಂದಿಟ್ಟು ಆಟ ಆಡುವ ರಾಜಕಾರಣಿಗಳು, ಅವರ ವಿತರಾಣಾ ಸೂಚ್ಯಂಕವನ್ನು ಗಮನಿಸಲು ಆರಂಭಿಸಿದಾಗ ಬಿಕ್ಕಟ್ಟನ್ನು ಎದುರಿಸುತ್ತಾರೆ. ಭರವಸೆಗಳನ್ನು ನೀಡುವ ಆಟದಲ್ಲಿ ಪ್ರಧಾನಿ ಮೋದಿ ಅವರು 2014ರಿಂದ 2024ರವರೆಗೆ ಅಗ್ರಸ್ಥಾನದಲ್ಲಿದ್ದಾರೆ. ಮೂರನೇ ಅವಧಿಗೆ ಪ್ರಧಾನಿಯಾಗಿರುವ ಮೋದಿ, ಹರ್ಷೋದ್ಗಾರದಲ್ಲಿದ್ದಾರೆ. ಆದರೆ, ಚುನಾವಣೆಗಳಲ್ಲಿ ಬಿಜೆಪಿಗೆ ಕಡಿಮೆಯಾಗುತ್ತಿರುವ ಸ್ಥಾನಗಳ ಸಂಖ್ಯೆಯು ಎಚ್ಚರಿಕೆ ಮತ್ತು ತಾವು ನೀಡಿದ್ದ ಭರವಸೆಗಳನ್ನು ನೆನಪಿಸುತ್ತಿವೆ. ನೀಡಿದ್ದ ಭರವಸೆಗಳು ಏನಾದವು ಎಂದು ಪ್ರಶ್ನಿಸುತ್ತಿವೆ.

ಕಳೆದ 10 ವರ್ಷಗಳನ್ನು ಗಮನಿಸಿದರೆ, ಈಗ ಮೋದಿ ಅವರ ಜನಪ್ರಿಯತೆ ಕಡಿಮೆಯಾಗಿದೆ. ಬಹುಶಃ, ಅವರ ರಾಜಕೀಯ ದಾಳವಾಗಿದ್ದ ರಾಮಮಂದಿರ ಉದ್ಘಾಟನೆಗೊಂಡ ಅಯೋಧ್ಯೆಯಲ್ಲಿ ಮೋದಿಯೇ ಸ್ಪರ್ಧಿಸಿದ್ದರು ಸೋಲುತ್ತಿದ್ದರು ಎಂಬ ಮಾತುಗಳೂ ಇವೆ. ಅದಾಗ್ಯೂ, ಮೋದಿ ನೇತೃತ್ವದಲ್ಲಿ ಬಿಜೆಪಿ ಕೆಲವು ಅಚ್ಚರಿಗಳನ್ನು ಹುಟ್ಟುಹಾಕಿದೆ; ಅದು ಕೇರಳದಲ್ಲಿ ತನ್ನ ಖಾತೆ ತೆರೆದಿದೆ. ಒಡಿಶಾದಲ್ಲಿ ತನ್ನ ಮೊದಲ ಸರ್ಕಾರವನ್ನು ರಚಿಸಿದೆ.

ಈಗ ಅವರ ಬೆಂಬಲಿಗರು, ಅನುಯಾಯಿಗಳು, ಸ್ನೇಹಿತರು ಮತ್ತು ಪ್ರತಿಪಕ್ಷಗಳು ಮೋದಿ ಅವರು ತಮ್ಮ ‘ಮೋದಿ ಕಿ ಗ್ಯಾರಂಟಿ’ಯನ್ನು ಉಳಿಸಿಕೊಳ್ಳುವ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ತಮ್ಮ ಗ್ಯಾರಂಟಿಗಳ ಬಗ್ಗೆ ಮೋದಿ ಮಾತನಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆ.  ಗುಜರಾತ್ ಮಡೆಲ್, ಸ್ವಿಸ್ತ್ ಬ್ಯಾಂಕ್ ಹಣ, ವರ್ಷಕ್ಕೆ 2 ಕೋಟಿ ಉದ್ಯೋಗದಂತಹ ಮೋದಿ ಅವರ ಜುಮ್ಲಾಗಳು ಭಾರತೀಯರು ‘ಮೋದಿ ಕಿ ಗ್ಯಾರಂಟಿ’ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿವೆ. ಈ ನಡುವೆ, ಬಿಹಾರದಲ್ಲಿ ಕುಸಿಯುತ್ತಿರು ಸೇತುವೆಗಳು, ರೈಲ್ವೆ ಅಪಘಾತಗಳು, ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳು ಮೋದಿ ಸರ್ಕಾರದ ಕಾರ್ಯಕ್ಷಮತೆ ಮತ್ತು ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿವೆ.

Advertisements

ಹೀಗಾಗಿ, ಮೋದಿ ಅವರು ಹೊಸ ಘೋಷಣೆಗಳನ್ನು ಘೋಷಿಸಿ, ಬರೀ ಪ್ರಚಾರ ಪಡೆದುಕೊಳ್ಳುವುದು ಅಷ್ಟು ಸುಲಭವಿಲ್ಲ. ಅಲ್ಲದೆ, ಮೋದಿ ಅವರ ಹಿಂದುತ್ವ ಹೋರಾಟದ ಬಗ್ಗೆ ಭಕ್ತ ಪಡೆ ನಡೆಸುವ ಅಬ್ಬರ ಪ್ರಚಾರಗಳೂ ಕೂಡ ದುರ್ಬಲಗೊಂಡಿವೆ. ಮೋದಿ ಅವರನ್ನು ಅಂದಾಭಿಮಾನದಿಂದ ಬಿಜೆಪಿ-ಆರ್‌ಎಸ್‌ಎಸ್‌ನ ಹಿಂದುತ್ವ ಅಜೆಂಡಾಗಳಿಗೆ ಮರಳಾಗುವ ಸಮುದಾಯ ಈಗಾಗಲೇ ಬಲಪಂತೀಯ ಸಿದ್ಧಾಂತದೆಡೆಗೆ ವಾಲಿದೆ. ಹೀಗಾಗಿ, ಹೊಸದಾಗಿ ಮರಳಾಗುವ ಜನ ಸಮುದಾಯವಿಲ್ಲ. ಇಂತಹ ಸಂದರ್ಭದಲ್ಲಿ, ಭಕ್ತ ಪಡೆಯನ್ನೂ ಉಳಿಸಿಕೊಂಡು, ಜನರಲ್ಲಿ ವಿಶ್ವಾಸ ಬೆಳೆಸಿಕೊಳ್ಳುವುದು ಮೋದಿ ಅವರಿಗೆ ಸವಾಲಿನ ಕೆಲಸವಾಗಿದೆ. ಮೋದಿ ಈಗ, ತಮ್ಮ ಹಿಂದಿನ ಮೂಲಭೂತ ಭರವಸೆಗಳನ್ನು ಮರುಪರಿಶೀಲಿಸಬೇಕು, ಅದನ್ನು ಕಾರ್ಯಗತಗೊಳಿಸಲು ಕೆಲಸ ಮಾಡಬೇಕಿದೆ.

ಮೋದಿ ಅವರು ಕಳೆದ ಅವಧಿಯ ಆಡಳಿತದಲ್ಲಿ ‘ಸ್ವಚ್ಛ ಭಾರತ್’ ಮತ್ತು ‘ಗರಿಷ್ಠ ಆಡಳಿತ ಮತ್ತು ಕನಿಷ್ಠ ಸರ್ಕಾರ’ ಘೋಷಣೆಗಳನ್ನು ಬದ್ಧತೆಯಿಂದ ಜಾರಿಗೆ ತಂದಿದ್ದರೆ ಆಟದ ಅಂಗಳ ಬದಲಾಗುತ್ತಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈಗ, ತಮ್ಮ ವೈಫಲ್ಯಗಳನ್ನು ಅಧಿಕಾರಿಶಾಹಿಗಳನ್ನು ದೂರಿದರೂ, ಅದು ಭಾರತದ ಮಹತ್ವಾಕಾಂಕ್ಷೆಯ ಅಗತ್ಯಗಳನ್ನು ಬದಲಾಯಿಸುವುದಿಲ್ಲ. ಭರವಸೆಯನ್ನು ಹುಟ್ಟಿಸುವುದಿಲ್ಲ.

ದುರದೃಷ್ಟವಶಾತ್, ಈ ಹಿಂದೆ ಮೋದಿ ಅವರೇ ಹೇಳಿಕೊಂಡಂತೆ; “ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದತ್ತ ಗಮನ ಹರಿಸಬೇಕು. ದಶಕಗಳಿಂದ, ನಾವು ಅಸಾಧಾರಣವಾಗಿ ದೊಡ್ಡ ಸರ್ಕಾರಗಳನ್ನು ಹೊಂದಿದ್ದೇವೆ. ಆದರೆ, ಆಡಳಿತದ ಗುಣಮಟ್ಟವು ಸಾಕಷ್ಟು ಕಳಪೆಯಾಗಿದೆ. ಸರ್ಕಾರದ ಗಾತ್ರಕ್ಕೆ ಹೆಚ್ಚಿನ ಗಮನ ನೀಡಲಾಗಿದೆ. ಅದರ ಗುಣಮಟ್ಟದ ಆಡಳಿತಕ್ಕೆ ಹೆಚ್ಚು ಗಮನ ಕೊಡಲಾಗಿಲ್ಲ” ಎಂಬುದು ಅವರ ಆಡಳಿತಕ್ಕೂ ಅನ್ವಯವಾಗುತ್ತದೆ. ಮೋದಿ ಅವರದ್ದೂ ದುಬಾರಿ ಸರ್ಕಾರವಾಗಿದೆ.

ಹತ್ತು ವರ್ಷಗಳ ನಂತರ, ಅವರ ಸ್ವಂತ ಸರ್ಕಾರದ ವೆಚ್ಚವು ಜಿಡಿಪಿಗಿಂತ ವೇಗವಾಗಿ ಏರುತ್ತಿದೆ. ಸಂಬಳ ಮತ್ತು ಭತ್ಯೆಗಳು 2023ರಲ್ಲಿ 2.80 ಲಕ್ಷ ಕೋಟಿಯಿಂದ ಮುಂದಿನ ವರ್ಷ 3 ಲಕ್ಷ ಕೋಟಿಯನ್ನೂ ಮೀರಿ ಹೆಚ್ಚಾಗುವ ಸಾಧ್ಯತೆಯಿದೆ.

ಮೋದಿಯವರ ಮೊದಲ ಅವಧಿಯಲ್ಲಿ ಆರಂಭವಾದ ಜಂಬೂ ಕ್ಯಾಬಿನೆಟ್ ಸಂಪ್ರದಾಯ, ಈಬಾರಿಯ ಸಮ್ಮಿಶ್ರ ಸರ್ಕಾರದಲ್ಲಿಯೂ ಮುಂದುವರಿದಿದೆ. 30 ಕ್ಯಾಬಿನೆಟ್ ಸಚಿವರು, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 41 ರಾಜ್ಯ ಸಚಿವರು ಇದ್ದಾರೆ. ಅನಧಿಕೃತ ಅಂದಾಜಿನ ಪ್ರಕಾರ, ಪ್ರತಿ ಸಚಿವರು, ಅವರ ಸಿಬ್ಬಂದಿ ಮತ್ತು ಸವಲತ್ತುಗಳನ್ನು ನಿರ್ವಹಿಸಲು ಮಾಸಿಕ ವೆಚ್ಚ 1 ಕೋಟಿ ರೂ. ಆಗಿಲಿದೆ. ಅಂದರೆ, ಒಟ್ಟು 76 ಸಚಿವರಿಗಾಗಿ ಮಾಸಿಕ 76 ಕೋಟಿ ರೂ.ಗಳನ್ನು ಸರ್ಕಾರ ವ್ಯಯಿಸಲಿದೆ. ಜೊತೆಗೆ, ಪ್ರಧಾನಿ ಅವರ ವೆಚ್ಚವು ಮತ್ತಷ್ಟು ಅಧಿಕವಾಗಿರಲಿದೆ.

ಈ ಹಿಂದೆ, ರಾಜೀವ್ ಗಾಂಧಿ ಅವರು ಸಚಿವಾಲಯಗಳನ್ನು ವಿಲೀನಗೊಳಿಸುವ ಮೂಲಕ ಸರ್ಕಾರವನ್ನು ತರ್ಕಬದ್ಧಗೊಳಿಸಲು ಪ್ರಯತ್ನಿಸಿದ್ದರು; ಉದಾಹರಣೆಗೆ, ರೈಲ್ವೆ, ಭೂ ಸಾರಿಗೆ ಮತ್ತು ನಾಗರಿಕ ವಿಮಾನಯಾನವನ್ನು ಒಂದೇ ಸಚಿವಾಲಯದಡಿ ವಿಲೀನಗೊಳಿಸಲಾಗಿತ್ತು. ಆದರೆ, ರಾಜಕೀಯ ಬಲವಂತಕ್ಕೆ ಮಣಿದು, ಆ ಮಾದರಿಯನ್ನು ರದ್ದುಗೊಳಿಸಲಾಯಿತು. ಪ್ರಸ್ತುತ ಸಿಬ್ಬಂದಿ ಇಲಾಖೆಯ ಪ್ರಕಾರ, ಪ್ರತಿ ಕ್ಯಾಬಿನೆಟ್ ಸಚಿವರು 15 ಮಂದಿ ವೈಯಕ್ತಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅರ್ಹರಾಗಿದ್ದಾರೆ – ಖಾಸಗಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಸಹಾಯಕ ಖಾಸಗಿ ಕಾರ್ಯದರ್ಶಿ, ಮೊದಲ ವೈಯಕ್ತಿಕ ಕಾರ್ಯದರ್ಶಿ, ಎರಡನೇ ವೈಯಕ್ತಿಕ ಕಾರ್ಯದರ್ಶಿ, ಹಿಂದಿ ಸ್ಟೆನೋಗ್ರಾಫರ್, ಗುಮಾಸ್ತ, ಚಾಲಕ, ಅಟೆಂಡರ್ ಮತ್ತು ನಾಲ್ಕು ಪ್ಯೂನ್‌ಗಳು. ಒಂದು ವೇಳೆ, ಕ್ಯಾಬಿನೆಟ್ ಸಚಿವರು ಎರಡು ಅಥವಾ ಮೂರು ಖಾತೆಗಳನ್ನು ಹೊಂದಿದ್ದರೆ, ಅವರು ತೆರಿಗೆದಾರರ ಹಣದಿಂದ ಸಿಬ್ಬಂದಿ ಸಂಖ್ಯೆಯನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿಸಿಕೊಂಡು ಮಿನಿ ಸಾಮ್ರಾಜ್ಯವನ್ನೇ ರಚಿಸಿಳ್ಳುತ್ತಾರೆ.

ಸ್ವತಂತ್ರ ಉಸ್ತುವಾರಿ ಹೊಂದಿರುವ ಕೇಂದ್ರ ರಾಜ್ಯ ಸಚಿವರು 11 ಸದಸ್ಯರ ವೈಯಕ್ತಿಕ ಸಿಬ್ಬಂದಿಗಳ ತಂಡವನ್ನು ನೇಮಿಸಿಕೊಳ್ಳಬಹುದು. ಅದೇ ರೀತಿ, ಕೇಂದ್ರ ರಾಜ್ಯ ಸಚಿವರು 9 ಮಂದಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬಹುದು. ಮೋದಿಯವರ ಸರ್ಕಾರದಲ್ಲಿ, ಸ್ವತಂತ್ರ ಉಸ್ತುವಾರಿ ಹೊಂದಿರುವ ಎಲ್ಲ ಐದು ಸ್ವತಂತ್ರ ಕೇಂದ್ರ ರಾಜ್ಯ ಸಚಿವರ ಅಡಿಯಲ್ಲಿ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ. 41 ಕೇಂದ್ರ ರಾಜ್ಯ ಸಚಿವರಿಗೆ ಎರಡು ಅಥವಾ ಹೆಚ್ಚಿನ ಖಾತೆಗಳನ್ನು ನೀಡಲಾಗಿದೆ. ಉದಾಹರಣೆಗೆ, ಜಿತೇಂದ್ರ ಸಿಂಗ್ ಅವರು ಎರಡು ಸ್ವತಂತ್ರ ಉಸ್ತುವಾರಿಗಳನ್ನು ಮತ್ತು ನಾಲ್ಕು ಇತರ ಖಾತೆಗಳನ್ನು ಹೊಂದಿದ್ದಾರೆ. ಅವರು ಬೇಕೆಂದರೆ, 60 ವೈಯಕ್ತಿಕ ಸಿಬ್ಬಂದಿಯ ಸೈನ್ಯವನ್ನು ರಚಿಸಿಕೊಳ್ಳಬಹುದು. ಹೀಗಾಗಿ, ಬಹುತೇಕ ಸಚಿವರ ವಿವಿಧ ಕಚೇರಿಗಳಲ್ಲಿ ಕನಿಷ್ಠ 20-25 ಮಂದಿ ಕೆಲಸ ಮಾಡುತ್ತಿದ್ದಾರೆ. ಇದು ಕಚೇರಿಗಳ ನಡುವಿನ ಒಳ ವ್ಯವಹಾರವನ್ನು ಮಾತ್ರ ಹೆಚ್ಚಿಸುತ್ತದೆ. ಆದರೆ, ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ವಿಳಂಬಗೊಳಿಸುತ್ತದೆ. ಕಳೆದ 10 ವರ್ಷಗಳಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಸಂಖ್ಯೆ ಸುಮಾರು 50%ರಷ್ಟು ಹೆಚ್ಚಾಗಿದೆ.

ಈ ವರದಿ ಓದಿದ್ದೀರಾ?: ರಾಹುಲ್ ಅಬ್ಬರ | ಮಣಿಪುರದ ಬಗ್ಗೆ ತುಟಿ ಬಿಚ್ಚಿದ ಮೋದಿ!

ಹೆಚ್ಚು ಪ್ರಚಾರದಲ್ಲಿರುವ ‘ಸ್ವಚ್ಛ ಭಾರತ್ ಮಿಷನ್‌’ನ ಅಡಿಯಲ್ಲಿ ಕೊಳಕು ಬಚ್ಚಲುಗಳಲ್ಲಿ ಮೋದಿಗೆ ಪೊರಕೆ ಹಿಡಿಯಲು ಸಾಧ್ಯವಾಗಲಿಲ್ಲ. ಅವರು ಗಮನ ಸೆಳೆಯುವ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳೊಂದಿಗೆ ಫೋಟೋ ಶೂಟ್‌ಗೆ ಪೋಸು ಕೊಟ್ಟರು. ಮೋದಿ ಅವರು ಶ್ರೀಮಂತ ಮತ್ತು ಪ್ರಸಿದ್ಧ ಸಿನಿಮಾ ಸ್ಟಾರ್‌ಗಳು, ಮಾಧ್ಯಮ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ನಾಗರಿಕ ಸಮಾಜದ ಮುಖಂಡರು ಮತ್ತು ಕ್ರೀಡಾ ಪಟುಗಳನ್ನು ಸ್ವಚ್ಛ ಭಾರತದ ರಾಯಭಾರಿಗಳಾಗಿ ಆಯ್ಕೆ ಮಾಡಿದರು. ಅದರೆ, ಸ್ವತಃ ಪ್ರಧಾನಿ ಮೋದಿ ಅವರೇ ದತ್ತು ತೆಗೆದುಕೊಂಡ ಉತ್ತರ ಪ್ರದೇಶದ ಹಲವಾರು ಹಳ್ಳಿಗಳಲ್ಲಿ ಇಂದಿಗೂ ಸ್ವಚ್ಛತೆಯೂ, ಅಭಿವೃದ್ಧಿಯೂ ಕಾಣಲಾಗಿಲ್ಲ. ಸ್ವಚ್ಛ ಭಾರತಕ್ಕಾಗಿ ಸ್ಥಳೀಯ ಸಂಸ್ಥೆಗಳು, ಪುರಸಭೆಯ ಕೌನ್ಸಿಲರ್‌ಗಳು, ಆರೋಗ್ಯ ಮತ್ತು ನೈರ್ಮಲ್ಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಮತ್ತು ಯುವಕರನ್ನು ಒಳಗೊಳ್ಳುವಲ್ಲಿ ಮೋದಿ ವಿಫಲರಾಗಿದ್ದಾರೆ.

ಎಲ್ಲ ಮುನ್ಸಿಪಲ್ ಕಾರ್ಪೊರೇಶನ್‌ಗಳು ಭ್ರಷ್ಟಾಚಾರದ ಕಾರಣಗಳನ್ನು ಒಳಗೊಂಡಿವೆ. ನೈರ್ಮಲ್ಯ ಅಧಿಕಾರಿಗಳು, ಇಂಜಿನಿಯರ್‌ಗಳು, ಚುನಾಯಿತ ಕೌನ್ಸಿಲರ್‌ಗಳು ಹಾಗೂ ಕಮಿಷನರ್‌ಗಳ ಅನೈತಿಕ ಸಂಬಂಧವು ನಗರಗಳನ್ನು ಗಬ್ಬು ನಾರುವ ಕೊಳೆಗೇರಿಗಳಾಗಿ ಪರಿವರ್ತಿಸಿವೆ. ಭಾರತದ ನದಿಗಳು ಕೊಳಚೆ ಗುಂಡಿಗಳಾಗಿ ಹರಿಯುತ್ತಿವೆ. ಭಾರೀ ಮಳೆಯ ಸಂದರ್ಭದಲ್ಲಿ ರಸ್ತೆಗಳು ಮತ್ತು ಮನೆಗಳು ಜಲಾವೃತವಾಗುತ್ತಿವೆ. ಸೇತುವೆಗಳು ಕುಸಿಯುತ್ತಿವೆ. ವಿಮಾನ ನಿಲ್ದಾಣದ ಛಾವಣಿಗಳು ಕುಸಿಯುತ್ತಿವೆ ಮತ್ತು ಸೋರುತ್ತಿವೆ. ಬಸ್ ಮತ್ತು ರೈಲು ನಿಲ್ದಾಣಗಳು ನೀರಿನಿಂದ ಜಲಾವೃತವಾಗುತ್ತಿವೆ.

ಈಗ, ಹೊಸ ಸರ್ಕಾರದಲ್ಲಿ, ಹೊಸ ಸ್ವಚ್ಛ ಭಾರತ ಅಭಿಯಾನಕ್ಕೆ ಮೋದಿ ಹೊಸ ಉತ್ತೇಜನ ನೀಡಬೇಕಾಗಿದೆ. ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯಲ್ಲಾದ ವೈಫಲ್ಯಗಳಿಂದ ಪಾಠ ಕಲಿತು, ಹೊಸ ಕ್ರಮಗಳೊಂದಿಗೆ ತಮ್ಮ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕಿದೆ. ಅದರೊಂದಿಗೆ, 2029ರಲ್ಲಿ ಕೇಂದ್ರದಲ್ಲಿ ನಾಲ್ಕನೇ ಗೆಲುವು ಸಾಧಿಸಲು ಮತ್ತು ತನ್ನ ರಾಜ್ಯಗಳನ್ನು ಉಳಿಸಿಕೊಳ್ಳಲು, ಬಿಜೆಪಿಗೆ ಹೊಸ ಮೋದಿಯ ಅಗತ್ಯವಿದೆ. ಆ ಮೋದಿ ಹಿಂದುತ್ವ, ಕೋಮುವಾದಿ ದ್ವೇಷ ರಾಜಕಾರಣಕ್ಕೆ ಅಂಟಿಕೊಂಡಿದ್ದರೆ, ತನ್ನ ಮಿತ್ರರಾದ ಅದಾನಿ-ಅಂಬಾನಿಗಾಗಿಯೇ ಕೆಲಸ ಮಾಡಿದರೆ, ಮೋದಿಯ ಮುಖವಾಡ ಬಯಲಾಗಲಿದೆ. ಮೋದಿಯ ಭಕ್ತಪಡೆ ವಿಮುಖವಾಗಲಿದೆ. ಮೋದಿಯ ಸುತ್ತ ನಿರ್ಮಿತವಾಗಿರುವ ನೀರಿನ ಮೇಲಿನ ಗುಳ್ಳೆಗಳ ಕೋಟೆ ಹೊಡೆದು ಬೀಳಲಿದೆ.

ಮಾಹಿತಿ ಮೂಲ: ಟಿಎನ್‌ಐಇ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X