ಬಂಗಾಳದಲ್ಲಿ ಕಾಂಗ್ರೆಸ್‌ಗೆ 2 ಸೀಟಿನ ಆಫರ್‌ ಕೊಟ್ಟ ಟಿಎಂಸಿ; ಹಳೆಯ ಪ್ರಬಲ ಪಕ್ಷ ನೆಲೆ ಕಳೆದುಕೊಂಡಿದ್ದು ಹೇಗೆ?

Date:

Advertisements
2004ರಲ್ಲಿ ಕೇಂದ್ರದಲ್ಲಿ ಎಡಪಕ್ಷಗಳ ಜೊತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ವಿರೋಧ ಪಕ್ಷಗಳಲ್ಲಿ ಒಂದಾಗಬಹುದಿದ್ದ ಅವಕಾಶವನ್ನೂ ಕಾಂಗ್ರೆಸ್‌ ಕಳೆದುಕೊಳ್ಳುವಂತೆ ಮಾಡಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು

2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದಲ್ಲಿ ಸೀಟು ಹಂಚಿಕೆ ಚರ್ಚೆ ನಡೆಯುತ್ತಿದೆ. ಈ ನಡುವೆ, ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಕಾಂಗ್ರೆಸ್‌ ನಡುವೆ ತಿಕ್ಕಾಟ ಶುರುವಾಗಿದೆ. ಅಲ್ಲಿ, ಕಾಂಗ್ರೆಸ್‌ಗೆ 2 ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಟಿಎಂಸಿ ಹೇಳುತ್ತಿದೆ ಎನ್ನಲಾಗಿದೆ. ಇದಕ್ಕೆ ಕಾಂಗ್ರೆಸ್‌ ಅಸಮಾಧಾನಗೊಂಡಿದ್ದು, ‘ಸೀಟಿನ ಭಿಕ್ಷೆ ಬೇಡುವುದಿಲ್ಲ’ ಎಂದು ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಜನವರಿ 4 ರಂದು ಹೇಳಿದ್ದಾರೆ.

” ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು – ಮಾಲ್ಡಾ ದಕ್ಷಿಣ ಮತ್ತು ಬೆಹ್ರಾಂಪೋರ್  – ಕಾಂಗ್ರೆಸ್‌ಗೆ ಎರಡು ಸ್ಥಾನಗಳನ್ನು ನೀಡುವುದಾಗಿ ಟಿಎಂಸಿ ಹೇಳುತ್ತಿದೆ ” ಎಂದು ಬಂಗಾಳದ ಮಾಲ್ಡಾ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಸಂಸದ ಅಬು ಹಶೆಮ್ ಖಾನ್ ಚೌಧರಿ ಇತ್ತೀಚೆಗೆ ಹೇಳಿದ್ದಾರೆ. ಆದರೆ, ಟಿಎಂಸಿ ಈ ಬಗ್ಗೆ ಇನ್ನೂ ಏನನ್ನೂ ಹೇಳಿದೆ. ಆದರೆ, ಅಬು ಚೌಧರಿ ಅವರ ಹೇಳಿಕೆಯ ಬಳಿಕ ರಂಜನ್‌ ಚೌಧರಿ ಅವರು ಟಿಎಂಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಬಂಗಾಳದಲ್ಲಿ ಮೈತ್ರಿಯನ್ನು ಬಲಪಡಿಸುವ ಅಥವಾ ರೂಪಿಸುವ ಬಗ್ಗೆ ಟಿಎಂಸಿ ಗಂಭೀರವಾಗಿಲ್ಲ. ಸಿಬಿಐ (ಕೇಂದ್ರ ತನಿಖಾ ದಳ) ಮತ್ತು ಇಡಿ (ಜಾರಿ ನಿರ್ದೇಶನಾಲಯ) ಹಿಡಿತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸುವಲ್ಲಿ ಟಿಎಂಸಿ ನಿರತವಾಗಿದೆ” ಎಂದು ಅಧೀರ್ ಚೌಧರಿ ಆರೋಪಿಸಿದ್ದಾರೆ.

Advertisements

ಅಧೀರ್ ಚೌಧರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿಯ ಸೌಗತ ರಾಯ್, “ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರನ್ನು ದೂಷಿಸುವವರೊಂದಿಗೆ ಮೈತ್ರಿಗೆ ಕೈಜೋಡಿಸಲು ಸಾಧ್ಯವಿಲ್ಲ. ಬಂಗಾಳದಲ್ಲಿ ಮೈತ್ರಿ ಬೇಕಾದರೆ ಕಾಂಗ್ರೆಸ್ ಹೈಕಮಾಂಡ್ ಅಧೀರ್  ಚೌಧರಿ ಅವರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು” ಎಂದಿದ್ದಾರೆ.

ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. –  ಮುರ್ಷಿದಾಬಾದ್‌ ಪ್ರದೇಶದ ಮೂರು ಸ್ಥಾನಗಳು, ಮಾಲ್ಡಾದ ಎರಡು ಸ್ಥಾನಗಳು ಹಾಗೂ ಡಾರ್ಜಿಲಿಂಗ್, ಪುರುಲಿಯಾ ಮತ್ತು ರಾಯ್‌ಗಂಜ್ ಕ್ಷೇತ್ರಗಳಿಗೆ ಕಾಂಗ್ರೆಸ್‌ ಬೇಡಿಕೆ ಇಟ್ಟಿದೆ.

ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆಯ ವಿಚಾರದ ಕಗ್ಗಂಟು ಬರೀ ಪಶ್ಚಿಮ ಬಂಗಾಳಕ್ಕೆ ಸೀಮಿತವಾಗಿಲ್ಲ. ಹಲವು ರಾಜ್ಯಗಳಲ್ಲಿ ಇದೇ ಸಮಸ್ಯೆ ಇದೆ. ಆಯಾ ರಾಜ್ಯಗಳ ಪ್ರಬಲ ಸ್ಥಳೀಯ ಪಕ್ಷಗಳು ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಕೊಡಲು ಹಿಂದೇಟು ಹಾಕುತ್ತಿವೆ ಎಂಬುದು ಕಂಡುಬಂದಿದೆ. ಸದ್ಯ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಅಂತ್ಯಂತ ಹಳೆಯ, ಪ್ರಬಲ ಪಕ್ಷವೊಂದು ತನ್ನ ನೆಲೆ ಕಳೆದುಕೊಂಡು, ಬೆರಳೆಣಿಕೆಯ ಸ್ಥಾನಗಳಿಗಾಗಿ ಗುದ್ದಾಡುತ್ತಿರುವುದೇಕೆ ಎಂಬುದು ಪ್ರಮುಖ ಸಂಗತಿ.

ಬಂಗಾಳದಲ್ಲಿ ಕಾಂಗ್ರೆಸ್‌ ಇತಿಹಾಸದ ಇಣುಕು ನೋಟ

ಚುನಾವಣಾ ರಾಜಕಾರಣದ ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪ್ರಬಲ ಶಕ್ತಿಯಾಗಿತ್ತು. ಎರಡು ದಶಕಕ್ಕೂ ಹೆಚ್ಚು ಅವಧಿಯ ಆಡಳಿತ ನಡೆಸಿತ್ತು. ಕಾಂಗ್ರೆಸ್‌ನ ನಾಲ್ವರು ಮುಖ್ಯಮಂತ್ರಿಗಳು – ಪ್ರಫುಲ್ಲ ಚಂದ್ರ ಘೋಷ್ (1947-48), ಬಿದನ್ ಚಂದ್ರ ರಾಯ್ (1948-62), ಪ್ರಫುಲ್ಲ ಚಂದ್ರ ಸೇನ್ (1962-1967), ಮತ್ತು ಸಿದ್ಧಾರ್ಥ ಶಂಕರ್ ರೇ (1972-77) – ಬಂಗಾಳದಲ್ಲಿ ಆಡಳಿತ ನಡೆಸಿದ್ದರು.

ಆದಾಗ್ಯೂ, 1977ರ ಸಮಯದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ  ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ ಚಳುವಳಿಯು ಕೇಂದ್ರದಲ್ಲಿ ಇಂದಿರಾ ಗಾಂಧಿ ಆಡಳಿತವನ್ನು ಕೆಳಗಿಳಿಸಿತು. ಕೇಂದ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು.

ಅದೇ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿಯೂ ಕಾಂಗ್ರೆಸ್‌ ರಾಜಕೀಯವಾಗಿ ಹಿನ್ನಡೆ ಅನುಭಿವಿಸಿತು. ಜೊತೆಗೆ, ಆಂತರಿಕ ಭಿನ್ನಾಭಿಪ್ರಾಯ ಮತ್ತು ಕಚ್ಚಾಟಗಳು ಜನರಲ್ಲಿ ಮತ್ತಷ್ಟು ನಿರಾಶೆಯನ್ನು ಮೂಡಿಸಿದವರು. ನಿಧಾನವಾಗಿ ಕಾಂಗ್ರೆಸ್‌ ನೆಲೆ ಇಳಿಯುತ್ತಾ ಸಾಗಿತು. ಆ ನೆಲೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಮಾರ್ಕ್ಸ್‌ಸಿಸ್ಟ್‌ (ಸಿಪಿಐ-ಎಂ) ಆವರಿಸಿಕೊಂಡಿತು. 1977ರ ನಂತರದ 34 ವರ್ಷಗಳ ಕಾಲ ಬಂಗಾಳವನ್ನು ಸಿಪಿಐ-ಎಂ ಆಳಿತು.

ಅಲ್ಲದೆ, ಕಾಂಗ್ರೆಸ್‌ನ ಪ್ರಮುಖರಲ್ಲಿ ಒಬ್ಬರಾಗಿದ್ದ ಮಮತಾ ಬ್ಯಾನರ್ಜಿ ಅವರು 1998ರಲ್ಲಿ ಪಕ್ಷ ತೊರೆದು ಸಂತ್ವ ಪಕ್ಷವನ್ನು ಸ್ಥಾಪಿಸಿದರು. ಇದು ಕಾಂಗ್ರೆಸ್‌ ಮತ್ತಷ್ಟು ಹೊಡೆತ ನೀಡಿತು. ಮಮತಾ ಅವರು ಎಡಪಕ್ಷಗಳ 34 ವರ್ಷಗಳ ಆಡಳಿತ ಸರಣಿಯನ್ನು ಮುರಿದು, 2011ರಲ್ಲಿ ಟಿಎಂಸಿಯನ್ನು ಅಧಿಕಾರಕ್ಕೆ ತಂದರು. ಮುಖ್ಯಮಂತ್ರಿಯಾದರು.

ಬಂಗಾಳ ದಲ್ಲಿ ಕಾಂಗ್ರೆಸ್‌ ಸಂಖ್ಯೆ ನಿರಂತರ ಕುಸಿತ

1977ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಉತ್ತಮ ಪ್ರದರ್ಶನ ನೀಡಿದ್ದು, 1984ರ ಲೋಕಸಭೆ ಚುನಾವಣೆಯಲ್ಲಿ. ಇಂದಿರಾ ಗಾಂಧಿ ಹತ್ಯೆಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಎದ್ದಿತ್ತು. ಪರಿಣಾಮವಾಗಿ 48% ಮತಗಳ ಜೊತೆಗೆ ಕಾಂಗ್ರೆಸ್‌ 16 ಸ್ಥಾನಗಳನ್ನು ಗೆದ್ದಿತ್ತು.

1996ರಲ್ಲಿ 40% ಮತಗಳ ಜೊತೆಗೆ 9 ಸ್ಥಾನಗಳನ್ನು ಗಳಿಸಿತ್ತು. ಆದರೆ, 1998ರಲ್ಲಿ ಟಿಎಂಸಿ ರಚನೆಯಾದ ಪರಿಣಾಮ ಬಂಗಾಳದಲ್ಲಿ ಟಿಎಂಸಿ ವರ್ಚಸ್ಸು ಏರುತ್ತಾ ಸಾಗಿತು. ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಡ ಪಕ್ಷಗಳಿಗೆ ಸವಾಲೊಡ್ಡಿದ ಟಿಎಂಸಿ, ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿ, ಪ್ರಮುಖ ವಿರೋಧ ಪಕ್ಷವಾಯಿತು.

2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 14% ಮತಗಳನ್ನು ಪಡೆದು 6 ಸ್ಥಾನಗಳನ್ನು ಗೆಲ್ಲಲಷ್ಟೇ ಸಾಧ್ಯವಾಯಿತು. ಆದರೆ, ಆ ಅವಧಿಯಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್‌ ‘ಯುಪಿಎ-1’ ಸರ್ಕಾರ ರಚಿಸಿದ್ದರಿಂದ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತಷ್ಟು ಅವನತಿ ಕಂಡಿತು. ಎಡಪಕ್ಷಗಳೊಂದಿಗಿನ ಮೈತ್ರಿಯು ರಾಜ್ಯದಲ್ಲಿ ವಿರೋಧ ಪಕ್ಷಗಳಲ್ಲಿ ಒಂದಾಗಬಹುದಿದ್ದ ಅವಕಾಶವನ್ನೂ ಕಳೆದುಕೊಳ್ಳುವಂತೆ ಮಾಡಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

2014ರ ಲೋಕಸಭೆ ಚುನಾವಣೆಯಲ್ಲಿ 9% ಮತಗಳನ್ನು ನಡೆದ ಕಾಂಗ್ರೆಸ್‌ ಬಂಗಾಳದಲ್ಲಿ ನಾಲ್ಕನೇ ಸ್ಥಾನಕ್ಕೆ  ಕುಸಿಯಿತು. ಟಿಎಂಸಿ, ಬಿಜೆಪಿ ಹಾಗೂ ಎಡಪಕ್ಷಗಳು ಮೊದಲ ಮೂರು ಸ್ಥಾನಗಳಲ್ಲಿದ್ದವು.

2018ರ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಕಾರ್ಯಕ್ಷಮತೆಯು ತನ್ನ ಅಸಮರ್ಥತೆಯನ್ನು ಪ್ರದರ್ಶಿಸಿತು. ಆ ಸಂದರ್ಭದಲ್ಲಿ ಟಿಎಂಸಿ ಭಾರೀ ಗೆಲುವು ಸಾಧಿಸಿತು. ಟಿಎಂಸಿಗೆ ಬಿಜೆಪಿ ಪ್ರಮುಖ ಸವಾಲಾಗಿ ಹೊರಹೊಮ್ಮಿತು. ಆದರೆ, ಕಾಂಗ್ರಸ್‌ ಮತ್ತು ಎಡಪಕ್ಷಗಳು ಅಂಚಿಗೆ ತಳ್ಳಲ್ಪಟ್ಟವು.

ಇನ್ನು, 2019ರ ಲೋಕಸಭಾ ಚುನಾವಣೆಯಲ್ಲಿ, ಟಿಎಂಸಿ 22 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಿಗೆ (ಮಾಲ್ಡಾ ಮತ್ತು ಮುರ್ಷಿದಾಬಾದ್) ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕಾಂಗ್ರೆಸ್‌ಅನ್ನು ಹಲವಾರು ಸಮಸ್ಯೆಗಳು ಕಾಡುತ್ತಿವೆ

“ಕಳೆದ ಕೆಲವು ವರ್ಷಗಳಲ್ಲಿ ನಾವು ನಮ್ಮ ಹೆಚ್ಚಿನ ಶಕ್ತಿಯನ್ನು ಕಳೆದುಕೊಂಡಿದ್ದೇವೆ ಎಂಬುದು ನಿಜ. ಮುಂದಿನ ಚುನಾವಣೆ ಬಂಗಾಳದಲ್ಲಿ ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸುವ ಯುದ್ಧವಾಗಿದೆ” ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಪ್ರದೀಪ್ ಭಟ್ಟಾಚಾರ್ಯ ಹೇಳಿದ್ದಾರೆಂದು ದಿ ಕ್ವಿಂಟ್ ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ನಾಯಕರಿಗೊಂದು ಬಹಿರಂಗ ಪತ್ರ

“2001ರ ವಿಧಾನಸಭೆ, 2009ರ ಲೋಕಸಭೆ, ಮತ್ತು 2011ರ ವಿಧಾನಸಭೆ ಚುನಾವಣೆಗಳಲ್ಲಿ ಟಿಎಂಸಿ ಜೊತೆ ಕಾಂಗ್ರೆಸ್‌ ಮೈತ್ರಿ ಮೈತ್ರಿ ಮಾಡಿಕೊಂಡಿದ್ದು ಪಕ್ಷವು ಹಿಂದುಳಿಯಲು ಪ್ರಮುಖ ಕಾರಣಗಳಲ್ಲೊಂದು ಎಂದು ರಾಜ್ಯ ಕಾಂಗ್ರೆಸ್‌ನ ಹಲವರು ಹೇಳುತ್ತಾರೆ. ಮಿತ್ರರಾಷ್ಟ್ರಗಳ ಮೇಲೆ ಕಾಂಗ್ರೆಸ್‌ ಅವಲಂಬನೆ ಹೆಚ್ಚಿಸಿದ್ದು ದೊಡ್ಡ ತಪ್ಪು” ಎಂದು ಪ್ರದೀಪ್ ಹೇಳಿದ್ದಾರೆ.

“ಟಿಎಂಸಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಾಗಿ ಪಕ್ಷದ ಹಿತಾಸಕ್ತಿಯನ್ನು ಬಲಿಕೊಡುವ ಹೈಕಮಾಂಡ್ ನಿರ್ಧಾರವೇ ಕಾಂಗ್ರೆಸ್‌ನಲ್ಲಿ ಇಂತಹ ದಯನೀಯ ಪರಿಸ್ಥಿತಿಗೆ ಕಾರಣವಾಯಿತು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಶಾಸಕರ ಭೇಟೆ ಮತ್ತೊಂದು ಪ್ರಮುಖ ಕಾರಣವೆಂದು ರಾಜಕೀಯ ವಿಶ್ಲೇಷಕ ಮನೋಜಿತ್ ಮೊಂಡಲ್ ಹೇಳುತ್ತಾರೆ. “ಕಾಂಗ್ರೆಸ್ ತನ್ನ ಮತಬ್ಯಾಂಕ್‌ನಲ್ಲಿ ಸ್ಥಿರವಾದ ಸವೆತ ಎದುರಿಸುತ್ತಿದೆ. ಅದರ ನಾಯಕರು ಮತ್ತು ಕಾರ್ಯಕರ್ತರು ಟಿಎಂಸಿಗೆ ಮತ್ತು ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ. ಪಕ್ಷವು ಗುಂಪುಗಾರಿಕೆಯಿಂದ ಜರ್ಜರಿತವಾಗಿದೆ. ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ನಾಯಕತ್ವದಲ್ಲಿ ಸಾಂಸ್ಥಿಕ ದೌರ್ಬಲ್ಯವಿದೆ” ಎಂದು ಅವರು ಹೇಳಿದ್ದಾರೆ.

“ಪಕ್ಷದ ಹೈಕಮಾಂಡ್ ರಾಜ್ಯ ಕಾಂಗ್ರೆಸ್‌ಅನ್ನು ದೀರ್ಘಕಾಲ ನಿರ್ಲಕ್ಷ್ಯ ಮಾಡಿದೆ ಎಂಬ ಭಾವನೆ ರಾಜ್ಯ ಕಾಂಗ್ರೆಸ್‌ನಲ್ಲಿದೆ” ಎಂದು ಮೊಂಡಲ್ ಹೇಳುತ್ತಾರೆ.

ಮೂಲ: ದಿ ಕ್ವಿಂಟ್ 
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X