ರಾಹುಲ್ ಗಾಂಧಿಯನ್ನು ರಾವಣನಂತೆ ಬಿಂಬಿಸುವ ಪೋಸ್ಟರ್‌ಅನ್ನು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯನ್ನು ಕೈ ಪಕ್ಷ ತರಾಟೆಗೆ ತೆಗೆದುಕೊಂಡಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಜೈರಾಮ್ ರಮೇಶ್, ರಾಹುಲ್ ಗಾಂಧಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶವನ್ನು ಈ ಪೋಸ್ಟರ್ ಹೊಂದಿದೆ ಎಂದು ಆರೋಪಿಸಿದ್ದಾರೆ.
चुनाव पास आते ही PM मोदी ज्यादा झूठ बोलने लगे हैं। इस बार उन्होंने छत्तीसगढ़ की जनता को गुमराह करने की कोशिश की है।
एक तरफ वे चुनावी रैली में नगरनार स्टील प्लांट को 'बस्तर के लोगों की संपत्ति' बताते हैं और दूसरी तरफ उसे निजी हाथों में सौंपने की तैयारी कर चुके हैं।
कांग्रेस इसका… pic.twitter.com/71K3OXVYG3
— Congress (@INCIndia) October 5, 2023
“ರಾಹುಲ್ ಗಾಂಧಿಯನ್ನು ರಾವಣನಂತೆ ಬಿಂಬಿಸುವ ಗ್ರಾಫಿಕ್‌ನ ನಿಜವಾದ ಉದ್ದೇಶವೇನು? ಇದು ಕಾಂಗ್ರೆಸ್ ಸಂಸದ ಮತ್ತು ಪಕ್ಷದ ಮಾಜಿ ಅಧ್ಯಕ್ಷರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ, ಅವರ ತಂದೆ ಮತ್ತು ಅಜ್ಜಿಯನ್ನು ಹತ್ಯೆ ಮಾಡಲಾಗಿದೆ. ನಾವು ಇದಕ್ಕೆಲ್ಲ ಹೆದರುವುದಿಲ್ಲ” ಎಂದು ಜೈರಾಮ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
इनकी डोर उसके हाथ में है pic.twitter.com/Fl4aW7ZmxN
— Congress (@INCIndia) October 6, 2023
ಪೋಸ್ಟರ್‌ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಗೌರವಾನ್ವಿತ ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಅವರೇ, ನೀವು ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತೀರಿ? ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು ನೀವು ಒಪ್ಪುತ್ತೀರಾ? ನಿಮ್ಮ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಈ ಪೋಸ್ಟ್ ಮಾಡಲಾಗಿದೆಯೇ? ನೀವು ಹೇಳಿದ ಭರವಸೆಗಳಂತೆಯೇ ನೀವು ಮಾಡಿದ ಪ್ರಮಾಣಗಳನ್ನು ಮರೆತುಬಿಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜೈಲಿನಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ
PM Modi fears Caste Census pic.twitter.com/IdTgFQL6jW
— Congress (@INCIndia) October 5, 2023
ಮೊದಲಿಗೆ ಟ್ವಿಟರ್‌ನಲ್ಲಿ ಪ್ರಧಾನಿ ಮೋದಿಯವರನ್ನು ದೊಡ್ಡ ಸುಳ್ಳುಗಾರ” ಎಂದು ಟೀಕಿಸುವ ಮೂಲಕ ಕಾಂಗ್ರೆಸ್ ಬಿಜೆಪಿ ಪೋಸ್ಟರ್ ವಿವಾದ ಪ್ರಾರಂಭವಾಯಿತು. ಬಳಿಕ ಚಲನಚಿತ್ರದ ಪೋಸ್ಟರ್ ಹೋಲುವಂತೆ “ಪ್ರಧಾನಿ ನರೇಂದ್ರ ಮೋದಿ ಜುಮ್ಲಾ ಬಾಯ್” ಸೇರಿದಂತೆ ಸರಣಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡಲಾಯಿತು.
BJP की असलियत बता रहे हैं देश के जाने-माने शिक्षक
सुनिए 👇 pic.twitter.com/fzMw8aZ0wZ
— Congress (@INCIndia) October 5, 2023
ಬಳಿಕ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ರಾಹುಲ್ ಗಾಂಧಿಯನ್ನು ಆಧುನಿಕ ರಾವಣನಿಗೆ ಹೋಲಿಸಿ ಪೋಸ್ಟರ್ ಹಂಚಿಕೊಂಡಿತು. ಭಾರತ ಅಪಾಯದಲ್ಲಿದೆ – ಕಾಂಗ್ರೆಸ್‌ನ ನಿರ್ಮಾಣ, ಜಾರ್ಜ್ ಸೊರೊಸ್ ನಿರ್ದೇಶಿಸಿದ್ದಾರೆ, ಅವನು ದುಷ್ಪ ಧರ್ಮ ವಿರೋಧಿ ರಾಮನ ವಿರೋಧಿ, ಅವನ ಗುರಿ ಭಾರತವನ್ನು ನಾಶಮಾಡುವುದು” ಎಂದು ಬರೆಯಲಾಗಿತ್ತು.
This is PM Modi's Gujarat Model. pic.twitter.com/gDZ165Agpl
— Congress (@INCIndia) October 5, 2023
ರಾಹುಲ್ ಗಾಂಧಿಯನ್ನು “ಹೊಸ ಕಾಲದ ರಾವಣ’ ಎಂದು ತೋರಿಸುವ ಬಿಜೆಪಿ ಟ್ವೀಟ್‌ಗೆ ಕಾಂಗ್ರೆಸ್‌ನಿಂದ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿಯನ್ನು “ಅದಾನಿಯ ಗೊಂಬೆ’ ಎಂದು ಶೀರ್ಷಿಕೆ ಹೊಂದಿರುವ ಪೋಸ್ಟರ್ ಹಂಚಿಕೊಂಡು ಕೌಂಟರ್ ನೀಡಿದೆ. ಸರ್ಕಾರವನ್ನು ಅದಾನಿ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದು ಪರೋಕ್ಷವಾಗಿ ಪೋಸ್ಟರ್ ಮೂಲಕ ತಿಳಿಸಲಾಗಿದೆ.
PM मोदी के 'गुजरात मॉडल' की हकीकत देखिए।
ये तस्वीर गुजरात की है। एक आदिवासी व्यक्ति की तबीयत खराब हुई। गांव तक सड़क न होने की वजह से एंबुलेंस 1.5 किलोमीटर दूर खड़ी रही। जब तक एंबुलेंस तक पहुंचते, उससे पहले ही मरीज की मौत हो गई।
सनद रहे- गुजरात में 28 साल से BJP की… pic.twitter.com/IGXcEMoWPu
— Congress (@INCIndia) October 5, 2023