ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಮಾಡಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 13 ಬಾರಿ ಸಾರ್ವಜನಿಕವಾಗಿ ತುತ್ತೂರಿ ಊದಿದ್ದಾರೆ. ಆದರೆ ಟ್ರಂಪ್ ಹೇಳಿಕೆಗಳ ಬಗ್ಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಯಾವಾಗ ಮಾತನಾಡುವುದು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕರು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ಸುಮಾರು 26 ಪ್ರವಾಸಿಗರನ್ನು ಕೊಂದ ಬಳಿಕ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ 100ಕ್ಕೂ ಅಧಿಕ ಉಗ್ರರ ಹತ್ಯೆ ಮಾಡಿದೆ.
ಇದನ್ನು ಓದಿದ್ದೀರಾ? ಭಾರತ ಪಾಕಿಸ್ತಾನ ಕದನ ವಿರಾಮ | ಡೊನಾಲ್ಡ್ ಟ್ರಂಪ್ ನಿಜವಾದ ‘ವಾರ್ ರುಕ್ವಾ ದೀ ಪಾಪಾ’ ಎಂದ ನೆಟ್ಟಿಗರು
ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿ ದಾಳಿ ಪ್ರತಿದಾಳಿಗಳು ನಿರಂತರವಾಗಿ ನಡೆಯುತ್ತಲೇ ಇದ್ದವು. ಯುದ್ಧದ ಸ್ವರೂಪ ಪಡೆಯುತ್ತಿದ್ದಂತೆ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡಿದೆ. ಆದರೆ ವ್ಯಾಪಾರ ನಿಲ್ಲಿಸುವ ಬೆದರಿಕೆ ಹಾಕಿ ಈ ಒಪ್ಪಂದವನ್ನು ತಾನೇ ಮಾಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಹಲವು ಬಾರಿ ಹೇಳಿದ್ದಾರೆ. ಈ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಆದರೂ ಟ್ರಂಪ್ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುವಾಗ ಇದೇ ಹೇಳಿಕೆ ಪುನರುಚ್ಚರಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಈ ಹೇಳಿಕೆಗೆ ಪ್ರತ್ಯುತ್ತರ ನೀಡಿಲ್ಲ.
Today President Trump turns 79.
— Jairam Ramesh (@Jairam_Ramesh) June 14, 2025
In the 34 days between May 10, 2025 and June 13, 2025, he trumpeted publicly on 13 different occasions in 3 different countries that he had brought about a cease-fire between India and Pakistan using trade with America as a carrot and stick. He,… pic.twitter.com/kOU1VxKLZB
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಇಂದು, ಅಧ್ಯಕ್ಷ ಟ್ರಂಪ್ 79 ವರ್ಷಗಳಿಗೆ ಕಾಲಿಡುತ್ತಿದ್ದಾರೆ. 2025ರ ಮೇ 10ರಿಂದ ಜೂನ್ 13ರ ನಡುವಿನ 34 ದಿನಗಳಲ್ಲಿ ಮೂರು ವಿಭಿನ್ನ ದೇಶಗಳಲ್ಲಿ ಟ್ರಂಪ್ ಅವರು ವಿಭಿನ್ನ ಸಂದರ್ಭಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಮಾಡಿದ್ದು ತಾನೇ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ” ಎಂದು ಹೇಳಿದ್ದಾರೆ.
“ಟ್ರಂಪ್ ಅವರು ಎರಡೂ ದೇಶಗಳ ಮೇಲೆ ಸಮಾನವಾಗಿ ಹೊಗಳಿಕೆಯ ಸುರಿಮಳೆಗೈಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಯಾವಾಗ ಟ್ರಂಪ್ ಅವರ ಈ ಹೇಳಿಕೆ ಬಗ್ಗೆ ಮಾತನಾಡುವುದು” ಎಂದು ಎಕ್ಸ್ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತ-ಪಾಕ್ ಸಂಘರ್ಷ | ನೀವು ನಿಲ್ಲಿಸದಿದ್ದರೆ ಯಾವುದೇ ವ್ಯಾಪಾರ ಮಾಡಲ್ಲ ಎಂದಿದ್ದೆವು: ಡೊನಾಲ್ಡ್ ಟ್ರಂಪ್
ಇನ್ನು ಜೈರಾಮ್ ರಮೇಶ್ ಅವರು ಟ್ರಂಪ್ ಹೇಳಿಕೆಗಳನ್ನು ನೀಡಿದ ಸಂದರ್ಭಗಳ ಪಟ್ಟಿ ಮತ್ತು ವಿವರಗಳನ್ನೂ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅಮೆರಿಕ ಅಧ್ಯಕ್ಷರ ಹೇಳಿಕೆ ಮತ್ತು ಮಾಧ್ಯಮ ವರದಿಗಳ ಲಿಂಕ್‌ಗಳನ್ನು ಸೇರಿಸಲಾಗಿದೆ.
As our country is engulfed in grief over the Ahmedabad aircraft tragedy, President Trump continues to make his claims on India and Pakistan for the nth time. This was at the Kennedy Centre in Washington DC yesterday. And the Prime Minister continues to be silent on these claims. pic.twitter.com/GRd8r4gxeL
— Jairam Ramesh (@Jairam_Ramesh) June 13, 2025
ಇನ್ನೊಂದು ಟ್ವೀಟ್‌ನಲ್ಲಿ ಜೈರಾಮ್ ಅವರು, “ನಮ್ಮ ದೇಶದಲ್ಲಿ ಅಹಮದಾಬಾದ್ ವಿಮಾನ ದುರಂತ ನಡೆದ ಶೋಕದಲ್ಲಿ ನಾವಿರುವಾಗ ಅಧ್ಯಕ್ಷ ಟ್ರಂಪ್ ಭಾರತ-ಪಾಕಿಸ್ತಾನ ಕದನ ವಿರಾಮ ತಾವೇ ಮಾಡಿಸಿದ್ದು ಎಂದು ಒಂಬತ್ತನೇ ಬಾರಿಗೆ ಹೇಳಿಕೊಂಡಿದ್ದಾರೆ. ವಾಷಿಂಗ್ಟನ್ ಡಿಸಿ ಕೆನೆಡಿ ಸೆಂಟರ್‌ನಲ್ಲಿ ಈ ಭಾಷಣ ಮಾಡಲಾಗಿದೆ. ಆದರೆ ನಮ್ಮ ಪ್ರಧಾನಿ(ಮೋದಿ) ಈ ಹೇಳಿಕೆಗಳ ಬಗ್ಗೆ ತನ್ನ ಮೌನ ಮುಂದುವರೆಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
