ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಬುಧವಾರ ಪ್ರತಿಭಟನೆಯ ವೇಳೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದು, ಪೊಲೀಸರ ದೌರ್ಜನ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮೃತರನ್ನು ಪ್ರಭಾತ್ ಪಾಂಡೆ ಮತ್ತು ಮೃದುಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು, ವಿವಿಧ ಸಮಸ್ಯೆಗಳ ವಿರುದ್ಧ ನಡೆದ ಪ್ರತಿಭಟನೆ ನಡೆಸುತ್ತಿದ್ದಾಗ ಸಾವನ್ನಪ್ಪಿದ್ದಾರೆ. “ಪೊಲೀಸ್ ದೌರ್ಜನ್ಯದಿಂದಾಗಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಅಶ್ರುವಾಯುವಿನಿಂದ ಗಾಯಗೊಂಡಿದ್ದರು” ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನು ಓದಿದ್ದೀರಾ? ಅಕ್ರಮ ಗಣಿಗಾರಿಕೆ | ಲೂಟಿಕೋರರ ಪರ ನಿಂತಿರುವ ಕಾಂಗ್ರೆಸ್ ಸರ್ಕಾರ: ಎಎಪಿ ಆರೋಪ
ಉತ್ತರ ಪ್ರದೇಶ ವಿಧಾನಸಭೆ ಬಳಿ ಕಾಂಗ್ರೆಸ್ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತ ಪ್ರಭಾತ್ ಪಾಂಡೆ ‘ಪೊಲೀಸ್ ದೌರ್ಜನ್ಯದಿಂದ’ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ದೂರಿದ್ದಾರೆ.
ಗೋರಖ್‌ಪುರ ಮೂಲದ 28 ವರ್ಷದ ಪ್ರಭಾತ್ ಪಾಂಡೆ ಅವರು ಪ್ರತಿಭಟನೆ ಬಳಿಕ ತೀವ್ರ ಆಯಾಸಗೊಂಡು ಕಾಂಗ್ರೆಸ್ ಕಚೇರಿಯಲ್ಲಿದ್ದು. ಅಲ್ಲಿಂದ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆಯಲ್ಲಿ ಪ್ರಭಾತ್ ಸಾವನ್ನಪ್ಪಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ.
भाजपा शासित असम और उत्तरप्रदेश में लोकतंत्र और संविधान की फिर से हत्या हुई है।
— Rahul Gandhi (@RahulGandhi) December 18, 2024
देश भर में कांग्रेस पार्टी बाबासाहेब और संविधान के समर्थन में सत्याग्रह कर रही है। इस दौरान अत्यधिक पुलिस बल के कारण गुवाहाटी में मृदुल इस्लाम और लखनऊ में प्रभात पांडे, हमारे कांग्रेस कार्यकर्ताओं की… pic.twitter.com/gbqpEJ09s3
ಇನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಮೃತರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಆರ್ಥಿಕ ನೆರವು ನೀಡಬೇಕು ಮತ್ತು ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಅಜಯ್ ರೈ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಮೋದಿ ಸರ್ಕಾರದ ನೂತನ ಸಂಹಿತೆ ಕಾಂಗ್ರೆಸ್ ಜಾರಿ ಮಾಡಿದರೆ ವಿಧಾನಸೌಧಕ್ಕೆ ಲಗ್ಗೆ – ಸಿಐಟಿಯು
“ವೈದ್ಯರ ಪ್ರಕಾರ ದೇಹದಲ್ಲಿ ಯಾವುದೇ ಗಾಯದ ಗುರುತು ಇರಲಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುವುದು” ಎಂದು ಸೆಂಟ್ರಲ್ ಲಕ್ನೋ ಡಿಸಿಪಿ ರವೀನಾ ತ್ಯಾಗಿ ಹೇಳಿದ್ದಾರೆ.
ಅಸ್ಸಾಂನಲ್ಲೂ ಕಾಂಗ್ರೆಸ್ ಕಾರ್ಯಕರ್ತ ಸಾವು
ಪ್ರತಿಭಟನೆಯ ವೇಳೆ ಅಶ್ರುವಾಯು ಹೊಗೆಯಿಂದ ಪಕ್ಷದ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಲೀಗಲ್ ಸೆಲ್ ಸದಸ್ಯ ಮೃದುಲ್ ಇಸ್ಲಾಂ ಅವರ ಬಳಿ ಅಶ್ರುವಾಯು ಬಿದ್ದಿದೆ. ಇದರಿಂದಾಗಿ ಅವರು ಉಸಿರುಗಟ್ಟಿ ಸಾವನ್ನಪ್ಪಿದರು ಎಂದು ಕಾಂಗ್ರೆಸ್ ವಕ್ತಾರ ಬೇಡಬ್ರತ್ ಬೋರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಎರಡು ಘಟನೆಗಳ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಬಿಜೆಪಿ ಆಡಳಿತವಿರುವ ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಮತ್ತೆ ಕೊಲೆ ಮಾಡಲಾಗಿದೆ. ದೇಶಾದ್ಯಂತ ಬಾಬಾಸಾಹೇಬ್ ಮತ್ತು ಸಂವಿಧಾನವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ಸತ್ಯಾಗ್ರಹ ನಡೆಸುತ್ತಿದೆ. ಈ ಸಮಯದಲ್ಲಿ, ಗುವಾಹಟಿಯಲ್ಲಿ ಮೃದುಲ್ ಇಸ್ಲಾಂ ಮತ್ತು ಲಕ್ನೋದಲ್ಲಿ ಪ್ರಭಾತ್ ಪಾಂಡೆ ಎಂಬ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಬಲದಿಂದಾಗಿ ಸಾವಿಗೀಡಾಗಿರುವುದು ತುಂಬಾ ದುಃಖಕರ ಮತ್ತು ಖಂಡನೀಯ” ಎಂದಿದ್ದಾರೆ.
