ಲೋಕಸಭೆ ಚುನಾವಣೆಯ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲದಿದ್ದರೂ, ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ದೇಶದ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಈಗಾಗಲೇ ಕೆಲವು ಬಿಜೆಪಿ ಹಾಗೂ ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ನಡುವೆ ಆಡಳಿತಾರೂಢ ಬಿಜೆಪಿ ಮುಖಂಡರ ವಿರುದ್ಧವೇ ಪಕ್ಷದ ಕಾರ್ಯಕರ್ತರು ರೊಚ್ಚಿಗೇಳುತ್ತಿರುವ ಘಟನೆಗಳು ವರದಿಯಾಗುತ್ತಿದೆ.
ಇತ್ತೀಚೆಗೆ ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಅವರ ವಿರುದ್ಧ ಪಕ್ಷದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ಮಾಡಿದ್ದಲ್ಲದೇ, ಅಭ್ಯರ್ಥಿ ಬದಲಾಯಿಸುವಂತೆ ಹೈಕಮಾಂಡ್‌ಗೆ ಒತ್ತಡ ಹೇರಿದ್ದರು. ಈ ನಡುವೆ ಬಿಹಾರದ ಬೇಗುಸರಾಯ್‌ನಲ್ಲೂ ಕೂಡ ಇಂಥದ್ದೇ ಬೆಳವಣಿಗೆ ಇಂದು ನಡೆದಿದ್ದು, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸ್ವಕ್ಷೇತ್ರದಲ್ಲೇ ಮುಜುಗರಕ್ಕೀಡಾಗಿದ್ದಾರೆ.
केंद्रीय मंत्री गिरिराज सिंह का काफिला है जिसे देख कर लोग भड़क गए और मुर्दाबाद के नारे लगा कर स्वागत किया
चुनाव नज़दीक हैं तो कई बार ज़मीन पर भी नेता political turbulence के शिकार हो जाते हैं 🤣🤣🤣 pic.twitter.com/1ooZWZP0NJ
— Mobin LLB (@immobink) March 10, 2024
ಸಿಂಗ್ ಅವರು ಬಚ್ವಾಡಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ, ಬೇಗುಸರಾಯ್‌ನ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ತಮ್ಮ ಸ್ವಂತ ಲೋಕಸಭಾ ಕ್ಷೇತ್ರ ಬೇಗುಸರಾಯ್‌ನಲ್ಲಿ ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧವನ್ನು ಎದುರಿಸಬೇಕಾಯಿತು.
ಬಚ್ವಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿ ಗ್ರಾಮದ ಬಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಒಂದು ಕೈಯ್ಯಲ್ಲಿ ಪಕ್ಷದ ಬಾವುಟ ಹಾಗೂ ಇನ್ನೊಂದು ಕೈಯ್ಯಲ್ಲಿ ಕಪ್ಪು ಬಾವುಟಗಳನ್ನು ಪ್ರದರ್ಶಿಸಿ, ಮುರ್ದಾಬಾದ್, ಗೋ ಬ್ಯಾಕ್ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಕೆಲಹೊತ್ತು ಕೇಂದ್ರ ಸಚಿವ ಕಾರಿನಲ್ಲೇ ಕುಳಿತುಕೊಳ್ಳಬೇಕಾಯಿತು. ಆ ನಂತರ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಕಪ್ಪು ಬಾವುಟ ತೋರಿಸಿದವರನ್ನು ಸರಿಸಿ, ಮುಂದೆ ತೆರಳಲು ನೆರವಾದರು. ಈ ಬೆಳವಣಿಗೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್‌ಗೆ ಆಹಾರವಾಗಿದೆ.
ಬೇಗುಸರಾಯ್ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಪೆಪ್ಸಿ ಕಂಪೆನಿಯ ಹೊಸ ಸ್ಥಾವರದಲ್ಲಿ ಬೇಗುಸರಾಯ್‌ನ ಸ್ಥಳೀಯರಿಗೆ ಯಾವುದೇ ಪ್ರಾತಿನಿದ್ಯ ನೀಡಿಲ್ಲ. ಯಾರೊಬ್ಬರಿಗೂ ಉದ್ಯೋಗ ನೀಡಿಲ್ಲ. ಗಿರಿರಾಜ್ ಸಿಂಗ್ ಅವರಿಗೆ ಐದರಿಂದ ಹತ್ತು ಲಕ್ಷ ರೂಪಾಯಿ ಲಂಚ ನೀಡಿದವರಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಅರ್ಹರಿದ್ದವರಿಗೆ ವಂಚಿಸಲಾಗಿದೆ ಎಂದು ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
BIG BREAKING Bihar…
Hey, this is a wonderful scene in the honor of Union Minister BJP MP Giriraj Singh ji..While giving orders. to send poor people to neighboring countries, they did not realize when they were ousted from the hearts of the public…. pic.twitter.com/d6OLS8DtE3
— I-N-D-I-A (@politics_20024) March 10, 2024
“ಈವರೆಗೆ ಕ್ಷೇತ್ರದಲ್ಲಿ ಸರಿಯಾದ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಆದರೆ, ಗಿರಿರಾಜ್ ಸಿಂಗ್ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಸಕ್ರಿಯರಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಈಗ ಜನರ ಬಳಿಗೆ ತಲುಪುತ್ತಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
