2017ರ ಗೋರಖ್‌ಪುರ ಆಸ್ಪತ್ರೆಯಲ್ಲಿ 63 ಮಕ್ಕಳ ಸಾವಿನ ಪ್ರಕರಣದಲ್ಲಿ ಬಲಿಪಶುವಾಗಿದ್ದ ಡಾ ಕಫೀಲ್ ಖಾನ್, ನಟ ಶಾರುಖ್ ಖಾನ್ ಅವರ ಇತ್ತೀಚಿನ ಹಿಟ್ ಸಿನಿಮಾವಾಗಿರುವ ‘ಜವಾನ್’ನಲ್ಲಿ ಅದೇ ರೀತಿಯ ಘಟನೆಯನ್ನು ಚಿತ್ರಿಸಿದ್ದಕ್ಕಾಗಿ ಪತ್ರ ಬರೆಯುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ಸನ್ಯಾ ಮಲ್ಹೋತ್ರಾ ಮಾಡಿರುವ ಪಾತ್ರ ಡಾ. ಖಾನ್ ಅನುಭವಿಸಿರುವ ಅನುಭವದಂತಿದೆ. ಅವರು ಆರಂಭದಲ್ಲಿ ಹೀರೋ ಎಂದು ಪ್ರಶಂಸಿಸಲ್ಪಟ್ಟಿರುತ್ತಾರೆ. ಆದರೆ ದುರಂತದಲ್ಲಿ ಅವರ ಪಾತ್ರಕ್ಕಾಗಿ ನಂತರ ಬಂಧಿಸಿ, ಜೈಲಿಗೆ ಹಾಕುವ ದೃಶ್ಯವು ‘ಜವಾನ್’ ಚಿತ್ರದಲ್ಲಿದೆ.
ಹೀಗಾಗಿ, ಸಿನಿಮಾ ನೋಡಿದ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೆ ಪತ್ರ ಬರೆದಿರುವ ಡಾ. ಕಫೀಲ್ ಖಾನ್, “ಜವಾನ್ ಸಿನಿಮಾ ಒಂದು ಕಾಲ್ಪನಿಕ ಘಟನೆಯನ್ನು ಉಲ್ಲೇಖಿಸಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಗೋರಖ್‌ಪುರ ದುರಂತಕ್ಕೆ ಅದು ಹೋಲಿಕೆಯಾಗಲಿದ್ದು, ವ್ಯವಸ್ಥಿತ ವೈಫಲ್ಯಗಳು, ನಿರಾಸಕ್ತಿ ಮತ್ತು ಮುಖ್ಯವಾಗಿ, ಕಳೆದುಹೋದ ಮುಗ್ಧ ಜೀವಗಳ ಪ್ರಬಲ ಜ್ಞಾಪನೆಯಾಗಿದೆ. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯ ತುರ್ತು ಅಗತ್ಯವನ್ನು ಆ ದೃಶ್ಯಗಳು ಒತ್ತಿ ಹೇಳುತ್ತದೆ” ಎಂದು ಬರೆದಿದ್ದಾರೆ.
“ಸನ್ಯಾ ಮಲ್ಹೋತ್ರಾ ಮಾಡಿರುವ ಪಾತ್ರ ನನ್ನನ್ನು ನೇರವಾಗಿ ಉಲ್ಲೇಖಿಸದಿದ್ದರೂ, ನಾನು ಎದುರಿಸಿದ ಅನುಭವಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ತೋರಿಸಿರುವ ಆಸ್ಪತ್ರೆ ದುರಂತದ ನಿಜವಾದ ಅಪರಾಧಿ ಸಿಕ್ಕಿಬೀಳುವ ದೃಶ್ಯ ನೋಡುವಾಗ ಖುಷಿಯಾಗುತ್ತದೆ. ಆದರೆ ನಿಜ ಜೀವನದಲ್ಲಿ ನಡೆದ ಗೋರಖ್‌ಪುರ ಘಟನೆಯ ನಿಜವಾದ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಇಷ್ಟು ವರ್ಷಗಳಾದರೂ ನಾನು ಇನ್ನೂ ಕೂಡ ನನ್ನ ವೃತ್ತಿಯನ್ನು ಮರಳಿ ಪಡೆಯಲು ಹೆಣಗಾಡುತ್ತಿದ್ದೇನೆ. ಜೊತೆಗೆ, ತಮ್ಮ ಮಕ್ಕಳನ್ನು ಕಳೆದುಕೊಂಡ 63 ಪೋಷಕರು ಇನ್ನೂ ಕೂಡ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ” ಎಂದು ಶಾರೂಖ್ ಖಾನ್‌ಗೆ ಪತ್ರದಲ್ಲಿ ಹೇಳಿದ್ದಾರೆ.
Unfortunately, I wasn’t able to obtain your email address, @iamsrk sir .
Consequently, I sent the letter by post, but that also showing in transit even after many days .Therefore posting it here 🙏🏾To
The Honourable Mr. Shah Rukh Khan
Indian actor and film producer
Mannat,… pic.twitter.com/9OxtzHQJ5M— Dr Kafeel Khan (@drkafeelkhan) October 5, 2023
2017ರ ಆಗಸ್ಟ್‌ನಲ್ಲಿ ನಡೆದಿದ್ದ ಗೋರಖ್‌ಪುರ ದುರಂತವು ರಾಷ್ಟ್ರವ್ಯಾಪಿ ಗಮನ ಸೆಳೆದಿತ್ತು. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದ ಗೋರಖ್‌ಪುರದ ಸರ್ಕಾರಿ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 63 ಮಕ್ಕಳು ಸಾವನ್ನಪ್ಪಿದರು. ಆಕ್ಸಿಜನ್ ಪೂರೈಕೆದಾರರಿಗೆ ಬಾಕಿ ಪಾವತಿಸದೆ ಪೂರೈಕೆ ಸ್ಥಗಿತಗೊಂಡಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿತ್ತು.
मैंने जवान #Javan देखी तो नहीं पर लोगो ने फ़ोन मेसेज कर कह रहे आपकी याद आयी 🙏🏾
फ़िल्मी दुनिया और असली ज़िंदगी में बहुत फ़र्क़ होता है
जवान में गुनहगार स्वास्थ मंत्री वैगैरह को सजा मिल जाती है
पर यहाँ तो मुझे और उन 81 परिवार आज भी इंसाफ़ के लिए भटक रहे 😢🤲🏾
शुक्रिया @iamsrk जनाब… pic.twitter.com/YmeAzbunSX— Dr Kafeel Khan (@drkafeelkhan) September 9, 2023
ಜೀವ ಉಳಿಸುವ ಪ್ರಯತ್ನದಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಲು ಡಾ. ಕಫೀಲ್ ಖಾನ್ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿದ್ದರು. ಅವರ ಧೀರ ಪ್ರಯತ್ನಗಳು ದೇಶಾದ್ಯಂತ ಪ್ರಶಂಸಿಸಲ್ಪಟ್ಟಾಗ, ಯೋಗಿ ಸರ್ಕಾರವು ಅವರನ್ನೇ ಕರ್ತವ್ಯ ಲೋಪದ ಆರೋಪದ ಮೇಲೆ ಅವರನ್ನು ನೋಡಲ್ ಅಧಿಕಾರಿ ಹುದ್ದೆಯಿಂದ ಕಿತ್ತುಹಾಕಿತ್ತು. ಬಳಿಕ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲಾಗಿತ್ತು. ಆದರೆ ಆ ಬಳಿಕ 2019ರಲ್ಲಿ ಅವರನ್ನು ಆರೋಪ ಮುಕ್ತಗೊಳಿಸಿ ನ್ಯಾಯಾಲಯವು ಬಿಡುಗಡೆಗೊಳಿಸಿತ್ತು.