ಉತ್ತರ ಕನ್ನಡ ಕ್ಷೇತ್ರ ಈ ಬಾರಿ ಎರಡು ಪಕ್ಷಗಳು ಅಚ್ಚರಿಯ ಅಭ್ಯರ್ಥಿಗಳು ಕಣಕ್ಕಿಸಲು ಮುಂದಾಗಿದೆ. ಕಳೆದ ಬಾರಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯಾದ್ದು ಜೆಡಿಎಸ್ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ್ ಕಣದಲ್ಲಿದ್ದರು. ಈ ಬಾರಿ ಬಿಜೆಪಿ – ಜೆಡಿಎಸ್ ಮೈತ್ರಿಯಾಗಿದೆ. ಹಾಲಿ ಸಂಸದ ಅನಂತಕುಮಾರ್ ಹೆಗಡೆ ಆರು ಬಾರಿ ಸಂಸದರಾಗಿದ್ದು ಈ ಬಾರಿ ಕ್ಷೇತ್ರದಲ್ಲಿ ಬಾರಿ ವಿರೋಧವಿರುವ ಕಾರಣ ಕಣಕ್ಕೆ ಇಳಿಸುವುದು ಬಹುತೇಕ ಅನುಮಾನ. ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತದೆ ಎಂಬ ಮಾತಿದೆ.
ಕಾಂಗ್ರೆಸ್ ನಿಂದ ಅಂಜಲಿ ನಿಂಬಾಳ್ಕರ್
ಮಾರ್ಗರೇಟ್ ಆಳ್ವಾ ನಂತರ ಮತ್ತೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿಕೊಂಡಿದೆ.ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಪಕ್ಷ ಟಿಕೆಟ್ ಘೋಷಿಸಿದೆ.
ಬಿಜೆಪಿ ಇಲ್ಲಿ ಸತತ ನಾಲ್ಕು ಬಾರಿ ಜಯಗಳಿಸಿದ್ದು, ಬಿಜೆಪಿಯ ಓಟ ತಡೆಯಲು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಸುವುದೆ ಸೂಕ್ತವೆಂದು ಕಾಂಗ್ರೆಸ್ ಅಭಿಪ್ರಾಯ. 8.07 ಲಕ್ಷದಷ್ಟು ಮಹಿಳಾ ಮತದಾರರಿರುವ ಈ ಕ್ಷೇತ್ರದಲ್ಲಿದ್ದಾರೆ. ಅಂಜಲಿ ನಿಂಬಾಳ್ಕರ್ ಅವರು ಮರಾಠಾ ಸಮುದಾಯಕ್ಕೆ ಸೇರಿದ್ದಾರೆ. ಖಾನಾಪುರ, ಕಿತ್ತೂರು, ಹಳಿಯಾಳ ಕ್ಷೇತ್ರದಲ್ಲಿನ ಮರಾಠಾ ಸಮುದಾಯದ ಮತಗಳು ಹೆಚ್ಚಿವೆ. ಹಾಗೆ ಕ್ಷೇತ್ರದಲ್ಲಿ 2.02 ಲಕ್ಷ ಮರಾಠಾ ಮತಗಳಿದ್ದು ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ.
ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ?
ಹಾಲಿ ಸಂಸದ ಅನಂತಕುಮಾರ್ ಹೆಗಡೆ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ತನ್ನ ಪಕ್ಷದ ಕಾರ್ಯಕರ್ತರಿಗೂ ಸಿಗುತ್ತಿಲ್ಲವೆಂದು ಸ್ವಪಕ್ಷದಿಂದಲ್ಲೆ ಈ ಬಾರಿ ಹಾಲಿ ಸಂಸದರ ಸ್ವರ್ಧೆಗೆ ವಿರೋಧ ಅಲೆ ಜೋರಾಗಿದೆ. ಕಳೆದ ಮೂರು ತಿಂಗಳಿಂದ ಏಕಾಏಕಿ ಕ್ಷೇತ್ರದಲ್ಲಿ ಕಾಣಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದು ಕ್ಷೇತ್ರದ ಕಾರ್ಯಕರ್ತರಿಗೇ ಬೇಸರ ತರಿಸಿದೆ. ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಕಾರಣದಿಂದ ಟಿಕೆಟ್ ಮಿಸ್ ಆಗುವುದು ಪಕ್ಕ ಎನ್ನಲಾಗುತ್ತಿದೆ.
ಒಂದು ವೇಳೆ ಅನಂತಕುಮಾರ್ ಹೆಗಡೆ ಕಣಕ್ಕಿಸದಿದ್ದರೆ, ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಹರಿಪ್ರಕಾಶ್ ಕೋಣೆಮನೆ ಮತ್ತು ಚಕ್ರವರ್ತಿ ಸುಲಿಬೆಲೆ ಹೆಸರು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕೊನೆಯ ಕ್ಷಣದಲ್ಲಿ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಶಿರಸಿ ಕ್ಷೇತ್ರದಿಂದ ಸೋಲು ಕಂಡ ಕಾಗೇರಿ ಲೋಕಸಭೆ ಪ್ರವೇಶ ಮಾಡಲು ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದಾರೆ. ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಈ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಮಣೆ ಹಾಕುತ್ತೆ ಎಂಬ ಮಾತು ಇದೆ.
ಹರಿಪ್ರಕಾಶ್ ಕೋಣೆಮನೆ ಸಹಾ ಈಗಾಗಲೇ ಕಾರ್ಯಕರ್ತರನ್ನು ಭೇಟಿಮಾಡುವ ಕೆಲಸ ಶುರುಮಾಡಿದ್ದಾರೆ. ಟಿಕೆಟ್ ನೀಡುವುದಾದರೆ ಕಣಕ್ಕಿಳಿಯುತ್ತೇನೆ ಎಂದಿದ್ದಾರೆ. ಇತ್ತ ಚಕ್ರವರ್ತಿ ಸೂಲಿಬೆಲೆ ರಾಜಕೀಯ ಆಸಕ್ತಿ ಇಲ್ಲ ಎನುತ್ತಲೇ ಅವಕಾಶ ಬಂದರೆ ಸ್ವರ್ಧೆ ಮಾಡುತ್ತೇನೆ ಎಂದಿದ್ದಾರೆ.
ಒಟ್ಟಾರೆಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಹಲವು ಕಾರಣಗಳಿಂದ ಈ ಬಾರಿಯ ಚುನಾವಣೆ ಜೋರಾಗಿ ನಡೆಯಲಿದೆ. ಕಾಂಗ್ರೆಸ್‌ನಿಂದ ಅಂಜಲಿ ನಿಂಬಾಳ್ಕರ್ ಕಣಕ್ಕಿಳಿದ ಕಾರಣ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಗೆ ಟಿಕಿಟ್ ಸಿಗಬಹುದು. ಇಂದು ಸಂಜೆ ಅಥವಾ ನಾಳೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದೆ.
