ಮಹಾರಾಷ್ಟ್ರ ಸರ್ಕಾರವು ಮುಂಬೈನ ವರ್ಸೋವಾ-ಬಾಂದ್ರಾ ಸಂಪರ್ಕ ಸೇತುವೆಗೆ ‘ಸಾವರ್ಕರ್ ಸೇತು’ ಎಂದು ಮರುನಾಮಕರಣ ಮಾಡಿ ವಿವಾದ ಸೃಷ್ಟಿಸಿದೆ.
ಮೇ 28 ರಂದು ಸಾವರ್ಕರ್ ಜನ್ಮದಿನದಂದು ಮಾತನಾಡಿದ್ದ ಮುಖ್ಯಮಂತ್ರಿ ಏಕನಾಥ ಶಿಂಧೆ, ವರ್ಸೋವಾ-ಬಾಂದ್ರಾ ಸಂಪರ್ಕ ಸೇತುವೆಗೆ ಸಾವರ್ಕರ್ ಹೆಸರಿಡುವುದಾಗಿ ಘೋಷಿಸಿದ್ದರು. ಹಾಗೆಯೇ ಮುಂಬೈ ಬಂದರು ಸಾರಿಗೆ ಸಂಪರ್ಕ ಸೇತುವೆಗೆ ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನವಾ ಸೇವಾ ಅಟಲ್ ಸೇತು ಎಂದು ಮರುನಾಮಕರಣ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಏಕರೂಪ ನಾಗರಿಕ ಸಂಹಿತೆ: ಪ್ರಧಾನಿ ಹೇಳಿಕೆ ಬೆನ್ನಲ್ಲೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ತುರ್ತು ಸಭೆ
ಮುಂಬಯಿಯ ವರ್ಸೋವಾದಿಂದ ಬಾಂದ್ರಾವರೆಗೆ ಸಮುದ್ರ ಮಾಗ್ರದಲ್ಲಿ ಸಂಪರ್ಕಿಸುವ ಈ ಸೇತುವೆ ಇನ್ನೂ ನಿರ್ಮಾಣ ಹಂತದಲ್ಲಿದೆ. ಸುಮರು 17.17 ಕಿ.ಮೀ ಉದ್ದವಿದೆ. 8 ಪಥದ ಈ ಸಮುದ್ರ ಸಂಪರ್ಕ ಸೇತುವೆಯಿಂದ ಮುಂಬೈನ ಪಶ್ಚಿಮ ಎಕ್ಸ್‌ಪ್ರೆಸ್ ಹೈವೆ ಮತ್ತು ಪೂರ್ವದಲ್ಲಿರುವ ಮುಂಬೈನ ಸಬ್ ಅರ್ಬನ್ ರೈಲ್ವೆ ಮಾರ್ಗದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೆ ನಡೆದ 101 ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, “ಸ್ವಾತಂತ್ರ್ಯ ಚಳವಳಿಯಲ್ಲಿ ಮಾತ್ರವಲ್ಲ, ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಾವರ್ಕರ್ ಅವರು ಮಾಡಿದ್ದೆಲ್ಲ ಇಂದಿಗೂ ಸ್ಮರಣೀಯವಾಗಿದೆ” ಎಂದಿದ್ದರು. ಆದರೆ ವಿಪಕ್ಷಗಳು ಪ್ರಧಾನಿ ಸಾವರ್ಕರ್ ಬಗ್ಗೆ ಮಾಡಿದ ಭಾಷಣವನ್ನು ಖಂಡಿಸಿದ್ದವು.