ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಮಂಗಳವಾರ ಭೇಟಿ ನೀಡಿದ ವೇಳೆ ಅವರ ಭದ್ರತೆಯಲ್ಲಿ ಭಾರೀ ಲೋಪವಾಗಿದೆ.
ನಿನ್ನೆ ವಾರಣಾಸಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಪ್ರಯಾಣಿಸುತ್ತಿದ್ದ ಬುಲೆಟ್ ಪ್ರೂಫ್ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದ್ದು, ಅದು ಬಾನೆಟ್ ಮೇಲೆ ಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
People are fed up with PM Modi. Chamche and Chamchi won’t show this.
People are welcoming PM Narendra Modi by throwing “Chappal” in Varanasi.
Panchayat Season 3 | Season 4#Congress #ArvindKejriwal#Rahul_Ji #Javed #Himachal#NEETPaperLeakCase #NEET#HappyBirthdayRahulGandhi pic.twitter.com/xIlZmhtsqt
— Mir’khan 🍁 (@iamarshadalii) June 19, 2024
ಇಂದು ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಭದ್ರತಾ ಅಧಿಕಾರಿಯೊಬ್ಬರು ಪ್ರಧಾನಿ ಮೋದಿ ಕುಳಿತಿರುವ ವಾಹನದ ಬಾನೆಟ್ ಮೇಲೆ ಬಿದ್ದ ಚಪ್ಪಲ್ ಅನ್ನು ತೆಗೆದು ಎಸೆಯುತ್ತಾರೆ. ಜನರ ಗುಂಪಿನಲ್ಲಿದ್ದ ಯಾರೋ ಚಪ್ಪಲಿಯನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮೇಲ್ನೋಟಕ್ಕೆ ಇದು ಭದ್ರತಾ ಲೋಪ ಪ್ರಕರಣದಂತೆ ತೋರುತ್ತಿದೆ. ಕಾರಿನ ಬಾನೆಟ್ ಮೇಲೆ ಬಿದ್ದ ಚಪ್ಪಲಿಯನ್ನು ಭದ್ರತಾ ಸಿಬ್ಬಂದಿ ತೆಗೆದು ಹಾಕುತ್ತಾರೆ. ಈ ಘಟನೆಯ ನಂತರ ಪ್ರಧಾನಿಯ ಕಾರು ನಿಲ್ಲದೆ ಮುಂದೆ ಸಾಗುತ್ತದೆ.
ವಿಡಿಯೋವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯ ಧ್ವನಿ ಸಹ ಅದರಲ್ಲಿ ರೆಕಾರ್ಡ್ ಆಗಿದ್ದು, ಪ್ರಧಾನಿ ಮೋದಿಯವರ ವಾಹನದ ಮೇಲೆ ಯಾರೋ ಚಪ್ಪಲಿ ಎಸೆದಂತೆ ತೋರುತ್ತಿದೆ ಎಂದು ಹೇಳುತ್ತಿರುವುದು ರೆಕಾರ್ಡ್ ಆಗಿದೆ.
Security breach!
Video surfaces showing a slipper thrown at PM #Modi’s bulletproof car in #Varanasi. Security personnel quickly clears it. This was PM’s first visit after LokSabha elections 2024
Investigations begin on the security breach pic.twitter.com/qO2o8hoi5P— Nabila Jamal (@nabilajamal_) June 19, 2024
2024ರ ಲೋಕಸಭೆ ಚುನಾವಣೆಯ ನಂತರ ಪ್ರಧಾನಿಯವರ ಮೊದಲ ಭೇಟಿ ಇದಾಗಿತ್ತು. ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆಗಳು ಪ್ರಾರಂಭವಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಶೇ. 15ರಷ್ಟು ಕೈಗಾರಿಕಾ ಬೆಳವಣಿಗೆ ನಮ್ಮ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಸ್ಪರ್ಧಿಸಿದ್ದರು. ಇವರ ವಿರುದ್ಧ ಮೋದಿಯವರು 1,52,513 ಮತಗಳ ಸಣ್ಣ ಅಂತರದಲ್ಲಿ ಗೆದ್ದಿದ್ದರು. ಈ ಅಂತರವು 2019 ಮತ್ತು 2014 ರ ಕಳೆದ ಎರಡು ಚುನಾವಣೆಗಳಿಗಿಂತ ಕಡಿಮೆ ಅಂತರವಾಗಿದೆ.
