“ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬರೇ ಕಲೆಕ್ಷನ್ ಮಾಸ್ಟರ್. ಅವನು ರಾಜ್ಯಾಧ್ಯಕ್ಷನಾಗುವ ಮೊದಲು ಪಕ್ಷಕ್ಕಾಗಿ ಏನನ್ನೂ ಮಾಡಿಲ್ಲ. ಯಾವ ಸುಡುಗಾಡೂ ಮಾಡಿಲ್ಲ. ತನ್ನ ಅಪ್ಪ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ ಮಹಾನ್ ನಾಯಕ ವಿಜಯೇಂದ್ರ” ಎಂದು ವಿಜಯೇಂದ್ರ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, “ರಮೇಶ್ ಜಾರಕಿಹೊಳಿಗೆ ನಾಲಿಗೆ ಬಿಗಿಹಿಡಿದು ಮಾತನಾಡುವಂತೆ ವಿಜಯೇಂದ್ರ ಹೇಳಿದ್ದಾರೆ. ಇದೇ ರಮೇಶ್ ಜಾರಕಿಹೊಳಿ 17 ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಬರದಿದ್ದರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ರಮೇಶ್ ಜಾರಕಿಹೊಳಿ ಕಾರಣ. ವಿಜಯೇಂದ್ರ ಇಷ್ಟೆಲ್ಲ ದುಡ್ಡು ಮಾಡಲು ಕೂಡ ರಮೇಶ್ ಜಾರಕಿಹೊಳಿ ಕಾರಣ” ಎಂದು ಹೇಳಿದ್ದಾರೆ.
“ರಮೇಶ್ ಜಾರಕಿಹೊಳಿ ಚೆನ್ನಾಗಿ ಕೆಲಸ ಮಾಡತ್ತಿದ್ದರು. ಅವರನ್ನು ಬಲಿಕೊಟ್ಟವರು ಯಾರು? ಇದರಲ್ಲಿ ವಿಜಯೇಂದ್ರ ಪಾತ್ರವೇನು ಅಂತ ಚೆನ್ನಾಗಿ ಗೊತ್ತಿದೆ. ಪಕ್ಷ ಕಟ್ಟಲು ಯಡಿಯೂರಪ್ಪ ಒಬ್ಬರೇ ಸೈಕಲ್ ತಿಳಿದಿಲ್ಲ. ನಾವೂ ಸೈಕಲ್ ಹೊಡೆದಿದ್ದೇವೆ” ಎಂದು ಯತ್ನಾಳ್ ಹೇಳಿದ್ದಾರೆ.