ಮುಡಾ ನಿವೇಶನ ಹಗರಣದ ದೂರಿನ ಸಂಬಂಧ ರಾಜ್ಯಪಾಲರು ತಮ್ಮ ಸಂವಿಧಾನದತ್ತ ಅಧಿಕಾರ ಚಲಾಯಿಸಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಅನುವಾಗುವಂತೆ ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಲಿ” ಎಂದು ಒತ್ತಾಯಿಸಿದ್ದಾರೆ.
“ಸಾಕಷ್ಟು ದಾಖಲೆ, ಪುರಾವೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ತಮ್ಮನ್ನು ಜಗ್ಗಿಸುವವರಿಲ್ಲ ಎಂದು ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದರು” ಎಂದಿದ್ದಾರೆ.
ಇವನೊಬ್ಬ ಸತ್ಯ ಹರಿಶ್ಚಂದ್ರ,,ಬಿ ಎಸ್ ವೈ ಮುಖ್ಯಮಂತ್ರಿ ಆಗಿದ್ದಾಗ ಮತ್ತು ಹಿಂದಿನ ತಮ್ಮದೇ ಸರ್ಕಾರ ಇದ್ದಾಗ ತನ್ನ ಕರ್ಮಕಾಂಡ ಒಮ್ಮೆ ತಿರುಗಿ ನೋಡಿಕೊಂಡರೆ ಸಾಕು ಗಬ್ಬು ನಾರತೈತಿ,,ಕೇವಲ ಲಿಂಗಾಯತ ಕಾರ್ಡ ಮೇಲೆ ರಾಜಕಾರಣ ಮಾಡುವ ಕಾಲ ಹೋಯಿತು,, ಲಿಂಗಾಯತರಲ್ಲಿ ಬಹುಸಂಖ್ಯೆಯವರು ನಾಗಪೂರ ಚೌಕಿದಾರರಾದ ನಿಮ್ಮನ್ನು ತಿರಸ್ಕರಿಸಿ ಭಾಳಾ ದಿನಾ ಆಯ್ತು,,,ಪಕ್ಷದ ಇನ್ನೊಂದು ಬಣದವರು ಈಗಾಗಲೇ ಇವನ ಕುರ್ಚಿ ಎರಡು ಕಾಲು ಕಿತಗೊಂಡವರೆ,,