ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಯುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಕಳವು ನಡೆದಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ ಮತ ಕಳವು ವಿಚಾರವಾಗಿ ‘ವೋಟ್ ಚೋರಿ’ ಎಂಬ ಪದ ಬಳಸಿ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಮತ್ತು ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚುನಾವನಾ ಆಯೋಗ, ‘ವೋಟ್ ಚೋರಿ’ ರೀತಿಯ ಪದ ಬಳಕೆಯು ಮತದಾರರು ಮತ್ತು ಚುನಾವಣಾ ಸಿಬ್ಬಂದಿ ಮೇಲಿನ ದಾಳಿಯಾಗಿದೆ ಎಂದು ಹೇಳಿದೆ.
ರಾಹುಲ್ ಗಾಂಧಿ ಅವರು ಇತ್ತೀಚೆಗೆ ಪ್ರತಿಕಾಗೋಷ್ಠಿ ನಡೆಸಿದ್ದು, ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ‘ಮತ ಕಳವು’ ನಡೆದಿದೆ. ಮಹದೇವಪುರ ವ್ಯಾಪ್ತಿಯಲ್ಲಿ ಮತಚಲಾಯಿಸಲು ಕರ್ನಾಟಕದವರಲ್ಲದ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಈ ಅಕ್ರಮದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲು ನೆರವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದರು.
ಮಾತ್ರವಲ್ಲದೆ, ಬಿಹಾರದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ನಲ್ಲಿಯೂ ಚುನಾವಣಾ ಅಕ್ರಮ ನಡೆಯುತ್ತಿದೆ. ಬಿಹಾರ ಮೂಲದವರಲ್ಲದ ವ್ಯಕ್ತಿಗಳನ್ನು ಮತದಾರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಬಿಹಾರದವರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂಬುದು ಕಂಡುಬರುತ್ತಿದೆ. ಇದರ ವಿರುದ್ಧ ವಿಪಕ್ಷಗಳು ಪ್ರಶ್ನೆ ಎತ್ತುತ್ತಿವೆ.
ಇಂತಹ ಗಂಭೀರ ವಿಚಾರಗಳಿಗೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ, ಮಹದೇವಪುರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಬಿಹಾರದಲ್ಲಿ, ಮತದಾರರ ಪಟ್ಟಿಯಿಂದ ಹೊರಹಾಕಲಾದ ಮತದಾರರ ಸಮಗ್ರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸದೆ, ರಹಸ್ಯವಾಗಿರಿಸಿದೆ.
ಈ ಲೇಖನ ಓದಿದ್ದೀರಾ?: ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್ ಒತ್ತಡ
ಮತದಾರರ ಪಟ್ಟಿಯನ್ನು ತೆಗೆದುಹಾಕಿದ್ದು ಮತ್ತು ಪಟ್ಟಿಯನ್ನು ರಹಸ್ಯವಾಗಿ ಇಟ್ಟಿರುವ ಬಗ್ಗೆ ಚುನಾವಣಾ ಆಯೋಗ ಪ್ರತಿಕ್ರಿಯೆಯನ್ನಾಗಲೀ, ಉತ್ತರವನ್ನಾಗಲೀ ನೀಡಿಲ್ಲ. ಆದರೆ, ‘ವೋಟ್ ಚೋರಿ’ ಪದ ಬಳಕೆಯ ಬಗ್ಗೆ ಮಾತ್ರವೇ ಪ್ರತಿಕ್ರಿಯಿಸಿದೆ.
“1951-1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ತತ್ವ ಅಸ್ತಿತ್ವದಲ್ಲಿದೆ. ಭಾರತದ ಎಲ್ಲ ಮತದಾರರನ್ನು ‘ಚೋರ್’ ಎಂದು ಬಣ್ಣಿಸುವ ಬದಲು ಯಾವುದೇ ವ್ಯಕ್ತಿ ಯಾವುದೇ ಚುನಾವಣೆಯಲ್ಲಿ ಎರಡು ಬಾರಿ ಮತ ಚಲಾಯಿಸಿರುವುದಕ್ಕೆ ಯಾರ ಬಳಿಯಾದರೂ ಯಾವುದೇ ಪುರಾವೆ ಇದ್ದರೆ ಅದನ್ನು ಅಫಿಡವಿಟ್‌ನೊಂದಿಗೆ ಸಲ್ಲಿಸಬೇಕು” ಎಂದು ಚುನಾವಣಾ ಆಯೋಗ ಹೇಳಿದೆ.
🤔ಇವರು ಕಳ್ಳತನ ಮಾಡಬಹುದು. ಆದರೆ ಕಳ್ಳರು ಅಂತ ಕರೆಯಬಾರದು ಅಂದ್ರೆ ಹೇಗೆ. ಕಳ್ಳನಿಗೆ ಇನ್ನೇನು ಹೆಸರಿದೆ. ಎಲ್ಲರನ್ನೂ ಮತಗಳ್ಳರ ಗುರು ಮೋದಿ ಹೆಸರಲ್ಲಿ, ಮೋದಿ ಮೋದಿ ಅನ್ನಲಾಗುವುದಿಲ್ಲ ಅಲ್ವಾ 🙏🙏🙏