ನಿಮ್ಮ ರಾಜಕಾರಣ ಏನು ಇದೆಯೋ ಅದನ್ನು ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ನವೆಂಬರ್ 6ರಂದು ನಿಮ್ಮ ಸಿಡಿ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದು ಮುಸ್ಲಿಂ ಮುಖಂಡರು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಮುಸ್ಲಿಂ ಮುಖಂಡ ಎಸ್ ಎಸ್ ಖಾದ್ರಿ, ಅ.15ರಂದು ವಿಜಯಪುರದಲ್ಲಿ ‘ವಕ್ಫ್ ಹಠಾವೋ ದೇಶ ಬಚಾವೋ’ ಪ್ರತಿಭಟನೆಗೆ ಕರೆ ನೀಡಿರುವ ಯತ್ನಾಳ್‌ಗೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಮಾಜಿ ಕಾರ್ಪೊರೇಟರ್ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, “ನಾನೇನು ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಕೋರ್ಟ್ ನಿಂದ ತಮ್ಮ ವಿರುದ್ದ ಮಾನಹಾನಿ ವರದಿ ಪ್ರಸಾರ ಮಾಡದಂತೆ ತಡಯಾಜ್ಞೆ ತಂದಿದ್ದೀರಿ. ತಡೆಯಾಜ್ಞೆ ಯಾವುದಕ್ಕೆ ತಂದಿದ್ದೀರಿ ಎಂಬುದು ಯತ್ನಾಳ್ ಅವರಿಗೆ ಗೊತ್ತು” ಎಂದರು.
ವಿಜಯಪುರ ಜಿಲ್ಲೆಯ 12000 ಎಕರೆ, ವಿಜಯಪುರ ತಾಲೂಕಿನ 2643 ಎಕರೆ ಆಸ್ತಿ ವಕ್ಪ ಎಂದು ಎಂಟ್ರಿ ಮಾಡಲು ಸಚಿವ ಜಮೀರ್ ಅಹ್ಮದ್ ಖಾನ್ ಆದೇಶಿಸಿದ್ದಾರೆ. ಇದನ್ನು ವಿರೋಧಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಾಳೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ, ಚಕ್ರವರ್ತಿ ಸೂಲಿಬೆಲೆ ಹಾಗೂ ಇತರರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.