ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ: ‘ಇಂಡಿಯಾ’ ಒಕ್ಕೂಟದ ಮಾಧ್ಯಮ ನೀತಿ ಕುರಿತು ಕಾಂಗ್ರೆಸ್ ಸ್ಪಷ್ಟನೆ

Date:

Advertisements

ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿ ಒಕ್ಕೂಟದಿಂದ 14 ಮಂದಿ ಸುದ್ದಿ ವಾಚಕರನ್ನು ಬಹಿಷ್ಕರಿಸಲಾಗಿರುವ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪವನ್‌ ಖೇರಾ, “ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ ಅಥವಾ ಕಪ್ಪುಪಟ್ಟಿಗೆ ಸೇರಿಸಿಲ್ಲ. ಸಮಾಜದಲ್ಲಿ ದ್ವೇಷವನ್ನು ಹರಡುವ ಯಾರೊಂದಿಗೂ ನಾವು ಸಹಕರಿಸುವುದಿಲ್ಲ. ಅವರು ನಮ್ಮ ಶತ್ರುಗಳಲ್ಲ. ಯಾವುದೂ ಶಾಶ್ವತವಲ್ಲ, ನಾಳೆ ಅವರು ಮಾಡುತ್ತಿರುವುದು ಭಾರತಕ್ಕೆ ಒಳ್ಳೆಯದಲ್ಲ ಎಂದು ಅವರು ಅರಿತುಕೊಂಡರೆ, ನಾವು ಮತ್ತೆ ಅವರ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಾರಂಭಿಸುತ್ತೇವೆ” ಎಂದು ತಿಳಿಸಿದ್ದಾರೆ.

ಇಂಡಿಯಾ ಒಕ್ಕೂಟವು 14 ಸುದ್ದಿವಾಹಿನಿಗಳು ಮತ್ತು ಅಲ್ಲಿ ಕೆಲಸ ಮಾಡುವ 14 ಮಂದಿ ಪ್ರಮುಖ ಸುದ್ದಿ ವಾಚಕರನ್ನು ಬಹಿಷ್ಕರಿಸಲು ಹಾಗೂ ಅವರು ನಡೆಸಿಕೊಡುವ ಚರ್ಚೆಗಳಲ್ಲಿ ಭಾಗವಹಿಸದೇ ಇರಲು ಇತ್ತೀಚಿಗೆ ತೀರ್ಮಾನಿಸಿತ್ತು.

Advertisements

ನ್ಯೂಸ್ 18 ನ ಅಮನ್ ಚೋಪ್ರಾ, ಅಮಿಶ್ ದೇವಗನ್ ಮತ್ತು ಆನಂದ್ ನರಸಿಂಹನ್, ಅರ್ನಾಬ್ ಗೋಸ್ವಾಮಿ (ರಿಪಬ್ಲಿಕ್), ನವಿಕಾ ಕುಮಾರ್ (ಟೈಮ್ಸ್ ನೌ), ಚಿತ್ರಾ ತ್ರಿಪಾಠಿ, ಸುಧೀರ್ ಚೌಧರಿ (ಆಜ್‌ತಕ್), ಇಂಡಿಯಾ ಟುಡೆಯ ಶಿವ ಆರೂರ್ ಸೇರಿದಂತೆ ಅದಿತಿ ತ್ಯಾಗಿ, ಅಶೋಕ್ ಶ್ರೀವಾಸ್ತವ ಗೌರವ್ ಸಾವಂತ್, ಪ್ರಾಚಿ ಪರಾಶರ್, ರುಬಿಕಾ ಲಿಯಾಖತ್, ಸುಶಾಂತ್ ಸಿನ್ಹಾ ಅವರ ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದಿಂದ ತಮ್ಮ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಹೇಳಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಅಮೇಥಿಯಲ್ಲಿ ಅಡ್ಡಗೋಡೆಯಿಲ್ಲದೆ ಶೌಚಾಲಯ ನಿರ್ಮಾಣ; ವಿಡಿಯೋ ವೈರಲ್

“ನಾವು ಯಾವುದೇ ಸುದ್ದಿ ವಾಚಕರಿಗೆ ವಿರೋಧವಾಗಿಲ್ಲ. ಅವರು ನಡೆಸಿಕೊಡುವ ಕಾರ್ಯಕ್ರಮಗಳಲ್ಲಿ ನಮ್ಮ ಒಕ್ಕೂಟದ ನಾಯಕರು, ವಕ್ತಾರರು ಭಾಗವಹಿಸುವುದಿಲ್ಲ. ಕೆಲವೊಂದು ಮಾಧ್ಯಮ ಸಂಸ್ಥೆಗಳು ಮತ್ತು ಸುದ್ದಿ ವಾಚಕರು ದ್ವೇಷದ ಅಂಗಡಿಯನ್ನು ಇರಿಸಿಕೊಂಡಿದ್ದಾರೆಂದು” ಎಂದು ಪವನ್‌ ಖೇರಾ ನಂತರದಲ್ಲಿ ಹೇಳಿದ್ದರು.

ಮೋದಿಗಾಗಿ ನಿದ್ರೆಗೆ ಜಾರಿರುವ ಸೆಬಿ ಈಗಲಾದರೂ ಎಚ್ಚರಗೊಳ್ಳುವುದೇ?: ಜೈರಾಮ್ ರಮೇಶ್ ಪ್ರಶ್ನೆ

”ಅದಾನಿ ಸಮೂಹದ ಘಟಕಗಳ ವಿರುದ್ಧ ಮತ್ತೆ ಅಕ್ರಮ ಹಣ ವರ್ಗಾವಣೆಯ ಆರೋಪಗಳು ಕೇಳಿಬರುತ್ತಿದ್ದು, ಈ ವಿಚಾರದಲ್ಲಿ ಕ್ರಮ ಕೈಗೊಳ್ಳದ ಸೆಬಿಯ ಕ್ರಮವನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ”ಅದಾನಿ ಸಮೂಹದ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪಗಳ ಸುತ್ತ ಮತ್ತಷ್ಟು ದುರ್ನಾತ ಹೆಚ್ಚಾಗಿದೆ. ಮಾರಿಷಸ್ ಹಣಕಾಸು ನಿಯಂತ್ರಕವು ಅದಾನಿ ಸಮೂಹದ ಎರಡು ಘಟಕಗಳ ಪರವಾನಗಿಯನ್ನು ರದ್ದುಗೊಳಿಸಿರುವುದರಿಂದ ಈಗ ಸೆಬಿ ಕಾರ್ಯನಿರ್ವಹಿಸುತ್ತದೆಯೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದರು.

ಹಣಕಾಸು ಸೇವಾ ಕಾಯ್ದೆ, ಸೆಕ್ಯುರಿಟೀಸ್ ಆಕ್ಟ್, ಫೈನಾನ್ಷಿಯಲ್ ಇಂಟೆಲಿಜೆನ್ಸ್ ಸೇರಿದಂತೆ ಹಲವು ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೆಬಿಗೆ ಸಮಾನವಾದ ಮಾರಿಷಸ್‌ನ ಹಣಕಾಸು ಸೇವಾ ಆಯೋಗವು (ಎಫ್‌ಎಸ್‌ಸಿ) ಮೇ 2022 ರಲ್ಲಿ ಅದಾನಿ ಸಮೂಹದ ಷೇರುದಾರರ ಪರವಾನಗಿಯನ್ನು ರದ್ದುಗೊಳಿಸಿದೆ. ಆದರೆ ಸೆಬಿ ಅಸಹಾಯಕತೆಯನ್ನು ಇನ್ನೂ ಪ್ರತಿಪಾದಿಸುತ್ತಿದೆ. ಮೋದಿಗಾಗಿ ನಿದ್ರೆಗೆ ಜಾರಿರುವ ಸೆಬಿ ಈಗಲಾದರೂ ಎಚ್ಚರಗೊಳ್ಳುವುದೇ?” ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

“ವಿಶೇಷ ಸಂಸತ್ತಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಈ ಪ್ರಕರಣದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಯನ್ನು ಸ್ಥಾಪಿಸಬೇಕು. ಇಲ್ಲವಾದರೆ ಅದಾನಿಯ ಬೃಹತ್ ಭ್ರಷ್ಟಾಚಾರದ ವಿರುದ್ಧ ಕ್ರಮ ಸಾಧ್ಯವಾಗುವುದಿಲ್ಲ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X