ಪ್ರಧಾನಿ ನರೇಂದ್ರ ಮೋದಿ ನಮ್ಮ ದೇವರು. ಲೋಕಸಭಾ ಚುನಾವಣೆಯಲ್ಲಿ ನಾನು ಸೇರಿದಂತೆ ಎಲ್ಲರೂ ಗೆಲ್ಲುವುದು ಅವರ ಹೆಸರಿನಿಂದ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ದೇಶಾದ್ಯಾಂತ ಲೋಕಸಭಾ ಚುನಾವಣೆಯನ್ನು ಬಿಜೆಪಿ ಮೋದಿ ಹೆಸರಿನಲ್ಲೇ ಎದುರಿಸುತ್ತದೆ. ಮೋದಿ ಅವರನ್ನು ನೋಡಿಯೇ ಜನರು ಕೂಡ ಮತ ಹಾಕುತ್ತಾರೆ” ಎಂದು ಹೇಳಿದ್ದಾರೆ.
“2014, 2019ರ ಚುನಾವಣೆಗಳಲ್ಲಿ ನಾನು ಅವರ ಹೆಸರಿನಲ್ಲೇ ಗೆದ್ದಿದ್ದೇನೆ. ಮುಂದಿನ ಚುನಾವಣೆಯಲ್ಲೂ ಅವರ ಹೆಸರಿನಲ್ಲೇ ಗೆಲ್ಲುತ್ತೇನೆ” ಎಂದು ಹೇಳಿದ್ದಾರೆ.
“ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯ ರಾಜಕಾರಣಕ್ಕೆ ಬರುವಂತೆ ಕೇಳಿದ್ದೇವೆ. ಆದರೆ, ಪಕ್ಷದ ಹೈಕಮಾಂಡ್ ಏನು ನಿರ್ಧರಿಸುತ್ತದೆ ಗೊತ್ತಿಲ್ಲ. ಪಕ್ಷದ ನೇಮಕದ ಬಗ್ಗೆ ನಾನು ಏನು ಹೇಳಲು ಆಗುವುದಿಲ್ಲ” ಎಂದಿದ್ದಾರೆ.