- ಯುವತಿಯೊಂದಿಗೆ ಎಬಿವಿಪಿ ಅಧ್ಯಕ್ಷನ ಅನುಚಿತ ವರ್ತನೆ
- ಬಿಜೆಪಿ ವಿರುದ್ಧ ಟ್ವೀಟ್ ಪ್ರಹಾರ ನಡೆಸಿದ ರಾಜ್ಯ ಕಾಂಗ್ರೆಸ್
ಬಿಜೆಪಿ ಕಾಮಣ್ಣರ ಕಿರುಕುಳ ಅನುಭವಿಸುವ ಹೆಣ್ಣುಮಕ್ಕಳಿಗೆ “ಹೆಲ್ಪ್ ಲೈನ್” ಯಾವಾಗ ಸ್ಥಾಪಿಸುತ್ತೀರಾ ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ವಿಪಕ್ಷ ಬಿಜೆಪಿಯನ್ನು ಪ್ರಶ್ನಿಸಿದೆ.
ಶಿವಮೊಗ್ಗದಲ್ಲಿ ತೀರ್ಥಹಳ್ಳಿಯಲ್ಲಿ ಕಾಲೇಜ್ ಒಂದರಲ್ಲಿ ನಡೆದಿದೆ ಎನ್ನಲಾದ ಹುಡುಗಿಯೊಂದಿಗಿನ ಅಸಭ್ಯ ವರ್ತನೆ ವಿಡಿಯೋ ವಿಚಾರವಾಗಿ ರಾಜ್ಯ ಕಾಂಗ್ರೆಸ್ ವಿಪಕ್ಷ ಬಿಜೆಪಿ ಹಾಗೂ ಸಂಸದ ತೇಜಸ್ವಿ ಸೂರ್ಯರನ್ನು ತರಾಟೆಗೆತ್ತಿಕೊಂಡಿದೆ.
ಶಿಸ್ತಿನ ಪಕ್ಷ ಹಾಗೂ ಅಖಿಲ ಭಾರತ ವಿಧ್ಯಾರ್ಥಿ ಪರಿಷತ್‌ನ ಶಿವಮೊಗ್ಗ(ತೀರ್ಥಹಳ್ಳಿ) ವಿಭಾಗಾಧ್ಯಕ್ಷನೋರ್ವ ಹೆಣ್ಣುಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದೇ ನಾ ನಿಮ್ಮ ಪಕ್ಷ ಹಾಗೂ ಸಂಘಟನೆ ಹೇಳಿಕೊಡುವ ಶಿಸ್ತು ನೀತಿ ಎಂದು ಪ್ರಶ್ನಿಸಿದೆ. ಟ್ವೀಟ್ ಮೂಲಕ ಘಟನೆ ಪ್ರಸ್ತಾಪಿಸಿರುವ ಕಾಂಗ್ರೆಸ್ ತೇಜಸ್ವಿ ಸೂರ್ಯರನ್ನು ಕುಟುಕಿದೆ. ಕಾಂಗ್ರೆಸ್ ಟ್ವೀಟ್ ಈ ಕೆಳಗಿನಂತಿದೆ.
ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಬಿವಿಪಿ ಅಧ್ಯಕ್ಷ ಹಾಗೂ ಬಿಜೆಪಿ ಕಾರ್ಯಕರ್ತನೊಬ್ಬನ ಕರ್ಮಕಾಂಡ ಬಯಲಾಗಿದೆ.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ವಿದ್ಯಾರ್ಥಿನಿಯ ನಗ್ನಚಿತ್ರ ಚಿತ್ರಿಸಿ ಬ್ಲಾಕ್‌ಮೇಲ್; ಎಬಿವಿಪಿ ಅಧ್ಯಕ್ಷನ ಬಂಧನಕ್ಕೆ ಆಗ್ರಹ
ಸಂಘದ ಶಾಖೆಯಲ್ಲಿ ಹೇಳುವ ಧರ್ಮ ರಕ್ಷಣೆಯ ಪಾಠ ಇದೇನಾ ಎಂದು ರಾಜ್ಯ ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಜೊತೆಗೆ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರಶ್ನಿಸಿರುವ ಕಾಂಗ್ರೆಸ್ ಬಿಜೆಪಿ ಕಾಮಣ್ಣರಿಂದ ಕಿರುಕುಳ ಅನುಭವಿಸುವ ಹೆಣ್ಣುಮಕ್ಕಳಿಗೆ “ಹೆಲ್ಪ್ ಲೈನ್” ಯಾವಾಗ ಆರಂಭಿಸುವಿರಿ ಎಂದು ಕುಟುಕಿದೆ.
ವಾರದ ಹಿಂದಷ್ಟೆ ಹಿಂದೂ ಕಾರ್ಯಕರ್ತರ ರಕ್ಷಣೆ ಸಲುವಾಗಿ ಬಿಜೆಪಿ ಕಾನೂನು ಮೋರ್ಚಾ ಕಾನೂನು ಸಲಹೆಗಾಗಿ ಹೆಲ್ಪ್‌ಲೈನ್ ಆರಂಭಿಸಿತ್ತು. ಸಂಸದ ತೇಜಸ್ವಿ ಸೂರ್ಯ ಇದನ್ನು ಉದ್ಘಾಟಿಸಿ, ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.