ʼಈ ದಿನʼ ಸಮೀಕ್ಷೆ | ಪರಿಶಿಷ್ಟರಿಗೆ ಬೇಡವಾದ ಬಿಜೆಪಿ; ಏನು ಹೇಳುತ್ತವೆ ಅಂಕಿ- ಅಂಶ?

Date:

Advertisements
2024ರ ಚುನಾವಣೆಗೆ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ SCSP/TSP ಕಾಯ್ದೆಯನ್ನು ಕೇಂದ್ರದಲ್ಲಿಯೂ ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಅದರ ಸುದ್ಧಿಯೇ ಇಲ್ಲ. ಇಂತಹ ಬಿಜೆಪಿಯ ಜುಮ್ಲಾಗಳನ್ನು ದಲಿತರು ನಂಬಲು ಸಾಧ್ಯವೇ ಇಲ್ಲ.

ಹತ್ತು ವರ್ಷಗಳ ಅಭಿವೃದ್ಧಿ ಕಾರ್ಯಗಳೇನು ಎಂದು ಹೇಳದೆ ಮುಸ್ಲಿಂ ದ್ವೇಷವನ್ನೇ ಚುನಾವಣೆಯ ವಿಷಯವಾಗಿ ಪರಿಗಣಿಸಿರುವ ಬಿಜೆಪಿ ಪಕ್ಷವು ಸೋಮವಾರ ಕನ್ನಡದ ದಿನ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಇರುವ ಅಂಶಗಳು ಟೀಕೆಗೆ ಗುರಿಯಾಗಿವೆ. ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಾ, ದಲಿತರ ಪರವಾಗಿ ಇದ್ದೇನೆಂಬ ಸೋಗು ಹಾಕುವ ಕೆಲಸವನ್ನು ಬಿಜೆಪಿ ನಿರಂತರ ಮಾಡುತ್ತಾ ಬಂದಿದೆ. ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತಿನಲ್ಲೂ, “ದಲಿತರ ಕಲ್ಯಾಣಕ್ಕೆ ಮೀಸಲಾಗಿದ್ದ ಹಣ ಅನ್ಯರ ಪಾಲಾಗಬೇಕಾ?” ಎಂಬ ಪ್ರಶ್ನೆಯನ್ನು ಬಿಜೆಪಿ ಮುಂದೆ ತಂದಿದೆ. ಆದರೆ ಬಿಜೆಪಿಯನ್ನು ದಲಿತರು ನಂಬುವುದಿಲ್ಲ ಎಂಬುದು ಸಮೀಕ್ಷೆಯ ಅಂಕಿ- ಅಂಶಗಳಿಂದ ಸ್ಪಷ್ಟವಾಗುತ್ತಿದೆ. ದಲಿತರ ಮತಗಳು ’ಕೈ’ ತಪ್ಪಿ ಹೋಗದಿದ್ದರೆ ಕಮಲ ಮದುಡುವುದು ಖಾತ್ರಿ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿರುವುದರಿಂದಲೇ ಕೆಲವು ಅಪಪ್ರಚಾರಗಳನ್ನು ಮಾಡಲಾಗುತ್ತಿದೆ.

ಒಳಮೀಸಲಾತಿ ವಿಚಾರದಲ್ಲಿ ವಚನ ಭ್ರಷ್ಟತೆ, ನಿಲ್ಲದ ಸಂವಿಧಾನ ವಿರೋಧಿ ಹೇಳಿಕೆಗಳು, ತಮ್ಮ ಅಧಿಕಾರವಧಿಯಲ್ಲಿ ಮಿತಿಮೀರಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು, ಗ್ಯಾರಂಟಿಗಳು ಪರಿಶಿಷ್ಟರಿಗೆ ಹೆಚ್ಚು ಅನುಕೂಲವಾಗಿರುವುದನ್ನು ಸಹಿಸಿಕೊಳ್ಳದೆ ಇರುವುದು, ಬಿಜೆಪಿ ಸರ್ಕಾರ ತಂದಿರುವ ದಮನಕಾರಿ ಶಿಕ್ಷಣ ನೀತಿ- ಮೊದಲಾದವುಗಳು ಬಿಜೆಪಿಯ ವಿರುದ್ಧ ದಲಿತರು ಆಕ್ರೋಶಿತರಾಗಲು ಕಾರಣವಾಗಿದೆ.

ಲೋಕಸಭಾ ಚುನಾವಣಾ ಪೂರ್ವ ನಡೆಸಿದ್ದ ‘ಈ ದಿನ.ಕಾಂ’ ಸಮೀಕ್ಷೆಯಲ್ಲಿ “ಯಾವ ಪಕ್ಷವು ನಿಮ್ಮ ಜಾತಿಯ ಹಿತವನ್ನು ಕಾಯುತ್ತದೆ” ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಸಮೀಕ್ಷೆಯಲ್ಲಿ ಗಮನ ಸೆಳೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರ ಒಲವು ನಿಲುವುಗಳನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ. ಅಪಪ್ರಚಾರವನ್ನು ತಡೆಯಲು ಈ ಲೇಖನದಲ್ಲಿ ಕೆಲವು ಸಂಗತಿಗಳನ್ನು ಬಿಚ್ಚಿಡಲಾಗುತ್ತಿದೆ.

Advertisements

ಎಸ್‌ಸಿ ಸಮುದಾಯ

ಕರ್ನಾಟಕದಲ್ಲಿ 101 ಜಾತಿಗಳು ಎಸ್‌ಸಿ ಪಟ್ಟಿಯಲ್ಲಿವೆ. 52 ಜಾತಿಗಳು ಎಸ್‌ಟಿ ಪಟ್ಟಿಯಲ್ಲಿವೆ. ಎಸ್‌ಸಿ ಪಟ್ಟಿಯಲ್ಲಿ ಮಾದಿಗರು (ಎಡಗೈ), ಹೊಲೆಯರು (ಬಲಗೈ),  ಲಂಬಾಣಿ (ಬಂಜಾರ), ಭೋವಿ ಸಮುದಾಯಗಳು ದೊಡ್ಡ ಸಂಖ್ಯೆಯಲ್ಲಿವೆ.

‘ಈ ದಿನ’ ಸಮೀಕ್ಷೆಯ ಪ್ರಕಾರ ಮಾದಿಗ (ಎಡಗೈ) ಸಮುದಾಯದಲ್ಲಿ ಶೇ. 66ರಷ್ಟು ಜನರು ಕಾಂಗ್ರೆಸ್ ಪಕ್ಷವನ್ನು, ಶೇ. 12ರಷ್ಟು ಜನರು ಬಿಜೆಪಿಯನ್ನು ತಮ್ಮ ಹಿತ ಕಾಯುವ ಪಕ್ಷವಾಗಿ ಗುರುತಿಸಿದ್ದಾರೆ. ಹೊಲೆಯ ಸಮುದಾಯವು (ಬಲ) ಶೇ. 70ರಷ್ಟು ಕಾಂಗ್ರೆಸ್‌ ಪಕ್ಷವನ್ನು ಶೇ. 10ರಷ್ಟು ಬಿಜೆಪಿಯನ್ನು ನಂಬುತ್ತದೆ. ಭೋವಿಗಳಲ್ಲಿ ಶೇ. 50ರಷ್ಟು ಕಾಂಗ್ರೆಸ್‌, ಶೇ. 28ರಷ್ಟು ಬಿಜೆಪಿ ಇದ್ದಾರೆ. ಲಂಬಾಣಿಗಳಲ್ಲಿ ಶೇ. 46.2ರಷ್ಟು ಕಾಂಗ್ರೆಸ್, ಶೇ. 32.3ರಷ್ಟು ಬಿಜೆಪಿಯನ್ನು ಹಿತಕಾಯುವ ಪಕ್ಷವಾಗಿ ನೋಡಿದ್ದಾರೆ.

ಈ ಅಂಕಿ- ಅಂಶಗಳನ್ನು ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ವ ‘ಈ ದಿನ’ ಸಮೀಕ್ಷೆಯೊಂದಿಗೆ ತಾಳೆ ನೋಡುವುದು ಅಗತ್ಯವಿದೆ. ಆಗ ಮಾತ್ರವೇ ಪರಿಶಿಷ್ಟ ಒಂದು ವರ್ಷದ ಅವಧಿಯಲ್ಲಿ ಎಷ್ಟು ಮತಗಳು ಕಾಂಗ್ರೆಸ್ ಪಕ್ಷದ ಪರ ವಾಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ವಿಧಾನಸಭಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಪರವಾಗಿ ಬಲಗೈ ಸಮುದಾಯದಲ್ಲಿ ಶೇ. 55, ಬಿಜೆಪಿಗೆ ಶೇ. 18, ಜೆಡಿಎಸ್‌ಗೆ ಶೇ. 11 ಒಲವು ಹೊಂದಿದ್ದರು. ಎಡಗೈ ಸಮುದಾಯದಲ್ಲಿ ಶೇ. 52 ಕಾಂಗ್ರೆಸ್‌, ಶೇ. 22 ಬಿಜೆಪಿ, ಶೇ. 11 ಜೆಡಿಎಸ್‌ ಇದ್ದರು.

ವಿಧಾನ ಚುನಾವಣೆಯ ಅಂಕಿ- ಅಂಶಗಳನ್ನು ಬಿಜೆಪಿ- ಜೆಡಿಎಸ್ ಪಕ್ಷಗಳ ಮತ ಪ್ರಮಾಣವನ್ನು ಒಟ್ಟುಗೂಡಿಸಿ ನೋಡಿದರೆ ಎಡಗೈ ಸಮುದಾಯದ ಮತಗಳು ಶೇ. 4-5ರಷ್ಟು ಕಾಂಗ್ರೆಸ್ ಪರ ವಾಲಿರುವುದು ಕಂಡು ಬರುತ್ತದೆ. ಬಲಗೈ ಸಮುದಾಯದಲ್ಲಿ ಶೇ. 6ರಿಂದ 7ರಷ್ಟು ಮತಗಳು ಕಾಂಗ್ರೆಸ್‌ಗೆ ಶಿಫ್ಟ್ ಆಗಿವೆ.

ಕಳೆದ ಚುನಾವಣೆಯಲ್ಲಿ ಪರಿಶಿಷ್ಟ ಸಮುದಾಯಗಳ ಇತರ ಸಮುದಾಯಗಳನ್ನು ಒಟ್ಟುಗೂಡಿಸಿ ಲೆಕ್ಕ ಹಾಕಲಾಗಿತ್ತು. ಅದರಲ್ಲಿ ಶೇ. 48ರಷ್ಟು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಬಿಜೆಪಿಗೆ ಶೇ. 24, ಜೆಡಿಎಸ್‌ಗೆ ಶೇ. 10ರಷ್ಟು ಮತಗಳು ನಿರ್ಧಾರವಾಗಿದ್ದವು. ಆದರೆ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಎರಡು ಪರ್ಸೆಂಟ್ ಮತಗಳನ್ನು ಕಾಂಗ್ರೆಸ್ ಹೆಚ್ಚಿಸಿಕೊಂಡಿದೆ.

ಪರಿಶಿಷ್ಟ ಪಂಗಡದ ಸಮುದಾಯಗಳ ಪೈಕಿ ನಾಯಕರೇ ಬಹುಸಂಖ್ಯಾತರು. ರಾಜ್ಯದಲ್ಲಿ 52 ಜಾತಿಗಳು ಪರಿಶಿಷ್ಟ ಪಂಗಡ ಮೀಸಲು ಪಟ್ಟಿಯಲ್ಲಿವೆ. ಲೋಕಸಭಾ ಪೂರ್ವ ಸಮೀಕ್ಷೆಗೆ ಪ್ರತಿಕ್ರಿಯಿಸಿರುವ ಶೇ. 45ರಷ್ಟು ಮತದಾರರು ಕಾಂಗ್ರೆಸ್‌ ತಮ್ಮ ಹಿತ ಕಾಯುತ್ತದೆ ಎಂದರೆ, ಶೇ.24ರಷ್ಟು ಎಸ್‌ಸಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 36 ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆದ್ದರೂ 15 ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರಗಳಲ್ಲಿ ಒಂದರಲ್ಲೂ ಬಿಜೆಪಿ ಖಾತೆ ತೆರೆದಿರಲಿಲ್ಲ. ಪ.ಪಂ ಮೀಸಲು ಕ್ಷೇತ್ರಗಳಲ್ಲಿ 14 ಕಾಂಗ್ರೆಸ್ ಪಾಲಾದರೆ, 1 ಕ್ಷೇತ್ರ ಜೆಡಿಎಸ್‌ಗೆ ದಕ್ಕಿತ್ತು.

ಬಹುದೊಡ್ಡ ಸಂಖ್ಯೆಯ ಮಾದಿಗ ಮತ್ತು ಹೊಲೆಯ ಸಮುದಾಯಗಳ ಮತಗಳು ಗಣನೀಯವಾಗಿ ಕಾಂಗ್ರೆಸ್ ಪರವಾಗಿ ಹೆಚ್ಚಳ ಕಂಡಿವೆ. ಈ ಸತ್ಯ ಬಿಜೆಪಿಗೆ ಗೊತ್ತಿದೆ. ಹೇಗಾದರೂ ದಲಿತ ಮತಗಳನ್ನು ವಿಭಜಿಸದೆ ಇದ್ದರೆ ಕಾಂಗ್ರೆಸ್‌ಗೆ ವರದಾನವಾಗುತ್ತದೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತಿವೆ. ಹೀಗಾಗಿ ಕೆಲವು ಕಸರತ್ತುಗಳನ್ನು ಬಿಜೆಪಿ ಮಾಡಿರುವುದು ಸುಳ್ಳಲ್ಲ.

ಪರಿಶಿಷ್ಟರ ಮತಗಳು ಬಿಜೆಪಿಗೆ ಬೀಳದಿರುವುದು ಏತಕ್ಕೆ?

  1. ಒಳಮೀಸಲಾತಿ ಹೋರಾಟದಲ್ಲಿ ಮಾದಿಗ ಸಮುದಾಯ ಮುಂಚೂಣಿಯಲ್ಲಿದ್ದರೂ ಹೊಲೆಯ ಸಮುದಾಯವೂ ಇದಕ್ಕೆ ದನಿಗೂಡಿಸಿದೆ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತು ಭೋವಿ, ಲಂಬಾಣಿ ಸಮುದಾಯದ ಮುಖಂಡರೂ ಒಳಮೀಸಲಾತಿಗೆ ಅಸ್ತು ಎಂದಿರುವ ವಾತಾವರಣವಿದೆ. ಕಾಂಗ್ರೆಸ್ ಸರ್ಕಾರವು ಎಲ್ಲ ಸಮುದಾಯಗಳ ವಿಶ್ವಾಸ ಪಡೆದು, “ಕೇಂದ್ರ ಸರ್ಕಾರ ಒಳಮೀಸಲಾತಿ ತರಲು ಸಂವಿಧಾನಿಕ ತಿದ್ದುಪಡಿ ತರಬೇಕು” ಎಂದು ಪತ್ರ ಬರೆದಿದೆ. ಆ ಮೂಲಕ ತನ್ನ ಮೇಲಿನ ಕಳಂಕ ಕಳೆದುಕೊಂಡಿದೆ. ಆರ್ಟಿಕಲ್ 341(2)ರ ಪ್ರಕಾರ- ಎಸ್ಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಅಥವಾ ಕೈಬಿಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಹೀಗಾಗಿ 341 (3) ಸೇರಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದರೆ ಮುಂದಿನ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಕೊಳ್ಳುತ್ತದೆ. ಒಂದೇ ವಾರದೊಳಗೆ ಇಡಬ್ಲ್ಯುಎಸ್‌ ಹೆಸರಲ್ಲಿ ಮೇಲ್ವರ್ಗದವರಿಗೆ ಶೇ. 10ರಷ್ಟು ಮೀಸಲಾತಿಯನ್ನು ತರಲಾಗಿತ್ತು. ಆದರೆ 30 ವರ್ಷಗಳ ಹೋರಾಟಕ್ಕೆ ಕವಿಗೊಡದೆ ಸಮುದಾಯವನ್ನು ಬಿಜೆಪಿ ವಂಚಿಸಿದೆ ಎಂಬ ಅಭಿಪ್ರಾಯ ಬಲವಾಗಿದೆ.
  2. ಬಿಜೆಪಿಯ ನಾಯಕರು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿರುವುದು ಮುಳುವಾಗುತ್ತಿದೆ. “ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಿಸಲು” ಎನ್ನುವ ದುರಹಂಕಾರದ ಮುಖಂಡರು ಈಗಲೂ ಬಿಜೆಪಿಯೊಳಗೆ ಇದ್ದಾರೆ. ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವ ಕೆಲವರಿಗೆ ಬಿಜೆಪಿ ಟಿಕೆಟ್ ಕೂಡ ನೀಡಿರುವುದು ಸಮುದಾಯಕ್ಕೆ ಆಘಾತ ತಂದಿದೆ.
  3. ವಿಷಯಾಧಾರಿತವಾಗಿ ತಮ್ಮ ಕೆಲಸದ ಮೇಲೆ ದಲಿತರ ಮತಗಳನ್ನು ಕೇಳದೆ ಅಪಪ್ರಚಾರ ಮಾಡುತ್ತಿರುವುದನ್ನು ಸಮುದಾಯ ಗಮನಿಸಿದಂತೆ ಕಾಣುತ್ತಿದೆ. ದಲಿತರಿಗೆ ಮೀಸಲಾಗಿದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ಅನ್ಯರಿಗೆ ಬಳಸಿದೆ ಎಂಬ ಆರೋಪವನ್ನು ಮಾಡುತ್ತಾ ಬಂದಿದೆ. ಸೋಮವಾರ ಪತ್ರಿಕೆಗಳಲ್ಲಿ ಬಿಜೆಪಿ ನೀಡಿರುವ ಜಾಹೀರಾತಿನಲ್ಲೂ ಈ ವಿಚಾರವನ್ನು ಪ್ರಸ್ತಾಪ ಮಾಡಿದೆ. ಆದರೆ ಬಿಜೆಪಿ ಮಾಡುತ್ತಿರುವ ಆರೋಪ ಅರೆಬರೆ ಸತ್ಯಗಳಿಂದ ಕೂಡಿದೆ. ಗ್ಯಾರಂಟಿಗಳಿಗೆ 11,000 ಕೋಟಿ ರೂ.ಗಳನ್ನು ಬಳಸುವ ನಿರ್ಧಾರವನ್ನು ತೆಗೆದುಕೊಂಡ ಕಾಂಗ್ರೆಸ್‌ ಒಂದು ತಪ್ಪನ್ನು ಮಾಡಿತ್ತು. ಆದರೆ ಅಸಲಿಯಾಗಿ ಲೆಕ್ಕ ಹಾಕಿದರೆ ಕಾಂಗ್ರೆಸ್ ಹೆಚ್ಚುವರಿಯಾಗಿ ಬಳಸಿದ್ದು 2,850 ಕೋಟಿ. ಕಾಂಗ್ರೆಸ್ ಸರ್ಕಾರ ಬಂದ ನಂತರದ ಮೊದಲ ಬಜೆಟ್‌ನಲ್ಲಿ ಗ್ಯಾರಂಟಿಗೆ ಮೀಸಲಿಟ್ಟಿದ್ದು 34,000 ಕೋಟಿ. ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಜಾತಿಗಳ ಜನಸಂಖ್ಯೆ ಶೇ. 24. ಅಂದು ಗ್ಯಾರೆಂಟಿಗೆ ಬೇಕಾದ ಹಣ 34,000 ಕೋಟಿ ರೂ. ಅದರಲ್ಲಿ ದಲಿತರ ಗ್ಯಾರಂಟಿ ಪಾಲು 24/100x 34000= 8150ಕೋಟಿ. ಹೆಚ್ಚುವರಿಯಾಗಿ ಹೋಗಿದ್ದು 2850 ಕೋಟಿ. ಇದು ಅಸಲಿ ಲೆಕ್ಕಾಚಾರ. 3,000 ಕೋಟಿಯನ್ನು ಬಳಸುವುದು ಕೂಡ ತಪ್ಪು ಎಂದು ಹೋರಾಟಗಾರರು ದನಿ ಎತ್ತಿದರು. ಅದರ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ಕೈಗೊಂಡ ಒಂದು ನಿರ್ಧಾರ ಮಹತ್ವದ್ದಾಗಿದೆ.ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7ಡಿಯನ್ನು ದುರುಪಯೋಗ ಮಾಡಿಕೊಂಡಿದ್ದು ಬಿಜೆಪಿಯೇ ಹೆಚ್ಚು. ಸಾಮಾನ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಹಣ ಬಳಸಿಕೊಳ್ಳಲು ಅವಕಾಶ ನೀಡಿದ್ದ ಈ ಸೆಕ್ಷನ್‌‌, ದಲಿತರಲ್ಲದವರೂ ಫಲಾನುಭವಿಯಾಗುವ ಯೋಜನೆಗಳಿಗೆ ಹಣವನ್ನು ಹರಿಸಲು ಅವಕಾಶ ನೀಡಿತ್ತು. ಕಾಯ್ದೆಯಲ್ಲಿ ಇದನ್ನು ತೆಗೆಯಬೇಕು ಎಂಬುದು ದಲಿತ ಹೋರಾಟಗಾರರ ಬಹುದಿನ ಆಗ್ರಹವಾಗಿತ್ತು. ಇದಕ್ಕೆ ಕಿವಿಯಾದ ಕಾಂಗ್ರೆಸ್‌ ಸರ್ಕಾರ ಸೆಕ್ಷನ್‌ 7ಡಿ ರದ್ದುಗೊಳಿಸಿದೆ.“ಇಡೀ ಭಾರತದಾದ್ಯಂತ SCSP/TSP ಮಾದರಿಯ ಕಾಯ್ದೆ ಜಾರಿ ಇರುವುದು ಎರಡು ರಾಜ್ಯಗಳಲ್ಲಿ ಮಾತ್ರ. ಒಂದು ನಮ್ಮ ಕರ್ನಾಟಕ ಮತ್ತೊಂದು ತೆಲಂಗಾಣ. ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿಯೂ ಸಹ SCSP/TSP ಕಾಯ್ದೆ ಜಾರಿ ಮಾಡಿಲ್ಲ. 2024ರ ಚುನಾವಣೆಗೆ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ SCSP/TSP ಕಾಯ್ದೆಯನ್ನು ಕೇಂದ್ರದಲ್ಲಿಯೂ ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಅದರ ಸುದ್ಧಿಯೇ ಇಲ್ಲ. ಇಂತಹ ಬಿಜೆಪಿಯ ಜುಮ್ಲಾಗಳನ್ನು ದಲಿತರು ನಂಬಲು ಸಾಧ್ಯವೇ ಇಲ್ಲ.ಬಸವರಾಜ ಬೊಮ್ಮಾಯಿಯವರ ಬಿಜೆಪಿ ಡಬಲ್ ಇಂಜಿನ್ ಸರ್ಕಾರ 2020-21ನೇ ಸಾಲಿನಲ್ಲಿ ಪರಿಶಿಷ್ಟರ ಉಪಯೋಜನೆಗೆ ಮೀಸಲಿರಿಸಿದ್ದ ಅನುದಾನ ರೂ.26,005 ಕೋಟಿ. ಅದರಲ್ಲಿ ಬಿಡುಗಡೆಗೊಳಿಸಿದ ಹಣ ಕೇವಲ ರೂ.16,450 ಕೋಟಿ. ಅಂದರೆ ರೂ.9,555 ಕೋಟಿಯಷ್ಟು ಹಣವನ್ನು ಬಿಡುಗಡೆಗೊಳಿಸಿಲ್ಲ. ಖರ್ಚು ಮಾಡಿದ ಹಣದಲ್ಲಿ ನೇರವಾಗಿ ದಲಿತರಿಗೆ ತಲುಪುವ ಮಾನವ ಅಭಿವೃದ್ಧಿಗೆ ಬಳಸಿರುವುದು ರೂ.4128 ಕೋಟಿಯಾದರೆ ಮೂಲಸೌಕರ್ಯಗಳ ಹೆಸರಲ್ಲಿ ದಲಿತರಿಗೆ ನೇರವಾಗಿ ಉಪಯೋಗವಲ್ಲದ ಕಾರ್ಯಗಳಿಗೆ ಬಳಸಿರುವ ಹಣ ರೂ.6670 ಕೋಟಿ. ಕಾಯ್ದೆಯ ‘7ಡಿ’ ಸೆಕ್ಷನ್ ಬಳಸಿಕೊಂಡು ದಲಿತರ ಹಣವನ್ನು ಕಲಬುರಗಿ ವಿಭಾಗದ ಸರ್ಕಾರ ಸಹಯೋಗದ ಟಾಟಾ ತಂತ್ರಜ್ಞಾನ ಪ್ರಯೋಗಾಲಯ ಮತ್ತು ಕಾರ್ಯಾಗಾರಕ್ಕೆ ದಲಿತರ ರೂ.1312 ಕೋಟಿಗಳನ್ನು ನೀಡಿದೆ. ರಸ್ತೆಗಳು, ಆಸ್ಪತ್ರೆಗಳ ಕಟ್ಟಡ, ಅಂಗನವಾಡಿ ಕಾರ್ಯಕರ್ತರ ನೂತನ ಪಿಂಚಣಿ ವ್ಯವಸ್ಥೆ, ಕ್ರೀಡಾಂಗಣ, ಶಾಲಾ ಕಾಲೇಜುಗಳ ಕಟ್ಟಡ, ಆಂಗ್ಲೋ ಇಂಡಿಯನ್ ವಿದ್ಯಾರ್ಥಿ ಶುಲ್ಕ ವಿನಾಯಿತಿ, ಪದವಿ ಪೂರ್ವ ಪರೀಕ್ಷೆ, ನೀರಾವರಿ ಯೋಜನೆಗಳು ಹೀಗೆ ದಲಿತರ ಹಣವನ್ನು ಇತರೆ ಕಾರ್ಯಗಳಿಗೆ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳಲಾಗಿತ್ತು. ಅತ್ಯಂತ ದುಃಖಕರ ಸಂಗತಿಯೆಂದರೆ ಸುಮಾರು 25 ಇಲಾಖೆಗಳ 47 ಯೋಜನೆಗಳಿಗೆ ಮೀಸಲಿರಿಸಿದ್ದ ಹಣದಲ್ಲಿ ಒಂದು ರೂಪಾಯಿಯನ್ನೂ ಖರ್ಚು ಮಾಡದೇ 1744 ಕೋಟಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿರುವುದು… ಬಳಸದೇ ಹಿಂದಿರುಗಿಸಿದ ಇಲಾಖೆಗಳನ್ನು ಗಮನಿಸಿದರೆ ಹೊಟ್ಟೆ ಉರಿದು ಬೆಂಕಿಯಾಗುತ್ತದೆ. ಉನ್ನತ ಶಿಕ್ಷಣ (ರೂ.31.54 ಕೋ), ವೈದ್ಯಕೀಯ ಶಿಕ್ಷಣ (ರೂ.18.24 ಕೋ), ಸಮಾಜ ಕಲ್ಯಾಣ (ರೂ.544 ಕೋಟಿ), ಉನ್ನತ ಶಿಕ್ಷಣ (ರೂ.22 ಕೋ) ಕೋವಿಡ್ ಸಮಯದಲ್ಲಿಯೂ ಆರೋಗ್ಯ ಇಲಾಖೆ ರೂ.32 ಕೋಟಿ ಹಿಂದಿರುಗಿಸಿದೆ. ಸರ್ಕಾರದ ಪ್ರಕಾರವೇ ರೂ.3.69 ಲಕ್ಷ ದಲಿತರ ಕುಟುಂಬಗಳಿಗೆ ಮನೆಗಳಿಲ್ಲ. ಆದರೆ ವಸತಿ ಇಲಾಖೆ ರೂ.253 ಕೋಟಿ ಹಿಂದಿರುಗಿಸಿದೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಹಣೆ ಬರೆಹ.  ಸಂವಿಧಾನವನ್ನೇ ಬದಲಾಯಿಸಲು ನಿಂತಿರುವ ಬಿಜೆಪಿಯನ್ನು ದಲಿತರು ಎಂದಿಗೂ ಕ್ಷಮಿಸಲಾರರು. ದಲಿತರು ಬಿಜೆಪಿಗೆ ಇನ್ನೆಂದಿಗೂ ಮತ ಹಾಕಲಾರರು” ಎನ್ನುತ್ತಾರೆ ಲೇಖಕ ಸಾಕ್ಯ ಸಮಗಾರ.
  1. ಬಿಜೆಪಿ ಅವಧಿಯಲ್ಲಿ ಬಜೆಟ್ ಗಾತ್ರ ಹೆಚ್ಚಾದರೂ ಎಸ್‌ಸಿಎಸ್‌ಪಿ, ಟಿಎಸ್ಪಿ ಕಾಯ್ದೆಯ ಅನ್ವಯ ಮೀಸಲಿಡಬೇಕಾದ ಹಣದ ಮೊತ್ತ ಮಾತ್ರ ಕಡಿಮೆಯಾಗುತ್ತಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ಹೆಚ್ಚಾಗಿರುವುದನ್ನು ದಲಿತರು ಗಮನಿಸುತ್ತಿದ್ದಾರೆ.
  2. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳು ಅತಿ ಬಡತನದಲ್ಲಿರುವ ದಲಿತ ಸಮುದಾಯಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎನ್ನಲು ಅರ್ಥಶಾಸ್ತ್ರದ ಲೆಕ್ಕಾಚಾರ ಬೇಕಿಲ್ಲ.ಇದೆಲ್ಲದರ ಪರಿಣಾಮ ದಲಿತರ ಮತಗಳು ಕಾಂಗ್ರೆಸ್‌ನತ್ತ ಹರಿದುಬರುತ್ತಿರುವುದು ಸಮೀಕ್ಷೆಯಿಂದ ಸ್ಪಷ್ಟವಾಗುತ್ತಿದೆ. ಹುಸಿ ಸುಳ್ಳುಗಳನ್ನು ಬದಿಗಿಟ್ಟು, ಬದುಕಿನ ಪ್ರಶ್ನೆಗಳನ್ನು ಬಿಜೆಪಿ ಮರೆಯುತ್ತಿರುವುದನ್ನು ದಲಿತ ಸಮುದಾಯ ಗಮನಿಸುತ್ತಿದೆ.
  3. ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದ ಬಿಜೆಪಿ ಸರ್ಕಾರ, “ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌” ಎಂಬ ಸಾಲಿಗೆ ಕತ್ತರಿ ಹಾಕಿದ್ದು ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತು. ಮುಖ್ಯವಾಗಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ. ರೋಹಿತ್ ವೇಮುಲ ಅವರ ಸಾಂಸ್ಥಿಕ ಕೊಲೆ, ಹತ್ರಾಸ್ ಅತ್ಯಾಚಾರ, ಊನಾದಲ್ಲಿ ಗೋ ಭಯೋತ್ಪಾದಕರ ಅಟ್ಟಹಾಸ, ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ನಿರಂತರ ಕಿರುಕುಳ, ಸ್ಕಾಲರ್‌ಶಿಪ್‌ಗೆ ಕಡಿವಾಣ, ಎನ್‌ಇಪಿ ನೆಪದಲ್ಲಿ ಬಡವರನ್ನು ಶಿಕ್ಷಣದಿಂದ ಹೊರಗಿಡುವ ಹುನ್ನಾರ- ಹೀಗೆ ಶೋಷಿತರ ವಿರೋಧಿ ನೀತಿಗಳು ದಲಿತ ಸಮುದಾಯವನ್ನು ಹೈರಾಣಾಗಿಸಿರುವುದು ಸುಳ್ಳಲ್ಲ.
  4. ನ್ಯಾಷನಲ್‌ ಕ್ರೈಮ್ ರೆಕಾರ್ಡ್ಸ್ ಬ್ಯೂರೊ (ಎನ್‌ಸಿಆರ್‌ಬಿ) ಪ್ರಕಟ ಮಾಡಿರುವ ’ಭಾರತದಲ್ಲಿ ಅಪರಾಧ- 2020’ ವರದಿಯು ಆತಂಕಕಾರಿ ಅಂಶಗಳನ್ನು ಬಿಚ್ಚಿಟ್ಟಿದೆ. ಈ ವರ್ಷದ ಜನವರಿ 16ರಂದು ಡೆಕ್ಕನ್ ಹೆರಾಲ್ಡ್‌ ಪ್ರಕಟಿಸಿರುವ ವರದಿ ಪ್ರಕಾರ, “2021ಕ್ಕಿಂತ 2022ರಲ್ಲಿ ಹೆಚ್ಚಿನ ದೌರ್ಜನ್ಯಗಳು ದಲಿತರ ಮೇಲೆ ಆಗಿವೆ.” ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ದಾಖಲಾಗಿರುವ ಎಂಟು ರಾಜ್ಯಗಳೆಂದರೆ- ಉತ್ತರ ಪ್ರದೇಶ (15,368), ರಾಜಸ್ಥಾನ (8,952), ಮಧ್ಯಪ್ರದೇಶ (7,733), ಬಿಹಾರ (6,509), ಒಡಿಶಾ (2,902), ಮಹಾರಾಷ್ಟ್ರ (2,743), ಆಂಧ್ರಪ್ರದೇಶ (2,315) ಮತ್ತು ಕರ್ನಾಟಕ (1,977). ದೇಶದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಮಾಡಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿಯ ವಿರುದ್ಧ ದಲಿತರ ಮತಗಳು ಧ್ರುವೀಕರಣ ಆಗುತ್ತಿರುವುದು ಸಮೀಕ್ಷೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ.
yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X