ಇಸ್ರೇಲ್ – ಹಮಸ್ ಹೋರಾಟಗಾರರ ಸಂಘರ್ಷದಲ್ಲಿ ಇಸ್ರೇಲ್ ಬಗ್ಗೆ ಕನಿಕರ ತೋರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯಸಭೆಯ ಮಾಜಿ ಸದಸ್ಯ, ಹಿರಿಯ ವಕೀಲ ಸುಬ್ರಹ್ಮಣ್ಯನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಸ್ರೇಲಿನಲ್ಲಿ ನಡೆಯುತ್ತಿರುವ ಹತ್ಯೆ, ಮಹಿಳೆಯರು ಮತ್ತು ಯುವತಿಯರ ಮೇಲೆ ದೌರ್ಜನ್ಯ ಹಾಗೂ ಮಕ್ಕಳ ಸಾವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಹಾನುಭೂತಿ ತೋರಿಸುತ್ತಿದ್ದಾರೆ. ಆದರೆ ಈ ಮೊದಲು ಪ್ಯಾಲೆಸ್ತೀನ್ ನಾಗರಿಕರ ಮೇಲೆ ರಾಕ್ಷಸಿತನ ತೋರಿದ್ದ ಇಸ್ರೇಲ್ ಸಮುದಾಯದ ಗುರುತನ್ನು ನಮೂದಿಸಲು ಮೋದಿ ವಿಫಲರಾಗಿದ್ದಾರೆ. ಈಗೇಕೆ ನಿಮಗೆ ಹಮಸ್ ವಿರುದ್ಧ ಕೋಪ” ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಮೋದಿ ಸರ್ಕಾರದ ಪ್ರತಿಯೊಂದು ದುರಾಡಳಿತದ ವಿರುದ್ಧ ತಮ್ಮ ಮೊನಚು ಮಾತುಗಳಿಂದ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Modi sympathised with Israel for the brutal murder, beastly rape of adult women & young girls, and suffocating & breaking heads to death of babies. But Modi failed to mention the community identity of the monsters who did it: viz., Hamas. Why?
— Subramanian Swamy (@Swamy39) October 12, 2023
ಕೆಲವು ದಿನಗಳ ಹಿಂದಷ್ಟೆ ಭಾರತದ ಭೂಪ್ರದೇಶದ ಮೇಲೆ ಚೀನಾ ನಡೆಸಿದ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯಿದೆಯಡಿ (ಆರ್ಟಿಐ) ಮಾಹಿತಿ ಕೋರಿ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸಲ್ಲಿಸಿದ್ದ ಮನವಿಗೆ ಉತ್ತರ ನೀಡುವಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಈ ಸಂಬಂಧ ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ ಹಾಗೂ ಕೇಂದ್ರ ಮಾಹಿತಿ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ.