2024ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ರೇವರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರಕ್ಷಾ ಖಡ್ಸೆ ಅವರು ಗೆಲುವು ಕಂಡಿದ್ದಾರೆ. ಜೂನ್ 9ರಂದು ಸಾಯಂಕಾಲ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಮತ್ತು ಸುಮಾರು 30 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಸದ್ಯ ರಕ್ಷಾ ಖಡ್ಸೆ ಅವರಿಗೆ ಕ್ಯಾಬಿನೆಟ್ ಸ್ಥಾನ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಯಾರಿದು ರಕ್ಷಾ ಖಡ್ಸೆ?
ರಕ್ಷಾ ನಿಖಿಲ್ ಖಡ್ಸೆ ಮಹಾರಾಷ್ಟ್ರದ ರಾಜಕಾರಣಿ. ಅವರು ಸಂಸತ್ತಿನಲ್ಲಿ ರೇವರ್ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುತ್ತಾರೆ. ರಕ್ಷಾ ಖಡ್ಸೆ ಮಹಾರಾಷ್ಟ್ರದ ಹಿರಿಯ ಎನ್ಸಿಪಿ ನಾಯಕ ಏಕನಾಥ್ ಖಡ್ಸೆ ಅವರ ಸೊಸೆ.
ರಕ್ಷಾ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಕೆಯ ಪತಿ ನಿಖಿಲ್ ಖಡ್ಸೆ ಅವರು 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ.
ರಕ್ಷಾ ಖಡ್ಸೆ ಅವರು 2010ರಲ್ಲಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಖಡ್ಸೆ ಕೊತಾಡಿ ಗ್ರಾಮದ ಸರಪಂಚರಾಗಿ ಆಯ್ಕೆಯಾದರು. ನಂತರ ಅವರು ಜಲಗಾಂವ್ ಜಿಲ್ಲಾ ಪರಿಷತ್ತಿಗೆ ಆಯ್ಕೆಯಾದರು. 2014ರ ಲೋಕಸಭಾ ಚುನಾವಣೆಯಲ್ಲಿ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮನೀಶ್ ಜೈನ್ ಅವರನ್ನು 3,18,608 ಮತಗಳ ಅಂತರದಿಂದ ಸೋಲಿಸಿದರು. ಅವರು 6,05,452 ಪಡೆದಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಉಲ್ಲಾಸ ಪಾಟೀಲ್ ಅವರ ವಿರುದ್ಧ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದರು. ಇದೀಗ, 2024ರ ಲೋಕಸಭಾ ಚುನಾವಣೆಯಲ್ಲಿಯೂ ಶ್ರೀರಾಮ ಪಾಟೀಲ್ ವಿರುದ್ಧ ಸ್ಪರ್ಧೆ ಮಾಡಿ 2,72,183 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ಸಂಪುಟದಲ್ಲಿ ಕರ್ನಾಟಕದ ಐವರಿಗೆ ಸಚಿವ ಸ್ಥಾನ
ರಕ್ಷಾ ಖಡ್ಸೆ ರೇವರ್ ಕ್ಷೇತ್ರದಿಂದ ಗೆದ್ದು ಮೂರು ಬಾರಿ ಸಂಸದರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅವರು ಅತ್ಯಂತ ಕಿರಿಯ ಸಂಸದರಾದರು. ಖಡ್ಸೆ ಅವರು ಮಹಿಳಾ ಸಬಲೀಕರಣ, ಮಕ್ಕಳ ಶಿಕ್ಷಣ ಮತ್ತು ರೈತರ ಕಲ್ಯಾಣದ ಬಗ್ಗೆ ಉತ್ಸುಕರಾಗಿದ್ದಾರೆ.
ಖಡ್ಸೆ ಅವರ ಮಾವ ಏಕನಾಥ್ ಖಡ್ಸೆ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ಮಹಾರಾಷ್ಟ್ರ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.