“ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿ ಚುನಾವಣೆಗಳಲ್ಲಿ ಮತ ಕಳವು ಮಾಡುತ್ತಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ(SIR) ಮೂಲಕ ಮತದಾರರ ಸೇರ್ಪಡೆ ಮಾಡಿ, ಹೆಸರು ಅಳಿಸಿ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಮತ ಕಳವು ಮಾಡುವ ಅವರ ಪಿತೂರಿ ಯಶಸ್ಸು ಕಾಣಲು ಇಂಡಿಯಾ ಒಕ್ಕೂ ಬಿಡಲ್ಲ” ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರದ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಒಳಗೊಂಡ ತಮ್ಮ 1,300 ಕಿಮೀ ‘ಮತದಾರ ಅಧಿಕಾರ ಯಾತ್ರೆ’ಯ ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಇಡೀ ದೇಶದಲ್ಲಿ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳನ್ನು ಕದಿಯಲಾಗುತ್ತಿದೆ. ಬಿಹಾರದಲ್ಲಿ ಚುನಾವಣೆಗಳಲ್ಲಿ ಮತ ಕದಿಯಲು ಎಸ್‌ಐಆರ್ ಬಳಸಲಾಗುತ್ತಿದೆ. ಎಸ್‌ಐಆರ್ ಮೂಲಕ ಮತದಾರರನ್ನು ಅಳಿಸಲಾಗುತ್ತಿದೆ ಮತ್ತು ಸೇರಿಸಲಾಗುತ್ತಿದೆ, ಇದು ಪಿತೂರಿ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಮತಗಳವು ಆರೋಪ ಸಂವಿಧಾನಕ್ಕೆ ಮಾಡಿದ ಅಪಮಾನ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್
“ನಾವು ಅವರಿಗೆ ಬಿಹಾರದಲ್ಲಿ ಚುನಾವಣೆಯಲ್ಲಿ ಮತಗಳನ್ನು ಕದಿಯಲು ಬಿಡುವುದಿಲ್ಲ. ಬಿಹಾರದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ. ಬಡವರಿಗೆ ಮತದಾನದ ಹಕ್ಕಿದ್ದು, ಅದನ್ನು ತಡೆಯಲು ನಾವು ಬಿಡಲಾರೆವು. ಚುನಾವಣಾ ಆಯೋಗ ಏನು ಮಾಡುತ್ತಿದೆ, ಮತಗಳನ್ನು ಹೇಗೆ ನಡೆಸುತ್ತಿದೆ ಎಂದು ಈಗ ಇಡೀ ದೇಶಕ್ಕೆ ತಿಳಿದಿದೆ. ಕೆಲವು ದಿನಗಳ ಹಿಂದೆ ಮತ ಕಳವು ಹೇಗೆ ನಡೆಯುತ್ತಿದೆ ಎಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಲಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಇದು ಸಂವಿಧಾನವನ್ನು ಉಳಿಸುವ ಹೋರಾಟ. ಇಡೀ ಭಾರತದಲ್ಲಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುತ್ತಿವೆ. ಪ್ರತಿ ಚುನಾವಣೆಯಲ್ಲೂ ಬಿಜೆಪಿ ಗೆಲ್ಲುತ್ತದೆ. ಮಹಾರಾಷ್ಟ್ರದಲ್ಲಿ ಎಲ್ಲಾ ಅಭಿಪ್ರಾಯ ಸಮೀಕ್ಷೆಗಳು ಇಂಡಿಯಾ ಒಕ್ಕೂಟ ಗೆಲ್ಲುತ್ತದೆ ಎಂದು ಹೇಳಿದ್ದವು. ಲೋಕಸಭೆಯಲ್ಲಿ, ನಮ್ಮ ಮೈತ್ರಿಕೂಟ ಗೆದ್ದಿತ್ತು. ಆದರೆ ಅದೇ ಮಹಾರಾಷ್ಟ್ರದಲ್ಲಿ ನಾಲ್ಕು ತಿಂಗಳ ನಂತರ, ಬಿಜೆಪಿ ಮೈತ್ರಿಕೂಟ ಗೆದ್ದಿದೆ. ಒಂದು ಕೋಟಿಗೂ ಅಧಿಕ ಮತದಾರರನ್ನು ಈ ನಡುವೆ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಈ ರೀತಿ ಸೇರ್ಪಡೆ ನಡೆದಾಗೆಲ್ಲಾ ಬಿಜೆಪಿ ಗೆದ್ದಿದೆ” ಎಂದು ಆರೋಪಿಸಿದರು.
ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖೇಶ್ ಸಹಾನಿ, ಸಿಪಿಐ(ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಿಪಿಐ(ಎಂ)ನ ಸುಭಾಷಿಣಿ ಅಲಿ ಮತ್ತು ಸಿಪಿಐನ ಪಿ. ಸಂದೋಷ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಇಲ್ಲಿ ನಡೆದ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖೇಶ್ ಸಹಾನಿ, ಸಿಪಿಐ(ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಿಪಿಐ(ಎಂ)ನ ಸುಭಾಷಿಣಿ ಅಲಿ ಮತ್ತು ಸಿಪಿಐನ ಪಿ. ಸಂದೋಷ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಯಾತ್ರೆಯು ಔರಂಗಾಬಾದ್, ಗಯಾ, ನಾವಡಾ, ನಳಂದಾ, ಶೇಖ್‌ಪುರ, ಲಖಿಸಾರೈ, ಮುಂಗೇರ್, ಭಾಗಲ್ಪುರ್, ಕತಿಹಾರ್, ಪೂರ್ಣಿಯಾ, ಅರಾರಿಯಾ, ಸುಪೌಲ್, ಮಧುಬನಿ, ದರ್ಭಾಂಗ, ಸೀತಾಮರ್ಹಿ, ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಸಿವಾನ್, ಚಪ್ರಾ ಮತ್ತು ಆರಾ ಮೂಲಕ ಸಾಗಲಿದೆ.
