ಸತತ ಐದನೇ ಬಾರಿಗೆ ಅಧಿಕಾರವನ್ನು ಮತ್ತೆ ಪಡೆಯುವ ತಯಾರಿಯನ್ನು ನಡೆಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ಎನ್‌ಡಿಎಯಲ್ಲೇ ಇರುತ್ತೇನೆ, ಯಾವುದೇ ಬದಲಾವಣೆಗಳ ಬಗ್ಗೆ ಯೋಚಿಸುವುದಿಲ್ಲ” ಎಂದು ಹೇಳಿದ್ದಾರೆ.
ದೇಶಾದ್ಯಂತ ಸಾವಿರಾರು ಯುವ ಕ್ರೀಡಾಪಟುಗಳು ಭಾಗವಹಿಸುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜೆಡಿ(ಯು) ನಾಯಕ ಕುಮಾರ್, ತಾನು ಎನ್‌ಡಿಎ ಕೂಟದಲ್ಲೇ ಉಳಿಯುವುದಾಗಿ ಪುನರುಚ್ಚರಿಸಿದರು.
ಇದನ್ನು ಓದಿದ್ದೀರಾ? ಎರಡು ಬಾರಿ ತಪ್ಪು ಮಾಡಿದೆ, ಇನ್ನೆಂದೂ ಎನ್‌ಡಿಎ ತೊರೆಯಲ್ಲ: ನಿತೀಶ್ ಕುಮಾರ್
ಹಲವು ಬಾರಿ ಪಕ್ಷಾಂತರಗೊಳ್ಳುವ ಮೂಲಕವೇ ಸುದ್ದಿಯಾಗಿರುವ ನಿತೀಶ್ ಕುಮಾರ್ ಅವರು ಈಗ ಮತ್ತೆ ಪಕ್ಷಾಂತರಗೊಳ್ಳಬಹುದು ಎಂಬ ಸುದ್ದಿಗಳು ಆಗಾಗೇ ಆಗುತ್ತಲೇ ಇದೆ. ಈ ನಡುವೆ ತಾನು ಎನ್‌ಡಿಎಯಲ್ಲೇ ಇರುತ್ತೇನೆ ನಿತೀಶ್ ಕುಮಾರ್ ಹೇಳಿದ್ದಾರೆ.
“ನಾನು ಯಾವಾಗಲೂ ಇಲ್ಲೇ ಇರುತ್ತೇನೆ. ನನ್ನ ಪಕ್ಷ ಎರಡು ಬಾರಿ ನಾನು ಎನ್‌ಡಿಎ ಕೂಟದೊಂದಿಗಿನ ಮೈತ್ರಿಯನ್ನು ಮುರಿಯುವಂತೆ ಮಾಡಿದೆ. ಆದರೆ ಇದು ಮತ್ತೆ ಸಂಭವಿಸುವುದಿಲ್ಲ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
“ನನ್ನನ್ನು (ಮುಖ್ಯಮಂತ್ರಿ) ಮಾಡಿದವರು ಯಾರು? ಅಟಲ್ ಬಿಹಾರಿ ವಾಜಪೇಯಿ ಅವರು” ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಅವರ ಪಕ್ಷವು 1990ರ ದಶಕದ ಮಧ್ಯಭಾಗದಿಂದ ಬಿಜೆಪಿ ಮಿತ್ರಪಕ್ಷವಾಗಿತ್ತು. 2013ರಲ್ಲಿ ನರೇಂದ್ರ ಮೋದಿ ಅವರೊಂದಿಗಿನ ಅತೃಪ್ತಿಯ ನಂತರ ಬಿಜೆಪಿಯೊಂದಿಗಿನ ಮೈತ್ರಿ ಕೈಬಿಟ್ಟರು.
ಇದನ್ನು ಓದಿದ್ದೀರಾ? ಮೋದಿ 3.0 ಸರ್ಕಾರದಲ್ಲಿ ನಿತೀಶ್ ಪಕ್ಷಕ್ಕೆ 2 ಮಂತ್ರಿಗಿರಿ
ಒಂದು ವರ್ಷದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಹೀನಾಯವಾಗಿ ಸೋತಿದ್ದಾರೆ. ಮೋದಿ ಪ್ರಧಾನಿಯಾದರೂ ನಿತೀಶ್ ಕುಮಾರ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದಕ್ಕೆ ಕಾರಣ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರೊಂದಿಗಿನ ಮೈತ್ರಿ. ಅದಾದ ಬಳಿಕ 2017ರಲ್ಲಿ ಮತ್ತೆ ಎನ್‌ಡಿಎಗೆ ಮರಳಿದರು.
2022ರವರೆಗೆ ಈ ಮೈತ್ರಿ ಮುಂದುವರೆದಿದ್ದು, ಬಳಿಕ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಜೊತೆ ಕುಮಾರ್ ಕೈಜೋಡಿಸಿದರು. ಬಿಜೆಪಿಯನ್ನು ಸೋಲಿಸುವುದಾಗಿ ಪ್ರತಿಜ್ಞೆ ಮಾಡಿದರು.
ಬಳಿಕ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೆ ಮುನ್ನ, 70ರ ಹರೆಯದ ನಿತೀಶ್ ಕುಮಾರ್ ಅವರು ಎನ್‌ಡಿಎಗೆ ಮರಳಿದರು. ಬಿಜೆಪಿ ವಿರುದ್ಧವಾಗಿ ಒಟ್ಟುಗೂಡಿದ ಇಂಡಿಯಾ ಒಕ್ಕೂಟವನ್ನು ತ್ಯಜಿಸಿದರು.
