ನನ್ನ ಪತ್ನಿ ಗೀತಾ ಅವರು ಶಿವಮೊಗ್ಗ ಸಂಸದೆಯಾಗುವುದನ್ನು ನೋಡುವ ಆಸೆ ಇದೆ. ಕಾಂಗ್ರೆಸ್ ಟಿಕೆಟ್ ಕೊಟ್ಟರೆ, ಅದು ಸಾಧ್ಯವಾಗಬಹುದು ಎಂದು ನಟ ಶಿವ ರಾಜ್‌ಕುಮಾರ್ ಹೇಳಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ನಿಮಿತ್ತ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾವಹಿಸಿದ್ದರು. ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗೀತಾ ಅವರು ಸಂಸದೆ ಆಗುವ ಮೂಲಕ ಇತರೆ ಮಹಿಳೆಯರಿಗೆ ಮಾದರಿಯಾಗಲಿದ್ದಾರೆ” ಎಂದು ಹೇಳಿದರು.
“ಗೀತಾ ಅವರು ರಾಜಕಾರಣ ಕುಟುಂಬದಿಂದ ಬಂದವರು. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದೆ. ಅವರು ಸಂಸದೆಯಾದರೆ, ಸಂತೋಷ” ಎಂದು ಹೇಳಿದ್ದಾರೆ.
“ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ನಾನು ರಾಜಕೀಯಕ್ಕೆ ಬರೋದಿಲ್ಲ. ನನಗೆ ರಾಜಕೀಯದ ಮೂಲಕ ಜನ ಸೇವೆ ಮಾಡೋದು ಗೊತ್ತಿಲ್ಲ. ಕಷ್ಟ ಅಂತ ಬಂದವರಿಗೆ ಸಹಾಯ ಮಾಡುತ್ತೇನೆ” ಎಂದಿದ್ದಾರೆ.