ಮಹಿಳಾ ಮೀಸಲಾತಿ | ‘ಇಂಡಿಯಾ’ ಬೆಂಬಲ; ಎರಡು ಟೀಕೆಗಳನ್ನು ಮುಂದಿಟ್ಟ ಒಕ್ಕೂಟ

Date:

Advertisements

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸರುವ ಮಹಿಳಾ ಮೀಸಲಾತಿ ಮಸೂದೆಯು ವಿಪಕ್ಷಗಳ ‘ಇಂಡಿಯಾ’ ಒಕ್ಕೂಟವನ್ನು ಸಂದಿಗ್ಧತೆಗೆ ದೂಡಿತ್ತು. ಕಾಂಗ್ರೆಸ್, ಡಿಎಂಕೆ, ಟಿಎಂಸಿ ಹಾಗೂ ಎಡಪಕ್ಷಗಳು ಮಸೂದೆಯನ್ನು ಬೆಂಬಲಿಸಿದರೆ, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವಿರೋಧ ವ್ಯಕ್ತಪಡಿಸಿದ್ದವು. ಈ ಮಸೂದೆ ಇಂಡಿಯಾ ಒಕ್ಕೂಟವನ್ನು ವಿಭಜಿಸಬಹುದು ಎಂಬ ಅಭಿಪ್ರಾಯಗಳೂ ಇದ್ದವು. ಆದರೆ, ವಿಪಕ್ಷಗಳು ಉತ್ತಮ ರೀತಿಯಲ್ಲಿ ನಮಸ್ವಯ ಸಾಧಿಸಿವೆ.

ಒಕ್ಕೂಟವು ಮಸೂದೆಯನ್ನು ಸ್ವಾಗತಿಸುವುದರ ಜೊತೆಗೆ ಎರಡು ಟೀಕೆಗಳನ್ನು ಮುಂದಿಟ್ಟಿವೆ. ಅದರಲ್ಲಿ ಒಂದು) ಒಬಿಸಿ ಕೋಟಾ ನೀಡದಿರುವುದು. ಮತ್ತೊಂದು) ಅನುಷ್ಠಾನದಲ್ಲಿನ ವಿಳಂಬ.

ಒಬಿಸಿ ಕೋಟಾ ನೀಡಲು ಒತ್ತಾಯ

Advertisements

ಮಸೂದೆಯ ವಿರುದ್ಧ ಮತ ಚಲಾಯಿಸಬಾರದು ಅಥವಾ ಯಾವುದೇ ರೀತಿಯಲ್ಲಿ ಅದನ್ನು ವಿರೋಧಿಸಬಾರದು ಎಂಬ ವಿಚಾರದಲ್ಲಿ ಇಂಡಿಯಾ ಒಕ್ಕೂಟವು ಒಮ್ಮತವನ್ನು ಪ್ರದರ್ಶಿಸಿದೆ. ಹಾಗಾಗಿ, ಎಸ್‌ಪಿ ಮತ್ತು ಜೆಡಿಯು ಮಸೂದೆಯನ್ನು ವಿರೋಧಿಸುವುದಿಲ್ಲ. ಆದರೆ, ಮಹಿಳೆಯರಿಗೆ 33% ಮೀಸಲಾತಿಯೊಳಗೆ ಒಬಿಸಿ ಕೋಟಾವನ್ನೂ ನೀಡಬೇಕೆಂದು ಒತ್ತಾಯಿಸಲು ನಿರ್ಧರಿಸಿವೆ.

ಈ ಹಿಂದೆ, ಮಸೂದೆಯನ್ನು ಕಡಾಖಂಡಿತವಾಗಿ ವಿರೋಧಿಸಿದ್ದ ಪಕ್ಷಗಳಲ್ಲಿ ಒಂದಾಗಿದ್ದ ಆರ್‌ಜೆಡಿ, ಈಗ ಮಸೂದೆಯನ್ನು ಬೆಂಬಲಿಸಲು ಒಪ್ಪಿದೆ ಎಂದು ಹೇಳಲಾಗುತ್ತಿದೆ.

ಆರ್‌ಜೆಡಿ ನಿಲುವನ್ನು ಟ್ವೀಟ್‌ ಮೂಲಕ ವ್ಯಕ್ತಪಡಿಸಿರುವ ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ, “ಒಬಿಸಿ ಸಮುದಾಯಗಳ ಮಹಿಳೆಯರನ್ನು ಮೀಸಲಾತಿಯಿಂದ ಹೊರಗಿಡಲಾಗುತ್ತಿದೆ. ಕ್ಷೇತ್ರ ಪುನರ್‌ ವಿಂಡಗಣೆ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಜನಗಣತಿಯ ನಂತರ ಕ್ಷೇತ್ರ ಪುನರ್‌ ವಿಂಗಡಣೆ ನಡೆಯಲಿದೆ. ಜಾತಿ ಗಣತಿಗೂ ಬೇಡಿಕೆಯಿದ್ದು, ಕೇಂದ್ರವು ಅದನ್ನೂ ವಿಳಂಬಗೊಳಿಸಿದೆ. ಇದು ಗದ್ದಲವಲ್ಲದೇ ಮತ್ತೇನಲ್ಲ,” ಎಂದಿದ್ದಾರೆ.

ಮಹಿಳಾ ಮೀಸಲಾತಿಯಲ್ಲಿ ಒಬಿಸಿ ಕೋಟಾ ನೀಡಬೇಕೆಂಬುದು ಸಾಮಾಜಿಕ ನ್ಯಾಯದ ಪರವಾದ ವಿಚಾರವಾಗಿದೆ ಎಂದು ವಿಪಕ್ಷಗಳ ಒಕ್ಕೂಟ ಪ್ರತಿಪಾದಿಸಿದೆ.

ಅನುಷ್ಠಾನಕ್ಕೆ ತಡವೇಕೆ?

ಮಹಿಳಾ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲು ತಡವೇಕೆ ಎಂದು ಇಂಡಿಯಾ ಒಕ್ಕೂಟ ಪ್ರಶ್ನಿಸಿದೆ. ಈ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಗೃಹ ಮತ್ತು ಹಣಕಾಸು ಸಚಿವ ಪಿ ಚಿದಂಬರಂ ಟ್ವೀಟ್‌ ಮಾಡಿದ್ದು, “ಮುಂದಿನ ಜನಗಣತಿಯ ದಿನಾಂಕವನ್ನೂ ಗೊತ್ತುಪಡಿಸಲಾಗಿಲ್ಲ. ಅದೂ ಅನಿರ್ದಿಷ್ಟವಾಗಿದೆ. ಮುಂದಿನ ಕ್ಷೇತ್ರ ಮರುವಿಂಗಡಣೆ (ಬಾಗಶಃ ವಿವಾದಾತ್ಮಕ) ದಿನಾಂಕವೂ ಅದೇ ಪರಿಸ್ಥಿತಿಯಲ್ಲಿದೆ. ಮಹಿಳಾ ಮೀಸಲಾತಿಯು ಎರಡು ಅನಿರ್ದಿಷ್ಟ ದಿನಾಂಕಗಳ ಮೇಲೆ ಅವಲಂಬಿತವಾಗಿದೆ! ಮಹಿಳಾ ಮೀಸಲಾತಿ ಅನುಷ್ಠಾನವು ಜುಮ್ಲಾ (ಸುಳ್ಳು) ಇರಬಹುದೇ? ಮೀಸಲಾತಿಯನ್ನು ಈಗ ಸವೀಕರಿಸಲಾಗಿರುವ ಮತದಾರರ ಪಟ್ಟಿಗಳ ಆಧಾರದ ಮೇಲೆ ತಕ್ಷಣವೇ ಜಾರಿಗೆ ತರಬಹುದು” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮಹಿಳಾ ಮೀಸಲಾತಿ | 15 ವರ್ಷಗಳಿಂದ ಮಂಡನೆಯಾಗದ ಮಸೂದೆ; ವಿರೋಧಿಗಳು ಯಾರು?

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಎಎಪಿ ನಾಯಕ, ಎಹಲಿ ಸಚಿವ ಅತಿಶಿ, “ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಂತರ ಮಹಿಳಾ ಮೀಸಲಾತಿ ಜಾರಿಗೆ ತರುತ್ತೇವೆ ಎಂಬದು ಮಹಿಳೆಯರನ್ನು ಮೂರ್ಖರನ್ನಾಗಿಸುವ ತಂತ್ರ” ಎಂದು ಹೇಳಿದ್ದಾರೆ.

“ಈ ಮಸೂದೆಯನ್ನು 2027 ಅಥವಾ 2028ರಲ್ಲಿ ಜಾರಿಗೆ ತರಬಹುದು. ಆದರೆ, ಈಗ ಸರ್ಕಾರವು 2024ರ ಚುನಾವಣೆಯಲ್ಲಿ ಮಹಿಳೆಯರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಯುಪಿಎ ಧ್ಯೇಯ ಎಂದು ಕಾಂಗ್ರೆಸ್ ಮತ್ತು ಡಿಎಂಕೆ ಹೇಳುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ನಾವು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ್ದೇವೆ ಎಂದು ಟಿಎಂಸಿ ಹೇಳಿಕೊಂಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X