ಸಮಾಜದ ಸುಧಾರಣೆಗಾಗಿ ‘ಒಟ್ಟಿಗೆ ಕೆಲಸ ಮಾಡಲು ಜನರು ಮತ್ತು ಸಮುದಾಯಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ‘ಜುಕ್ತೋ ಸಾಧನ’ (ಸಹಕಾರಿ ವ್ಯವಸ್ಥೆ) ಕಲ್ಪನೆಯ ಮೇಲೆ ನಮ್ಮ ಚಿತ್ತವನ್ನು ಕೇಂದ್ರೀಕರಿಸಬೇಕಿದೆ ಎಂದು ಅರ್ಥಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ.
ಕೊಕ್ಕತ್ತಾದ ಅಲಿಪೋರ್ ಜೈಲ್ ಮ್ಯೂಸಿಯಂನಲ್ಲಿ ಆಯೋಜಿಸಲಾಗಿದ್ದ ‘ಚೈರ್ ಫಾರ್ ದಿ ರೀಡರ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ದೇಶದ ಇತಿಹಾಸವನ್ನು ಹಿಂದು ಮತ್ತು ಮುಸ್ಲಿಮರ ನಡುವಿನ ಸಹಯೋಗದ ಕೆಲಸದಿಂದ (ಜುಕ್ತೋ ಸಾಧನಾ) ಗುರುತಿಸಬಹುದು. ನಮ್ಮ ದೇಶದ ಇತಿಹಾಸದಲ್ಲಿ ಹಿಂದು ಮತ್ತು ಮುಸ್ಲಿಮರು ಯುಗಯುಗಾಂತರಗಳಿಂದ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಕಾಲದಲ್ಲಿ ‘ಜುಕ್ತೋ ಸಾಧನಾ’ (ಸಹಕಾರಿ ವ್ಯವಸ್ಥೆ) ಕಲ್ಪನೆಗೆ ನಾವು ಒತ್ತು ನೀಡಬೇಕಾಗಿದೆ. ಸಹಕಾರಿ ಕೆಲಸವು ಪರಿಪೂರ್ಣ ಸಮನ್ವಯದಲ್ಲಿ ಕೆಲಸ ಮಾಡುವುದನ್ನು ವ್ಯಾಖ್ಯಾನಿಸುತ್ತದೆ” ಹೇಳಿದ್ದಾರೆ.
“ಸಹಕಾರಿ ವ್ಯವಸ್ಥೆಯು ಕೇವಲ ಇತರ ಸಮುದಾಯದವರನ್ನು ಬದುಕಲು ಉತ್ತಮ ವ್ಯವಸ್ಥೆಯನ್ನು ನಿರ್ಮಿಸುವುದು ಮಾತ್ರವಲ್ಲ, ಯಾರನ್ನೂ ಹೊಡೆಯುವುದಿಲ್ಲ. ಬಹುಶಃ ಈಗಿನ ಪರಿಸ್ಥಿತಿಯಲ್ಲಿ ಜನರು ಹಲ್ಲೆ ಮಾಡುವುದನ್ನೇ ಹೆಚ್ಚಾಗಿ ಮೈಗೂಡಿಸಿಕೊಳ್ಳುತ್ತಿದ್ದಾರೆ. ಆದರೆ, ಮುಖ್ಯವಾಗಿ ಬೇಕಾಗಿರುವುದು ಒಟ್ಟಿಗೆ ಕೆಲಸ ಮಾಡುವುದು ಮತ್ತು ಒಳಗೊಳ್ಳುವುದು” ಎಂದು ಹೇಳಿದ್ದಾರೆ.
“ಮಕ್ಕಳು ಸ್ನೇಹಿತರಂತೆ ಒಟ್ಟಿಗೆ ಬೆಳೆಯುತ್ತಾರೆ ಮತ್ತು ಆಟವಾಡುತ್ತಾರೆ’ ಅವರು ಯಾವುದೇ ವಿಭಜನಕಾರಿ ದ್ವೇಷದ ವಿಷದಿಂದ ಪ್ರಭಾವಿತರಾಗಿರುವುದಿಲ್ಲ. ಅವರಿಗೆ ಸಹಿಷ್ಣುತೆಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿಲ್ಲ” ಎಂದು ಸೇನ್ ತಿಳಿಸಿದ್ದಾರೆ.