ಮಿಜೋರಾಂನಲ್ಲಿ 1966ರ ಮಾರ್ಚ್‌ನಲ್ಲಿ ರಾಜೇಶ್ ಪೈಲಟ್ ವಾಯುಪಡೆಯ ಪೈಲಟ್ ಆಗಿ ಬಾಂಬ್‌ಗಳನ್ನು ಹಾಕಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಆರೋಪಕ್ಕೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.
“ಮಾಳವೀಯ ಅವರು ಹೇಳಿರುವ ವಿಷಯ ಹಾಗೂ ದಿನಾಂಕ ತಪ್ಪಾಗಿವೆ. ನನ್ನ ತಂದೆ ಆ ವರ್ಷದ ಅಕ್ಟೋಬರ್‌ನಲ್ಲಿ ವಾಯುಪಡೆಗೆ ಸೇರಿದ್ದರು” ಎಂದು ಟ್ವಿಟರ್‌ನಲ್ಲಿ ದಾಖಲೆ ಸಮೇತ ಸಚಿನ್ ಪೈಲಟ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿಯ ಸೇಡಿನ ರಾಜಕಾರಣ ಎಂದ ಕಾಂಗ್ರೆಸ್
“ನೀವು ತಪ್ಪು ದಿನಾಂಕಗಳನ್ನು ಹೇಳಿದ್ದೀರಿ, ತಪ್ಪು ಸಂಗತಿಗಳನ್ನು ತಿಳಿಸಿದ್ದೀರಿ. ಹೌದು, ಭಾರತೀಯ ವಾಯುಪಡೆಯ ಪೈಲಟ್ ಆಗಿ, ನನ್ನ ತಂದೆ ಬಾಂಬ್‌ಗಳನ್ನು ಹಾಕಿದ್ದಾರೆ. ಆದರೆ ಅದು 1971ರ ಭಾರತ –ಪಾಕ್ ಯುದ್ಧದ ಸಮಯದಲ್ಲಿ, ಹಿಂದಿನ ಪೂರ್ವ ಪಾಕಿಸ್ತಾನದ ಮೇಲೆ ಬಾಂಬ್ ಹಾಕಿದ್ದರು. ನೀವು ಹೇಳುವಂತೆ ಮಾರ್ಚ್ 5, 1966 ರಂದು ಮಿಜೋರಾಂ ಮೇಲೆ ಬಾಂಬ್ ಎಸೆದಿರಲಿಲ್ಲ. ಅವರು ಭಾರತೀಯ ವಾಯುಸೇನೆಗೆ ನೇಮಕಗೊಂಡಿದ್ದು ಅಕ್ಟೋಬರ್ 29, 1966 ರಂದು (ಪ್ರಮಾಣ ಪತ್ರ ಲಗತ್ತಿಸಲಾಗಿದೆ). ಜೈ ಹಿಂದ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ಪೈಲಟ್ ಹಂಚಿಕೊಂಡಿರುವ ಪ್ರಮಾಣ ಪತ್ರದ ಪ್ರಕಾರ ಅಕ್ಟೋಬರ್ 29, 1966ರಲ್ಲಿ ಭಾರತೀಯ ವಾಯುಪಡೆಗೆ ರಾಜೇಶ್ ಪೈಲಟ್ ಅವರನ್ನು ನಿಯೋಜಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಹಿಮಾಚಲ ಪ್ರದೇಶ | ಭಾರಿ ಮಳೆಗೆ ಮೃತರ ಸಂಖ್ಯೆ 60ಕ್ಕೆ ಏರಿಕೆ; ಶಾಲಾ, ಕಾಲೇಜುಗಳಿಗೆ ರಜೆ
ಮಾರ್ಚ್ 5, 1966ರಂದು ಮಿಜೋರಾಂನ ರಾಜಧಾನಿ ಐಜ್ವಾಲ್‌ನಲ್ಲಿ ವಾಯುಪಡೆ ನಡೆಸಿದ ಬಾಂಬ್ ದಾಳಿಯಲ್ಲಿ ರಾಜೇಶ್ ಪೈಲಟ್ ಮತ್ತು ಸುರೇಶ್ ಕಲ್ಮಾಡಿ ಅವರ ಪಾತ್ರವೂ ಇದೆ. ಅಂದು ವಾಯುಪಡೆಯ ವಿಮಾನವನ್ನು ಅವರಿಬ್ಬರು ನಡೆಸುತ್ತಿದ್ದರು. ಇದಾದ ಬಳಿಕ ಇಬ್ಬರಿಗೂ ಕಾಂಗ್ರೆಸ್ ಟಿಕೆಟ್ ನೀಡಿತ್ತು.
‘ತಮ್ಮದೇ ಜನರ ಮೇಲೆ ದಾಳಿ ನಡೆಸಿದವರಿಗೆ ಇಂದಿರಾ ಗಾಂಧಿ ಅವರು ಹೇಗೆ ಗೌರವ ನೀಡಿದರು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ’ ಎಂದು ಅಮಿತ್ ಮಾಳವೀಯ ಟ್ವಿಟರ್‌ನಲ್ಲಿ(ಎಕ್ಸ್) ಆರೋಪಿಸಿದ್ದರು.