ಯಡಿಯೂರಪ್ಪ ಪೋಕ್ಸೋ ಕೇಸ್‌: ಘಟನೆ ಬಗ್ಗೆ ಸಾಕ್ಷಿ ನುಡಿಯುತ್ತಿರುವ ವಿಡಿಯೊ ವೈರಲ್

Date:

Advertisements

ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಲಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ’ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೋ) ಪ್ರಕರಣ ದಾಖಲಾದ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದಂತೆ ವಿಡಿಯೊ ತುಣುಕ್ಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಂತ್ರಸ್ತ ತಾಯಿ ಮತ್ತು ಮಗುವಿನ ಮುಖವನ್ನು ಹೈಡ್‌ ಮಾಡಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೊದಲ್ಲಿ ‘ಬಿ.ಎಸ್.ಯಡಿಯೂರಪ್ಪ ಮತ್ತು ಸಂತ್ರಸ್ತ ಮಹಿಳೆ’ಯ ಸಂಭಾಷಣೆ ಸೆರೆಯಾಗಿದೆ.

ಸಂತ್ರಸ್ತ ಮಹಿಳೆಯು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ತಡರಾತ್ರಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ವಿವರಗಳಿಗೂ ವೈರಲ್‌ ವಿಡಿಯೊದಲ್ಲಿ ದಾಖಲಾಗಿರುವ ಸಂಭಾಷಣೆಗೂ ಹೋಲಿಕೆ ಕಂಡುಬರುತ್ತಿದೆ.

Advertisements

ಮಾಜಿ ಸಿಎಂ ಒಬ್ಬರ ವಿರುದ್ಧ ಕರ್ನಾಟಕ ಪೊಲೀಸರು ಇಷ್ಟು ಸುಲಭವಾಗಿ ಪೋಕ್ಸೋ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂಬ ಗುಮಾನಿ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಜನರ ಅನುಮಾನಗಳಿಗೆ ವೈರಲ್ ವಿಡಿಯೊ ಪುಷ್ಠಿ ನೀಡಿದೆ.

ವಿಡಿಯೊದಲ್ಲಿ ಏನಿದೆ?

ಯಡಿಯೂರಪ್ಪನವರ ಕೋಣೆಯಿಂದ ಬಾಲಕಿಯು ಹೊರಬಂದ ಮೇಲೆ ಈ ವಿಡಿಯೊ ಚಿತ್ರೀಕರಣ ಮಾಡಿಕೊಂಡಿರುವಂತೆ ಕಾಣುತ್ತಿದೆ. ಸೋಫಾ ಮೇಲೆ ಕೂತಿರುವ ಯಡಿಯೂರಪ್ಪನತ್ತ ನಡೆದು ಬರುವ ಸಂತ್ರಸ್ತ ಬಾಲಕಿಯ ತಾಯಿ, “ಅಪ್ಪಾಜಿ ಇಲ್ಲೇ ಇದ್ದೆ, ಅಪ್ಪಾಜಿ ಏನ್ ಮಾಡುದ್ರಿ?” ಎಂದು ಕೇಳುತ್ತಾರೆ.

ಯಡಿಯೂರಪ್ಪ ಸುಮ್ಮನಿರುವುದನ್ನು ಗಮನಿಸಿ ಆ ಮಹಿಳೆ ಮತ್ತೆ, “ಒಳಗೆ ಕರೆದುಕೊಂಡು ಹೋಗಿ ಏನು ಮಾಡುದ್ರಿ ಅಪ್ಪಾಜಿ?” ಎಂದು ಮರುಪ್ರಶ್ನಿಸುತ್ತಾರೆ.

ಆಗ ಯಡಿಯೂರಪ್ಪ, “ಕೇಳಮ್ಮ ಏನ್ ಮಾಡ್ದೆ ಅಂತ. ನನ್ನ ಮೊಮ್ಮಗಳು ಇದ್ದಂಗೆ ಅವಳು” ಎನ್ನುತ್ತಾರೆ.

ಸಂತ್ರಸ್ತ ಮಹಿಳೆ: ’ಮತ್ತೆ ಯಾಕೆ ಬ್ಲೌಸ್ ಒಳಗೆ ಕೈ ಹಾಕಿದ್ರಿ?”

ಮಹಿಳೆಯ ಎಡಗೈ ಹಿಡಿದು ಯಡಿಯೂರಪ್ಪ, “ನನ್ ಮೊಮ್ಮೊಗಳು ಇದ್ದಂಗೆ ಅವಳು” ಎನ್ನುತ್ತಾರೆ.

ಮಹಿಳೆ: ಆಯ್ತು, ಒಳಗೆ ಯಾಕೆ… ಪಾಪ ಆ ಮಗುವಿಗೆ ಅಷ್ಟೊಂದು ಹಿಂಸೆ ಕೊಟ್ಟಿದ್ದು…?

ಯಡಿಯೂರಪ್ಪ: ಅಲ್ಲಾ ಮರಿ, ಒಂದು ನಿಮಿಷ ಹೇಳ್ತೀನಿ ಕೇಳು (ಕ್ಯಾಮೆರಾದಲ್ಲಿ ರೆಕಾರ್ಡ್ ಆಗುತ್ತಿರುವುದನ್ನು ಗಮನಿಸಿ). ಕ್ಯಾಮೆರಾ ತೋರಿಸ್ಬೇಡ…

(ಅಷ್ಟರಲ್ಲಿ ಗನ್ ಮ್ಯಾನ್ ಬರುವುದು ವಿಡಿಯೊದಲ್ಲಿ ಸೆರೆಯಾಗಿದೆ, ಫೋನ್ ರಿಂಗ್ ಆಗುತ್ತದೆ)

ಯಡಿಯೂರಪ್ಪ: ಏನು ತಲೆ ಕೆಡಿಸಿಕೊಳ್ಳಬೇಡ. ನನ್ ಮೊಮ್ಮಕ್ಕಳು ಏಳು ಜನ ಇದ್ದಾರೆ. ತುಂಬಾ ಒಳ್ಳೆ ಹುಡುಗಿ ಅವಳು. ನೋಡಿದೆ ನಾನು. ಚೆನ್ನಾಗಿ ಬೆಳೆಸು. ಏನು ಸಹಾಯ ಬೇಕು ನಾನು ಮಾಡ್ತೀನಿ.

ಸಂತ್ರಸ್ತ ಮಹಿಳೆ: ಅವಳ ಬ್ಲೌಸ್ ಒಳಗೆ ಕೈ ಹಾಕಿದ್ದೀರಲ್ಲ ಅಪ್ಪಾಜಿ.

ಯಡಿಯೂರಪ್ಪ: ಇಲ್ಲ ಮರಿ.

ಸಂತ್ರಸ್ತ ಮಹಿಳೆ: ಅಪ್ಪಾಜಿ, ಎಲ್ಲಾನೂ ಹಿಂಗೇನಾ ….(ಮುಂದೆ ಆಡಿಯೊ ಒಂದಿಷ್ಟು ಸರಿಯಾಗಿ ದಾಖಲಾಗಿಲ್ಲ)

ಯಡಿಯೂರಪ್ಪ: ಅವಳು ನನ್ನ ಮೊಮ್ಮಗಳು ಇದ್ದ ಹಂಗೆ. ಅವಳು ಒಳ್ಳೆಯ ಹುಡುಗಿ. ಏನ್ ಬೇಕೋ ನಾನ್ ಸಹಾಯ ಮಾಡ್ತೀನಿ. ನೀನ್ ಚೆನ್ನಾಗಿ ನೋಡ್ಕೋ.

ಮಹಿಳೆ: ಏನ್ ಸಹಾಯ ಮಾಡ್ತೀರಾ? 9 ವರ್ಷದಿಂದ ಹೋರಾಟ ಮಾಡ್ತಾ ಇದ್ದೀನಿ ಅಪ್ಪಾಜಿ. ನನ್ ಮೇಲೆ ಲಾಯರ್‌ ಎನ್‌ಒಸಿ ಕೊಟ್ಟಿದ್ದಾರೆ. ಒಂಬತ್ತನೇ ಲಾಯರ್‌. ಎಷ್ಟೂಂತ ನಾನು ಲಾಯರ್‌ಗಳ….

(ಯಡಿಯೂರಪ್ಪ ಮಾತಿನ ಮಧ್ಯ ಪ್ರವೇಶಿಸಿ)

ಯಡಿಯೂರಪ್ಪ: ಅಲ್ಲ ಮರೀ ನಿಂಗೆ ಏನು ಬೇಕು ಹೇಳು ನಾನು ಮಾಡ್ತೀನಿ.

ಮಹಿಳೆ: ಲಾಯರ್‌ ಇಡ್ಸಿ, ಇಲ್ಲ ಎಸ್‌ಐಟಿ ಮಾಡ್ಸಿ. ಎಲ್ಲ ಪ್ರೂಫ್‌ ಸಮೇತ ಕೊಡ್ತೀನಿ, ಎಸ್‌ಐಟಿ ರಚಿಸಿರಿ.

– ಇದಿಷ್ಟು ವೈರಲ್ ವಿಡಿಯೊದಲ್ಲಿ ಸೆರೆಯಾಗಿರುವ ವಿಚಾರ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಇರುವ ಅಂಶಗಳು ವಿಡಿಯೊದಲ್ಲಿನ ವಿವರಗಳಿಗಿಂತ ಭಿನ್ನವಾಗಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿರಿ: ಆರು ಗಂಟೆ ಕಾಲ ಸಂತ್ರಸ್ತರನ್ನು ಕಾಯಿಸಿದ ಪೊಲೀಸರು; ಕೊನೆಗೂ ಬಿಎಸ್‌ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಎಫ್‌ಐಆರ್‌ನಲ್ಲಿ ಏನಿದೆ?

ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರ ಸಂಬಂಧ ನ್ಯಾಯ ಒದಗಿಸುವಂತೆ ಕೋರಿ, ಎಸ್‌ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲು 2024ರ ಫೆಬ್ರುವರಿ 2ರಂದು ಯಡಿಯೂರಪ್ಪನವರ ಮನೆಗೆ ಸಂತ್ರಸ್ತ ಬಾಲಕಿ ಹಾಗೂ ತಾಯಿ ಹೋಗಿದ್ದರು. ಆ ವೇಳೆ 9 ನಿಮಿಷಗಳ ಕಾಲ ಯಡಿಯೂರಪ್ಪ ಇವರೊಂದಿಗೆ ಮಾತನಾಡಿದ್ದರು. ಇಬ್ಬರಿಗೂ ಟೀ ಕುಡಿಸಿದ್ದರು. ಬಾಲಕಿಯು ಯಡಿಯೂರಪ್ಪನವರನ್ನು ತಾತಾ ಎಂದು ಕರೆಯುತ್ತಿದ್ದರು. ಯಡಿಯೂರಪ್ಪ ಬಾಲಕಿಯ ಕೈ ಹಿಡಿದುಕೊಂಡೇ ಮಾತನಾಡುತ್ತಿದ್ದರು. ಬಾಲಕಿಯ ತಾಯಿ ಮಾಜಿ ಮುಖ್ಯಮಂತ್ರಿಯನ್ನು ಅಪ್ಪಾಜಿ ಎಂದು ಸಂಬೋಧಿಸುತ್ತಿದ್ದರು. ಆ ವೇಳೆ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಯಡಿಯೂರಪ್ಪ, ಸುಮಾರು 5 ನಿಮಿಷಗಳ ಕಾಲ ಬಾಗಿಲು ಹಾಕಿಕೊಂಡು ಇದ್ದರು. ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಯಡಿಯೂರಪ್ಪ ಹೊರಗೆ ಬಿಟ್ಟಿಲ್ಲ. ಆ ವೇಳೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಬಾಲಕಿಯು ರೂಮಿನಿಂದ ಓಡಿಬಂದು ತಾಯಿಗೆ ವಿಷಯವನ್ನು ತಿಳಿಸಿದ್ದಾರೆ. “ಹೀಗೇಕೆ ಮಾಡಿದಿರಿ?” ಎಂದು ತಾಯಿ ಕೇಳಲಾಗಿ, “ರೇಪ್‌ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಹಾಗೆ ಮಾಡಿದೆ” ಎಂದಿದ್ದಾರೆ. ತಕ್ಷಣವೇ ಯಡಿಯೂರಪ್ಪ ಕ್ಷಮೆ ಯಾಚಿಸುತ್ತಾ, “ಈ ವಿಚಾರವನ್ನು ಹೊರಗಡೆ ಎಲ್ಲಿಯೂ ಹೇಳಬಾರದು” ಎಂದು ತಡೆಯಲು ಸಾಕಷ್ಟು ಪ್ರಯತ್ನಿಸಿದ್ದಾರೆ.

ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಹೋದಾಗ ಲೈಂಗಿಕ ಕಿರುಕುಳ ನೀಡಿರುವ ಯಡಿಯೂರಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ತಾಯಿ ದೂರಿನಲ್ಲಿ ಕೋರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X