ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು, “ನೀವು ನಮ್ಮ ಬೆನ್ನೆಲುಬು, ಪಕ್ಷದ ಡಿಎನ್‌ಎ” ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಮಾಡಲಾಗಿದ್ದು ರಾಹುಲ್ ಗಾಂಧಿ, “ಬಿಜೆಪಿ-ಆರ್‌ಎಸ್‌ಎಸ್ ಭಾರತದ ಕಲ್ಪನೆಗೆ ವಿರುದ್ಧವಾಗಿವೆ. ಕಾನೂನಿನ ಚೌಕಟ್ಟಿನ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“You are the Congress worker, our backbone and the DNA of our party.
The BJP-RSS are against the idea of India. They are attacking our Constitution, the country’s democratic structure, our institutions, including the ECI, as well as the legal framework of India.
You fight… pic.twitter.com/eY9mWkztxV
— Congress (@INCIndia) April 18, 2024
“ನೀವು ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಬೆನ್ನೆಲುಬು ಮತ್ತು ನಮ್ಮ ಪಕ್ಷದ ಡಿಎನ್‌ಎ. ನೀವು ನಮ್ಮ ಸಿದ್ಧಾಂತವನ್ನು ಅರ್ಥಮಾಡಿಕೊಂಡಿದ್ದೀರಿ ಮತ್ತು ಅದಕ್ಕಾಗಿ ನೀವು ಪ್ರತಿದಿನ ಹೋರಾಡುತ್ತಿದ್ದೀರಿ. ನೀವು ಇಲ್ಲದೆ ನಮಗೆ ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದು ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಇತ್ತೀಚಿನ ಮೋದಿ ಸಂದರ್ಶನ ಫ್ಲಾಪ್ ಶೋ, ಬಿಜೆಪಿ 150 ಸ್ಥಾನ ಕೂಡಾ ದಾಟಲ್ಲ: ರಾಹುಲ್ ಗಾಂಧಿ
“ಪ್ರಸ್ತುತ ಚುನಾವಣೆ ಆರಂಭವಾಗುತ್ತಿದೆ. ಆದರೆ ಬಿಜೆಪಿ-ಆರ್‌ಎಸ್‌ಎಸ್ ಭಾರತದ ಕಲ್ಪನೆಗೆ ವಿರುದ್ಧವಾಗಿದೆ. ಅವರು ನಮ್ಮ ಸಂವಿಧಾನ, ದೇಶದ ಪ್ರಜಾಪ್ರಭುತ್ವ ರಚನೆ, ಇಸಿಐ ಸೇರಿದಂತೆ ಭಾರತದ ಕಾನೂನು ಚೌಕಟ್ಟಿನ ಮೇಲೆ ದಾಳಿ ಮಾಡುತ್ತಿದ್ದಾರೆ. ನೀವು ಆರ್‌ಎಸ್‌ಎಸ್ ಸಿದ್ದಾಂತದ ವಿರುದ್ಧವಾಗಿ ಬೀದಿಗಳಲ್ಲಿ, ಹಳ್ಳಿಗಳಲ್ಲಿ ಮತ್ತು ಎಲ್ಲೆಡೆ ಹೋರಾಡುತ್ತೀರಿ, ನೀವು ರಕ್ಷಕರು” ಎಂದು ರಾಹುಲ್ ತಿಳಿಸಿದ್ದಾರೆ.
“2024 ರ ಲೋಕಸಭಾ ಚುನಾವಣೆ ವೇಳೆ ಭಾರತದ ಜನರ ಪ್ರಮುಖ ವಿಚಾರಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲು ನೀವು ನಮಗೆ ಸಹಾಯ ಮಾಡಿದ್ದೀರಿ. ನಾವು ನಿಮ್ಮನ್ನು ಅವಲಂಬಿಸಿದ್ದೇವೆ ಮತ್ತು ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಾನು ನಿಮಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ನಾವು ಬಿಜೆಪಿ ಮತ್ತು ಅವರ ಸಿದ್ಧಾಂತವನ್ನು ಸೋಲಿಸಲಿದ್ದೇವೆ” ಎಂದು ಕೂಡಾ ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ: ರಾಹುಲ್ ಗಾಂಧಿ ವಾಗ್ದಾಳಿ
18 ನೇ ಲೋಕಸಭೆಯ 543 ಸದಸ್ಯರನ್ನು ಆಯ್ಕೆ ಮಾಡಲು 2024 ರ ಲೋಕಸಭೆ ಚುನಾವಣೆಯು ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆಯಲಿವೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.