ಜಾತಿ ವ್ಯವಸ್ಥೆಯು ಯಾವ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಸ್ಥಾಪಿತ ಆಗಿದೆಯೋ, ಅಂತಹ ಧಾರ್ಮಿಕ ಭಾವನೆಗಳನ್ನು ನಾಶ ಮಾಡುವ ತನಕ ಜಾತಿ ವ್ಯವಸ್ಥೆಯನ್ನು ಒಡೆಯುವುದು ಸಾಧ್ಯವಿಲ್ಲ ಎಂಬುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದನೆಯಾಗಿತ್ತು. ಈ ಪ್ರತಿಪಾದನೆಯನ್ನು 1936ರ ಲಾಹೋರ್‌ನ ವಾರ್ಷಿಕ ಸಮ್ಮೇಳನವೊಂದರಲ್ಲಿ ವಿವರವಾಗಿ ಮಂಡಿಸುವಂತೆ ಕೋರಲಾಗಿತ್ತು. ‘ಜಾತಿವ್ಯವಸ್ಥೆಯ ಮೂಲ ಚಾತುರ್ವರ್ಣ್ಯ ಪದ್ಧತಿ. ಚಾತುರ್ವರ್ಣ್ಯದ ಮೂಲ ವೇದ ಶಾಸ್ತ್ರಗಳು. ಜಾತಿಯನ್ನು ನಾಶ ಮಾಡಬೇಕಿದ್ದರೆ ಅವುಗಳ ಬೇರುಗಳಾದ ವೇದ ಶಾಸ್ತ್ರಗಳನ್ನು ಧಿಕ್ಕರಿಸಿ ಮೂಲೆಗೆಸೆಯಬೇಕು. ಅವುಗಳ ಅಧಿಕಾರವನ್ನು ನಾಶಗೊಳಿಸಬೇಕು’ ಎಂಬ ಸಿದ್ಧೌಷಧವನ್ನು…

ಡಿ ಉಮಾಪತಿ
ಹಿರಿಯ ಪತ್ರಕರ್ತರು