ಮೀಡಿಯಾದ ಸಿಬ್ಬಂದಿಯ ಸಾಮಾಜಿಕ ಹಿನ್ನೆಲೆಯು ಸುದ್ದಿಯ ಆಯ್ಕೆ ಮತ್ತು ಮಂಡನೆ-ನಿರೂಪಣೆಗಳನ್ನು ಅಗಾಧವಾಗಿ ಪ್ರಭಾವಿಸುತ್ತದೆ. ಸಮಾಜದ ಎಲ್ಲ ವರ್ಗವೂ ಮೀಡಿಯಾದಲ್ಲಿ ಎಲ್ಲಿಯವರೆಗೆ ಪ್ರಾತಿನಿಧ್ಯ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಅದರ ಮಾಹಿತಿ ಬಿತ್ತರ ಏಕಮುಖಿಯೂ, ಸಮತೂಕರಹಿತವೂ ಆಗಿರುತ್ತದೆ. ಈ ಸಮತೂಕವನ್ನು ಸಾಧಿಸಲೆಂದೇ ದಲಿತರು ತಮ್ಮದೇ ಮೀಡಿಯಾ ಹೊಂದಬೇಕೆಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಪಾದಿಸಿದ್ದರು. ದಲಿತರು ಎದುರಿಸುವ ಅನ್ಯಾಯಗಳನ್ನು ವಿರೋಧಿಸಿ ಹೋರಾಡುವುದು ದಲಿತ ಪತ್ರಿಕೋದ್ಯಮದಿಂದ ಮಾತ್ರವೇ ಸಾಧ್ಯ ಎಂದು ಅವರು ನಂಬಿದ್ದರು. ನೂರು ವರ್ಷಗಳ ಹಿಂದೆ ಅವರು ಬರೆದ ಮಾತುಗಳು ಇಂದಿಗೂ ಕಹಿ ಸತ್ಯವಾಗಿ…

ಡಿ ಉಮಾಪತಿ
ಹಿರಿಯ ಪತ್ರಕರ್ತರು