ಬಾಬಾ ಸಾಹೇಬರು ಕಾನೂನು, ರಾಜಕಾರಣ, ಆರ್ಥಿಕತೆ ಮತ್ತು ಸಮಾಜ ಕ್ಷೇತ್ರಗಳ ಮೇಲೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಭಾರತೀಯ ಸಮಾಜವನ್ನು ಕುರಿತ ಅವರ ವಿಶ್ಲೇಷಣೆಯಿರುವ ಪುಸ್ತಕಗಳು, ಸಣ್ಣಮಟ್ಟದ ಸಂಶೋಧಕನಾಗಿರುವ ನನ್ನ ಪಾಲಿಗೆ ಹೆಚ್ಚು ಮಹತ್ವದವಾಗಿ ಕಾಣುತ್ತವೆ. ಅದರಲ್ಲೂ ನನ್ನ ತಿಳಿವಳಿಕೆ ಮತ್ತು ಪ್ರಜ್ಞೆಗಳನ್ನು ಬದಲಾಯಿಸಿದ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’, ‘ಅಸ್ಪೃಶ್ಯರು ಯಾರು?’, ‘ಜಾತಿ ನಿರ್ಮೂಲನೆ’ಗಳನ್ನು ನಾನು ಮತ್ತೆಮತ್ತೆ ಓದುತ್ತೇನೆ. ಈ ಮೂರೂ ಪುಸ್ತಕಗಳು, ಭಾರತದ ಸಾಮಾಜಿಕ ಚರಿತ್ರೆಯನ್ನು ಕ್ರಾಂತಿಕಾರಕ ಪ್ರಜ್ಞೆಯಿಂದ ಬರೆಯಲ್ಪಟ್ಟಿವೆ. ಅಂಬೇಡ್ಕರರ ಪ್ರಖರ ಚಿಂತನೆ, ವ್ಯಾಪಕ…

ರಹಮತ್ ತರೀಕೆರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.