ಡಾ. ಅಂಬೇಡ್ಕರ್ ಅವರ 50 ವರ್ಷದ ಪ್ರಭಾವ ಬದಲಾವಣೆಗಳ ಕುರಿತು ಚಿಂತಿಸುವುದು ಎಂದರೆ; ದಲಿತ ಚಳವಳಿಯ 50 ವರ್ಷಗಳ ಸಿಂಹಾವಲೋಕನ ಮಾಡುವುದು ಎಂದರ್ಥ. ಅಂಬೇಡ್ಕರ್ ಚಿಂತನೆ ಇಲ್ಲದೆ ದಲಿತ ಚಳವಳಿ ಇಲ್ಲ. ಸಾಹಿತ್ಯಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಯಾವುದೇ ನೆಲೆಯಿಂದ ನಾವು ನೋಡಿದರೂ ಚಳವಳಿಯನ್ನು ಹೊರತಾಗಿಸಿ ನೋಡಲು ಸಾಧ್ಯವಿಲ್ಲ. 1. ದಲಿತ ಚಳವಳಿಯ ಹುಟ್ಟು ಮತ್ತು ಅಂಬೇಡ್ಕರ್ 1973 ಮೈಸೂರಿನ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿ. ಬಸವಲಿಂಗಪ್ಪನವರು “ಕನ್ನಡ ಸಾಹಿತ್ಯದಲ್ಲಿ ಏನಿದೆ? ಎಲ್ಲವೂ ಬೂಸಾ” ಎಂದು…

ಪ್ರೊ. ಅರವಿಂದ ಮಾಲಗತ್ತಿ
ಕನ್ನಡ ಸಾಹಿತ್ಯದಲ್ಲಿ ಹೊಸ ಚರ್ಚೆಗಳನ್ನು ಹುಟ್ಟು ಹಾಕಿದವರು ಪ್ರೊ.ಅರವಿಂದ ಮಾಲಗತ್ತಿ. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಹೆಸರು ಮಾಡಿದವರು. ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಮುಗಿಯದ ಕಥೆಗಳು, ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು ಮೊದಲಾದ ಕೃತಿ ರಚಿಸಿದ್ದಾರೆ. ಅವರ ಆತ್ಮಕತೆ 'ಗೌರ್ಮೆಂಟ್ ಬ್ರಾಹ್ಮಣ' ಕನ್ನಡ ಸಾಹಿತ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.