ಕರ್ನಾಟಕದಲ್ಲಿಂದು ಉನ್ನತ ಶಿಕ್ಷಣ ಕ್ಷೇತ್ರವು ಬೃಹತ್ತಾಗಿ ಬೆಳೆದು ನಿಂತಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಬಹುತೇಕ ಸೂಚ್ಯಂಕಗಳ ಆಧಾರದಲ್ಲಿ ಹೇಳಬಹುದಾದರೆ, ದೇಶದ ಬಹುತೇಕ ರಾಜ್ಯಗಳಿಗಿಂತಲೂ ಕರ್ನಾಟಕವು ಮುಂದಿದೆ, ಅಷ್ಟು ಮಾತ್ರವಲ್ಲ ಇತ್ತೀಚಿನ 2021-2022ರ ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಷನ್ ವರದಿಯ ಪ್ರಕಾರ GER (ಗ್ರಾಸ್ ಎನ್ರೋಲ್ಮೆಂಟ್ ರೇಷಿಯೋ) ದೇಶದಲ್ಲಿಯೇ ಅತಿ ಹೆಚ್ಚು ಕಾಲೇಜುಗಳಿರುವ ಮೂರನೇ ರಾಜ್ಯ ನಮ್ಮದು. ಅಲ್ಲದೇ ದೇಶದಲ್ಲಿಯೇ ಅತೀ ಹೆಚ್ಚು ಕಾಲೇಜುಗಳನ್ನು ಹೊಂದಿರುವ ಜಿಲ್ಲೆ ಬೆಂಗಳೂರು ನಗರ. ಅಲ್ಲದೇ, 1000ಕ್ಕೂ ಹೆಚ್ಚು ಕಾಲೇಜುಗಳನ್ನು…

ಶಶಾಂಕ್ ಎಸ್.ಆರ್.
ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಇದಕ್ಕೆ ಮುಂಚೆ ಹೈದರಾಬಾದಿನ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಗಿನಿಂದಲೇ ಚಳವಳಿಗಳ ಜೊತೆಗೆ ಸಕ್ರಿಯವಾಗಿ ಭಾಗಿಯಾಗುತ್ತಾ ಬಂದಿರುವ ಶಶಾಂಕ್ ಶಿಕ್ಷಣ ಹಾಗೂ ಇತರ ಸಂಗತಿಗಳ ಕುರಿತು ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಸಾಮಾಜಿಕ ಚಳವಳಿ ಮತ್ತು ಅನುವಾದ ಅವರ ಆಸಕ್ತಿ ಕ್ಷೇತ್ರ. ಈ ಸಧ್ಯ ‘ದಿ ಮಿಸ್-ಎಜುಕೇಶನ್ ಆಫ್ ದಿ ನೀಗ್ರೋ’ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ.