ಆಧುನಿಕ ಭಾರತದ ಚರಿತ್ರೆಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಭಿನ್ನ ತಾತ್ವಿಕ ಸ್ವರೂಪವುಳ್ಳ ಎರಡು ಸಂಘರ್ಷಾತ್ಮಕ ವ್ಯಕ್ತಿತ್ವಗಳು. ಭಾರತದ ಸಾಮಾಜಿಕ ಸಂರಚನೆಯಲ್ಲಿರುವ ಹಲವು ಸಂಕೀರ್ಣ ಬಿಕ್ಕಟ್ಟು, ತೊಡಕು, ವೈರುಧ್ಯಗಳು ಅರ್ಥವಾಗಬೇಕಾದರೆ, ಈ ಎರಡೂ ವ್ಯಕ್ತಿತ್ವಗಳ ನಡುವೆ ನಡೆದಿರುವ ಗಂಭೀರವಾದ ವಾದ-ವಾಗ್ವಾದಗಳನ್ನು ಗಮನಿಸಬೇಕಾಗುತ್ತದೆ. ಭಾರತದ ಸಾಮಾಜಿಕ ಹಾಗೂ ಸೈದ್ಧಾಂತಿಕ ನಿಲುವಿನ ಸಮರ್ಥ ಪ್ರತಿಮೆ-ರೂಪಕಗಳಂತಿರುವ ಗಾಂಧಿ-ಅಂಬೇಡ್ಕರ್ ಮಹತ್ವದ ವ್ಯಕ್ತಿತ್ವವಾದಿ ಸಂಕಥನವಾಗಿದ್ದಾರೆ. ಈ ಎರಡೂ ಮಹಾನ್ ಚೇತನಗಳ ತಾತ್ವಿಕ ನಿಲುವು ಹಾಗೂ ಅವರ ಕಾಲಘಟ್ಟದ ಭಾರತೀಯ ಸಾಮಾಜಿಕ…

ಡಾ. ಅಪ್ಪಗೆರೆ ಸೋಮಶೇಖರ್
ಡಾ.ಅಪ್ಪಗೆರೆ ಸೋಮಶೇಖರ್ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸೋಮಶೇಖರ್ ಅವರು ಮೈಸೂರು ವಿವಿಯಿಂದ ಕನ್ನಡ ಎಂ.ಎ. ಪದವಿ, 'ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ: ಒಂದು ಅಧ್ಯಯನ' ವಿಷಯದ ಸಂಶೋಧನೆಗೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ, ಮೌನ ಮಾತು ಪ್ರತಿಭಟನೆ, ಸುಟ್ಟಾವು ಬೆಳ್ಳಿ ಕಿರಣ, ಸಂಬಂಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ- ಡಾ.ಸಿದ್ದಲಿಂಗಯ್ಯ, ಡಾ.ರಾಜ್‌ಕುಮಾರ್, ಅಂತಃಕರಣ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.