“ಧರ್ಮ ಅಪಾಯದಲ್ಲಿದೆ” ಎಂಬುದು ಭಯ ಮತ್ತು ದ್ವೇಷದ ಮೇಲೆ ಕಟ್ಟಿದ ಸುಳ್ಳು. ಭಾರತದ ಧರ್ಮಗಳು ಶತಮಾನಗಳಿಂದ ಸುರಕ್ಷಿತವಾಗಿವೆ. ಸಂಘಪರಿವಾರ ಹಬ್ಬಿಸುವ ಸುಳ್ಳುಗಳಿಗೆ ಮಿತಿಯೆಂಬುದಿಲ್ಲ. ಈ ದೇಶವನ್ನು 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಸ್ಲಿಂ ದೊರೆಗಳು ಆಳಿದರು. ಆದರೆ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಕ್ರಿಶ್ಚಿಯನ್ನರಾದ ಬ್ರಿಟಿಷರು 200ಕ್ಕೂ ಹೆಚ್ಚು ವರ್ಷ ಆಳಿದರು. ಆದರೆ ಭಾರತವನ್ನು ಕ್ರಿಶ್ಚಿಯನ್ ದೇಶವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಈಗ ಈ ದೇಶವನ್ನು ಹಿಂದುತ್ವವಾದಿಗಳಿಂದ ಹಿಂದೂ ಹೃದಯ ಸಾಮ್ರಾಟ ಎಂದು ಕರೆಸಿಕೊಳ್ಳುವ ಮೋದಿಯವರು 11 ವರ್ಷದಿಂದ ಆಳುತ್ತಿದ್ದಾರೆ. ಹೀಗಿರುವಾಗ ಮುಸ್ಲಿಂ ರಾಷ್ಟ್ರವಾಗಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಜನರು ಕೇಳಿಕೊಳ್ಳಬೇಕು ಭಾರತ- ಶತಕೋಟಿ…

ಮುತ್ತುರಾಜು
ಪತ್ರಕರ್ತ, ಲೇಖಕ