1956ರ ಏಕೀಕೃತ ಕರ್ನಾಟಕದ ರಚನೆಯನ್ನು ಹೊರಗಿಟ್ಟರೆ, ರಾಜ್ಯಕ್ಕೆ ಕ್ರೈಸ್ತರ ಕೊಡುಗೆ ಮತ್ತು ಅಲ್ಲಿ ಅವರ ಸ್ಥಿತಿಗತಿಯ ಬಗ್ಗೆ ಬರೆಯುವುದೇ ಸಾಧ್ಯವಿಲ್ಲ (ಹಿಂದೆ ಮೈಸೂರು ಎಂದು ಹೆಸರಿದ್ದ ರಾಜ್ಯಕ್ಕೆ ದೇವರಾಜ ಅರಸ್ ಸರಕಾರ 1973ರ ನವೆಂಬರ್ 1ರಂದು “ಕರ್ನಾಟಕ” ಎಂದು ಹೆಸರಿಟ್ಟು 50 ವರ್ಷಗಳಾಗಿವೆ). ಯಾಕೆಂದರೆ, ಕ್ರೈಸ್ತರು ಗಣನೀಯ ಸಂಖ್ಯೆಯಲ್ಲಿ ಇರುವ ಉತ್ತರ ಕನ್ನಡ ಮತ್ತು ಧಾರವಾಡ ಪ್ರದೇಶಗಳು ಮುಂಬಯಿ ಪ್ರಾಂತ್ಯ (ಹಿಂದೆ ಬಾಂಬೆ ಪ್ರೆಸಿಡೆನ್ಸಿ)ಕ್ಕೆ ಸೇರಿದ್ದರೆ, ರಾಜ್ಯದ ಬಹುತೇಕ ಕ್ರೈಸ್ತರು ವಾಸಿಸುವ ಮಂಗಳೂರು, ಉಡುಪಿಗಳನ್ನು ಒಳಗೊಂಡ ಅವಿಭಜಿತ…

ನಿಖಿಲ್ ಕೋಲ್ಪೆ
ದಕ್ಷಿಣ ಕನ್ನಡದ ಬಂಟ್ವಾಳದವರಾದ ನಿಖಿಲ್ ಕೋಲ್ಪೆಯವರು ಅಪಾರ ಅನುಭವ ಹೊಂದಿರುವ ಹಿರಿಯ ಪತ್ರಕರ್ತರು. 80ರ ದಶಕದಲ್ಲಿ ಮುಂಬೈನಲ್ಲಿ ಹಲವು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು ನಂತರ ದಕ್ಷಿಣ ಕನ್ನಡದ ಪ್ರಜ್ಞಾವಂತ ಪತ್ರಿಕೆಗಳಾದ ಮುಂಗಾರು ಮತ್ತು ಜನವಾಹಿನಿ ಪತ್ರಿಕೆಗಳಲ್ಲಿ ದುಡಿದವರು. ಇಂದಿಗೂ ವಾರ್ತಾಭಾರತಿ, ನ್ಯಾಯಪಥ ಸೇರಿದಂತೆ ಹಲವು ಪತ್ರಿಕೆಗಳಿಗೆ ನಿರಂತರವಾಗಿ ಲೇಖನಗಳನ್ನು ಬರೆಯುತ್ತಾ, ಅನುವಾದ ಮಾಡುವ ವೃತ್ತಿಯನ್ನೂ ಮುಂದುವರಿಸಿದ್ದಾರೆ.