ಭಾರತದಲ್ಲಿ ಅತೀ ಹೆಚ್ಚು ದುರ್ವ್ಯಾಖ್ಯಾನಕ್ಕೊಳಗಾಗುತ್ತಿರುವ ಅರೆಬಿಕ್ ಪದ ‘ಜಿಹಾದ್’. ಜಿಹಾದ್- ಹಾಗೆಂದರೇನು? ಜಿಹಾದ್ ಎಂದರೆ ಸಮರ / ಯುದ್ಧ ಎಂದರ್ಥ. ಅದಕ್ಕೆ ಯಾವುದೇ ವಿಧದ ವಿಪರೀತ ಅರ್ಥವಿರುವುದಿಲ್ಲ. ಆದರೆ ಅದು ಬಹು ವಿಸ್ತಾರ ನೆಲೆಗಟ್ಟುಳ್ಳ ಒಳಿತಿನ ಆಗರ. ಜಿಹಾದ್‌ನಲ್ಲೇ ಶ್ರೇಷ್ಠ ಜಿಹಾದ್- ಸ್ವಶರೀರದೊಂದಿಗೆ ನಡೆಸುವ ಜಿಹಾದ್. ಹಾಗೆಂದರೆ ಸ್ವಶರೀರವು ಕೆಡುಕಿನತ್ತ ಹೊರಳದಂತೆ ತಡೆಯುವ ಯುದ್ಧ. ಸುಳ್ಳು ಹೇಳದಂತೆ, ಅಕ್ರಮ, ಅನ್ಯಾಯವೆಸಗದಂತೆ, ವ್ಯಭಿಚಾರ ನಡೆಸದಂತೆ, ಶರಾಬು ಕುಡಿಯದಂತೆ ಒಟ್ಟಿನಲ್ಲಿ ಕೆಡುಕಿನ ಯೋಚನೆಗಳಿಂದ ನಮ್ಮ ಮನಸ್ಸನ್ನು ಸದಾ ದೂರವಿಡುವಂತೆ ನಮ್ಮ…

ಇಸ್ಮತ್ ಪಜೀರ್
ಮಂಗಳೂರಿನ ಲೇಖಕರಾದ ಇಸ್ಮತ್ ಪಜೀರ್, ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಸರ್ಕಾರದ ನೀತಿಗಳನ್ನು ಖಂಡಿಸಿ ರಾಜೀನಾಮೆ ನೀಡಿದ್ದರು. ಮುಸ್ಲಿಂ ಸಮುದಾಯದ ಕುರಿತು ಬಿತ್ತಲಾಗುತ್ತಿರುವ ಸುಳ್ಳುಗಳನ್ನು ಬಯಲು ಮಾಡುತ್ತಿರುವ ಮಹತ್ವದ ಲೇಖಕರಲ್ಲಿ ಇವರೂ ಒಬ್ಬರು.