ಈ ವಿಷಯದ ಬಗ್ಗೆ ಹೇಳಬೇಕೆಂದರೆ ರಾಜಧಾನಿ ರಾಜಕಾರಣ, ಒಕ್ಕೂಟ ವ್ಯವಸ್ಥೆ, ಅಧಿಕಾರ ಕೇಂದ್ರೀಕರಣ, ಹಣಕಾಸು ಹಂಚಿಕೆ, ಸಮೂಹ ಅಂಧತ್ವ, ಇತರೀಕರಣ, ಸಾಂಸ್ಕೃತಿಕ ಆಗೋಚರತ್ವ ಮುಂತಾದವುಗಳ ಬಗ್ಗೆ ದೀರ್ಘವಾಗಿ ಮಾತಾಡಬೇಕು. ಇವೆಲ್ಲ ಗಂಭೀರ ವಿಷಯಗಳು. ಅದಕ್ಕೇ ಅವನ್ನೆಲ್ಲ ಬಿಟ್ಟುಬಿಡೋಣ. ಸುಮ್ಮನೇ ಒಂದಿಷ್ಟು ಕತೆ ಕೇಳೋಣ. ಹೇಳಲು ಅನೇಕ ಕತೆಗಳು ಇದ್ದಾಗ ಯಾವುದರಿಂದ ಶುರು ಮಾಡುವುದು ಅಂತ ಥಟ್ಟನೆ ತಿಳಿಯುವುದಿಲ್ಲ. ಅನೇಕ ವರ್ಷ ಹಳೆಯ ಕತೆಯೊಂದು ನಮ್ಮ ಮನೆಯಲ್ಲಿ ಜೋಕು ಆಗಿ ಹೋಗಿದೆ. ಅದರಿಂದ ಆರಂಭಿಸೋಣ. ಲೋಕ ಸಂಚಾರಿಯ ಕತೆ…

ಹೃಷಿಕೇಶ ಬಹದ್ದೂರ ದೇಸಾಯಿ
ಪತ್ರಕರ್ತರು