(ಮುಂದುವರಿದ ಭಾಗ..) ಅಂಬೇಡ್ಕರ್ ಅವರ ಬರಹವನ್ನು ಓದಿದಾಗ ಪ್ರತಿಬಾರಿಯೂ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಒಂದು ವಿಷಯವೆಂದರೆ ಪರಿಶಿಷ್ಟ ಜಾತಿಗಳು ಮತ್ತು ಹಿಂದೂಗಳು ಮೂಲಭೂತವಾಗಿ ಪ್ರತ್ಯೇಕ ಸಮೂಹಗಳು ಎಂದು ಅವರು ಗುರುತಿಸಿದ್ದು. ಇವತ್ತಿನ ಹಿಂದುತ್ವದ ಅಮಲಿನಲ್ಲಿ ತೇಲುತ್ತಿರುವ ಅಥವಾ ಹಿಂದುತ್ವದ ಮಂಕು ಬೂದಿಯ ಪ್ರಭಾವಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಗಳನ್ನು ನೋಡಿದಾಗ ಈ ಬಗ್ಗೆ ಸುಮಾರು 80 ವರ್ಷಗಳಷ್ಟು ಹಿಂದೆಯೇ ಅವರು ಎಚ್ಚರಿಸಿದ್ದು ಸ್ಪಷ್ಟವಾಗಿ ಕಾಣುತ್ತದೆ. ಈ ಪುಸ್ತಕದಲ್ಲಿ ಮುಂದೆ ಬರುವ ಅಧ್ಯಾಯಗಳಲ್ಲಿ ಪರಿಶಿಷ್ಟ ಜಾತಿಗಳ ಈ ಬೇಡಿಕೆಗಳಿಗೆ ಹಿಂದೂಗಳು…

ರಾಜಲಕ್ಷ್ಮಿ ಅಂಕಲಗಿ
ಮೂಲತಃ ವಿಜಯಪುರದವರಾದ ರಾಜಲಕ್ಷ್ಮಿ ಅಂಕಲಗಿಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಒಡನಾಡಿಗಳಾಗಿದ್ದ ಇವರು ಹಲವು ಹೋರಾಟಗಳಲ್ಲಿ ಭಾಗಿಯಾಗುತ್ತಲೇ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿದ್ದಾರೆ. ನ್ಯಾಯಾಂಗ, ರಾಜಕೀಯ, ಕೌಟುಂಬಿಕ ಕಲಹಗಳ ಕುರಿತು ನಿರಂತರ ಬರೆದಿದ್ದಾರೆ. ಸದ್ಯ ಯೂಟ್ಯೂಬ್ ಚಾನೆಲ್ ಮೂಲಕವೂ ಕೌಟುಂಬಿಕ ಕಾನೂನುಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ವಾರ್ತಾಭಾರತಿ, ಈದಿನ ಸೇರಿದಂತೆ ಹಲವು ಪರ್ಯಾಯ ಮಾಧ್ಯಮಗಳ ಚರ್ಚೆಗಳಲ್ಲಿ ಮಾತನಾಡುವ ಇವರು, ತಮ್ಮ ಒಳನೋಟಗಳ ಮೂಲಕ ಗಮನ ಸೆಳೆದಿದ್ದಾರೆ.